ಚಾಮರಾಜನಗರ

ಶಿಕ್ಷಣ ಕ್ಷೇತ್ರಕ್ಕೆ ಕೆಸಿಆರ್ ಕೊಡುಗೆ ಅಪಾರ

‘ಶಿಕ್ಷಣ ತಜ್ಞ ದಿವಂಗತ ಕೆ.ಸಿ. ರಂಗಯ್ಯ ಅವರು ಸಮಾಜದ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು’

ಚಾಮರಾಜನಗರ: ‘ಶಿಕ್ಷಣ ತಜ್ಞ ದಿವಂಗತ ಕೆ.ಸಿ. ರಂಗಯ್ಯ ಅವರು ಸಮಾಜದ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು’ ಎಂದು ಕೆ.ಸಿ.ರಂಗಯ್ಯ ಅಭಿಮಾನಿಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಆಲೂರು ಆರ್. ಮಹದೇವಯ್ಯ ಹೇಳಿದರು.

ನಗರದ ಕೆ.ಸಿ.ರಂಗಯ್ಯ ಹಾಸ್ಟೆಲ್‌ನ ಆವರಣದಲ್ಲಿ ಇತ್ತೀಚೆಗೆ ಕೆ.ಸಿ.ರಂಗಯ್ಯ ಅವರ 10ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ರಂಗಯ್ಯ ಅವರು ದಕ್ಷ ರಾಜಕಾರಣಿಯಾಗಿದ್ದರು. ಬಿ. ರಾಚಯ್ಯ ಅವರ ಜೊತೆಗೂಡಿ 60 ವರ್ಷಗಳ ಹಿಂದೆ ಹಾಸ್ಟೆಲ್ ಪ್ರಾರಂಭಿಸಿ ಸಾವಿರಾರು ಬಡ ದಲಿತ ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ. ಅವರನ್ನು ಸ್ಮರಿಸಿಕೊಳ್ಳುವುದು ಎಲ್ಲರ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ಕೆ.ಸಿ. ರಂಗಯ್ಯ ಅಭಿಮಾನಿಗಳ ಒಕ್ಕೂಟದ ಉಪಾಧ್ಯಕ್ಷ ಡಾ.ಬಿ. ಗುರುಸ್ವಾಮಿ ಮುಕ್ಕಡಹಳ್ಳಿ, ಕಾರ್ಯದರ್ಶಿ ಎಲ್. ರಾಚಯ್ಯ, ಪರಿಶಿಷ್ಟ ಜಾತಿ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಸ್. ಮಹದೇವಸ್ವಾಮಿ, ಒಕ್ಕೂಟದ ನಿರ್ದೇಶಕರಾದ ಕೃಷ್ಣಮೂರ್ತಿ, ಕೆ.ಸಿ.ಆರ್. ಕೃಷ್ಣ, ಜಿ. ಮರಿಸ್ವಾಮಿ, ಕೆ.ಆರ್. ಮಹದೇವಯ್ಯ ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಜಿಲ್ಲೆಯಲ್ಲಿ ಸಡಗರದಿಂದ ಸಂಕ್ರಾಂತಿ ಆಚರಣೆ

ಚಾಮರಾಜನಗರ
ಜಿಲ್ಲೆಯಲ್ಲಿ ಸಡಗರದಿಂದ ಸಂಕ್ರಾಂತಿ ಆಚರಣೆ

16 Jan, 2018

ಚಾಮರಾಜ ನಗರ
ರಸ್ತೆಬದಿಯಲ್ಲಿ ವ್ಯಾಪಾರ ಆರಂಭ

‘ಭಾನುವಾರ ರಾತ್ರಿ ಕೊಳ್ಳೇಗಾಲದಲ್ಲಿರುವ ಶಾಸಕ ನರೇಂದ್ರ ಅವರ ನಿವಾಸಕ್ಕೆ ತೆರಳಿ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಕೋರಿದ್ದೆವು.

16 Jan, 2018
ತರಕಾರಿ ವ್ಯಾಪಾರಿಗಳಿಗೆ ಸಂಕಟ

ಚಾಮರಾಜನಗರ
ತರಕಾರಿ ವ್ಯಾಪಾರಿಗಳಿಗೆ ಸಂಕಟ

15 Jan, 2018
ಮೊಳಗಿದ ಮಾಂಗಲ್ಯಂ ತಂತು ನಾನೇನ...

ಸುತ್ತೂರು
ಮೊಳಗಿದ ಮಾಂಗಲ್ಯಂ ತಂತು ನಾನೇನ...

15 Jan, 2018
ರಸ್ತೆಬದಿ ಅಂಗಡಿಗಳ ತೆರವು

ಚಾಮರಾಜ ನಗರ
ರಸ್ತೆಬದಿ ಅಂಗಡಿಗಳ ತೆರವು

15 Jan, 2018