ನರಗುಂದ

ಸಂಸದರ ನಿರ್ಲಕ್ಷ್ಯದಿಂದ ಹೋರಾಟಕ್ಕೆ ಹಿನ್ನಡೆ

ಮಹದಾಯಿಗಾಗಿ ಕಳೆದ ಮೂರು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ.

ನರಗುಂದ: ‘ಮಹದಾಯಿಗಾಗಿ ಕಳೆದ ಮೂರು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ರಾಜ್ಯ ಸರ್ಕಾರ ಕೇಂದ್ರದ ಮೇಲೆ, ಕೇಂದ್ರ ಸರ್ಕಾರ ರಾಜ್ಯದ ಮೇಲೆ ಗೂಬೆ ಕೂರಿಸುತ್ತಾ ಕಾಲಹರಣ ಮಾಡುತ್ತಿದೆ. ಮುಖ್ಯವಾಗಿ ಈ ಭಾಗದ ಸಂಸದರು ಗಮನ ಹರಿಸುತ್ತಿಲ್ಲ. ಸಂಸದರ ದಿವ್ಯ ನಿರ್ಲಕ್ಷ್ಯದಿಂದ ಇದಕ್ಕೆ ಹಿನ್ನೆಡೆಯಾಗಿದೆ’ ಎಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 864ನೇ ದಿನ ಶನಿವಾರ ಅವರು ಮಾತನಾಡಿದರು. ‘ಈ ಭಾಗದ ಶಾಸಕರು ಮಹದಾಯಿ ಬಗ್ಗೆ ನೆಪಕ್ಕೋಸ್ಕರ ಮಾತನಾಡಿದರೆ, ಧಾರವಾಡ, ಬೆಳಗಾವಿ, ಬಾಗಲಕೋಟೆ ಸಂಸದರು ನೆನಪಾದಾಗ ಮಾತನಾಡುತ್ತಾರೆ.

ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಗೋವಾದಲ್ಲಿ ಬಿಜೆಪಿ ಸರ್ಕಾರ ಇದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಇದರಿಂದ ಈಗ ಇದಕ್ಕೆ ಬಿಜೆಪಿ ನಾಯಕರ ಪ್ರಯತ್ನ ಅಗತ್ಯವಾಗಿದೆ, ಇಲ್ಲವಾದರೆ ಈ ಯೋಜನೆ ಮತ್ತೇ ನೆನೆಗುದಿಗೆ ಬೀಳುತ್ತದೆ. ಈಗಾಗಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಡಿ. 15ರ ಒಳಗಾಗಿ ಸಿಹಿ ಸುದ್ದಿ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅದು ಹುಸಿಯಾಗಬಾರದು’ ಎಂದರು.

ಹೋರಾಟ ಸಮಿತಿ ಸದಸ್ಯ ಎಸ್‌.ಬಿ.ಜೋಗಣ್ಣವರ ಮಾತನಾಡಿದ, ‘ಮಹದಾಯಿ ನೀರು ಹರಿಸುವಲ್ಲಿ ರಾಜಕೀಯ ಪ್ರತಿಷ್ಠೆ ಬಿಡಬೇಕು. ಇಲ್ಲವಾದರೆ ಮಂದಿನ ಚುನಾವಣೆ ದಿನಗಳು ಕಷ್ಟದ ದಿನಗಳು ಎಂಬುದನ್ನು ಜನಪ್ರತಿನಿಧಿಗಳು ಅರಿತುಕೊಳ್ಳಬೇಕು’ ಎಂದು ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ವೆಂಕಪ್ಪ ಹುಜರತ್ತಿ, ಚನ್ನಪ್ಪಗೌಡ ಪಾಟೀಲ, ಎಸ್‌.ಕೆ.ಗಿರಿಯಣ್ಣವರ, ಸೋಮಲಿಂಗಪ್ಪ ಆಯಟ್ಟಿ, ಹನುಮಂತ ಪಡೆಸೂರು, ಕಾಡಪ್ಪ ಕಾಕನೂರು ವಾಸು ಚವ್ಹಾಣ, ಎಲ್‌.ಬಿ.ಮುನೇನಕೊಪ್ಪ, ತೆಗ್ಗಿನಮನಿ, ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಲಕ್ಷ್ಮೇಶ್ವರ
ಲಿಂಗಾಯತರ ಬೃಹತ್‌ ಸಮಾವೇಶ ಫೆ.25ಕ್ಕೆ

‘ಪಂಚಮಸಾಲಿ ಸಮಾಜ ಬಾಂಧವರು ಸರ್ಕಾರದ ಸವಲತ್ತು ಪಡೆಯುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಸಂಘಟಿತರಾಗಬೇಕಾಗಿದೆ.

24 Jan, 2018
ಕೆಂಪು ರಾಜನಿಗೆ ಬಂತು ಭಾರಿ ಬೇಡಿಕೆ

ಲಕ್ಷ್ಮೇಶ್ವರ
ಕೆಂಪು ರಾಜನಿಗೆ ಬಂತು ಭಾರಿ ಬೇಡಿಕೆ

24 Jan, 2018
ಯುವಕರು ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು

ಮುಳಗುಂದ
ಯುವಕರು ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು

24 Jan, 2018
ಗದಗ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

ಗದಗ
ಗದಗ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

23 Jan, 2018

ಗದಗ
ಬೆಂಕಿ ಆಕಸ್ಮಿಕ: ಮಕ್ಕಳಿಗೆ ಪ್ರಾಯೋಗಿಕ ತರಬೇತಿ

ಅಗ್ನಿಶಾಮಕ ಇಲಾಖೆಯು ಈ ಕಾರ್ಯಕ್ರಮಕ್ಕಾಗಿ ಮೂರು ದಿನಗಳ ಕಾಲ ವಿದ್ಯಾರ್ಥಿಗಳ ಜತೆಗೆ ಪೂರ್ವತಯಾರಿ ಮಾಡಿಕೊಂಡಿತ್ತು

23 Jan, 2018