ಶಿಡ್ಲಘಟ್ಟ

ನೂತನ ಪಿಂಚಣಿ ಯೋಜನೆ ಮರಣ ಶಾಸನ

ನೂತನ ಪಿಂಚಣಿ ಯೋಜನೆ ಸರ್ಕಾರಿ ನೌಕರರ ಪಾಲಿಗೆ ಮರಣ ಶಾಸನವಾಗಿ ರೂಪುಗೊಂಡಿದೆ’

ಶಿಡ್ಲಘಟ್ಟ: ‘ನೂತನ ಪಿಂಚಣಿ ಯೋಜನೆ ಸರ್ಕಾರಿ ನೌಕರರ ಪಾಲಿಗೆ ಮರಣ ಶಾಸನವಾಗಿ ರೂಪುಗೊಂಡಿದೆ’ ಎಂದು ಶಾಸಕ ಎಂ.ರಾಜಣ್ಣ ಹೇಳಿದರುನಗರದಲ್ಲಿ ಶನಿವಾರ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ವತಿಯಿಂದ ಏರ್ಪಡಿಸಲಾಗಿದ್ದ ಜಾಗೃತಿ ಸಮಾವೇಶ ಹಾಗೂ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘2006ರ ಏಪ್ರಿಲ್ 1ರಿಂದ ಜಾರಿಗೆ ಬಂದಿರುವ ನೂತನ ಪಿಂಚಣಿ ಯೋಜನೆ ಅವೈಜ್ಞಾನಿಕವಾಗಿದೆ. ಇದ ರಿಂದಾಗಿ 2006ರ ನಂತರ ಕೆಲಸಕ್ಕೆ ಸೇರಿದ ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ನ್ಯಾಯಯುತವಾದ ಪಿಂಚಣಿ ದೊರೆಯುವುದಿಲ್ಲ. ಈ ಸಮಸ್ಯೆ ವಿರುದ್ಧ ಹೋರಾಡಿ ನೌಕರರಿಗೆ ನ್ಯಾಯ ಕೊಡಿಸುವುದಾಗಿ ನಮ್ಮ ಪಕ್ಷದ ಮುಖಂಡರು ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಾಂತಾ ರಾಮ ಮಾತನಾಡಿ, ‘2006ರ ಮೊದಲಿನಂತೆ ಪಿಂಚಣಿ ನೀಡುವುದರಿಂದ ಹೊರೆಯಾಗುತ್ತದೆ ಎಂದು ಸರ್ಕಾರ ಹೇಳುತ್ತದೆ. ನೌಕರರ ವೇತನದಲ್ಲಿ ಕಡಿತಗೊಳಿಸಿದ ಪಿಂಚಣಿ ಮೊತ್ತವನ್ನು ಷೇರು ಮಾರುಕಟ್ಟೆಯಲ್ಲಿ ಹೂಡುವುದರಿಂದ ಹೊರೆಯಾಗುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಸರ್ಕಾರದ ಕಣ್ಣು ತೆರೆಸಲು ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ’ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ನಾಗನಗೌಡ, ಗೌರವ ಸಲಹೆಗಾರ ಹದ್ಲಿ, ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗಜೇಂದ್ರ, ನಗರಸಭೆಯ ಪ್ರಭಾರ ಅಧ್ಯಕ್ಷೆ ಪ್ರಭಾವತಿ ಸುರೇಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ ರಘು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಕೇಶವರೆಡ್ಡಿ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ಎನ್ ಪಿಎಸ್ ನೌಕರರ ಸಂಘದ ಉಪಾಧ್ಯಕ್ಷ ತನ್ವೀರ್ ಅಹಮ್ಮದ್ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಕ್ರೀಡಾಪಟು ಮಂಚನಬೆಲೆ ಶ್ರೀನಿವಾಸ್‌ಗೆ ಸನ್ಮಾನ

ಚಿಂತಾಮಣಿ
ಕ್ರೀಡಾಪಟು ಮಂಚನಬೆಲೆ ಶ್ರೀನಿವಾಸ್‌ಗೆ ಸನ್ಮಾನ

22 Apr, 2018

ಗೌರಿಬಿದನೂರು
ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಸಲ್ಲ

ಮಹಿಳೆಯರು ನೆರೆಹೊರೆಯ ಪರಿಸರಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವ ಜೊತೆಗೆ ಆತ್ಮವಿಶ್ವಾಸ, ರಕ್ಷಣಾತ್ಮಕ ತಂತ್ರಗಳನ್ನು ರೂಢಿಸಿಕೊಳ್ಳುವುದು ಅಗತ್ಯ ಎಂದು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಎನ್.ರಾಜು ತಿಳಿಸಿದರು. ...

22 Apr, 2018

ಚಿಕ್ಕಬಳ್ಳಾಪುರ
5 ವರ್ಷಗಳಲ್ಲಿ ₹ 114 ಕೋಟಿ ಹೆಚ್ಚಳ!

ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲ್ಲೂಕಗಳಲ್ಲಿ ಒಂದಾದ ಗಡಿ ಭಾಗದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ ₹...

22 Apr, 2018
ವಿದುರಾಶ್ವತ್ಥಕ್ಕೆ ‘ಪರಂಪರೆಕೂಟ ಪ್ರವಾಸ

ಚಿಂತಾಮಣಿ
ವಿದುರಾಶ್ವತ್ಥಕ್ಕೆ ‘ಪರಂಪರೆಕೂಟ ಪ್ರವಾಸ

22 Apr, 2018

ಚಿಕ್ಕಬಳ್ಳಾಪುರ
‘ಶಕ್ತಿ’ ಪ್ರದರ್ಶಿಸಿದ ಪಕ್ಷೇತರ ಅಭ್ಯರ್ಥಿ

ಇತ್ತೀಚಿಗಷ್ಟೇ ಸದ್ದಿಲ್ಲದೆ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಸ್ಥಳೀಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ವಿ.ನವೀನ್‌ ಕಿರಣ್‌ ಅವರು ಶನಿವಾರ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ನಗರದ...

22 Apr, 2018