ಮಂಡ್ಯ

ಸಂವಿಧಾನ; ಘನತೆ, ಸ್ವಾಭಿಮಾನದ ಪ್ರತೀಕ

‘ಭಾರತೀಯರಾದ ನಾವು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ತತ್ವಗಳ ಜೊತೆ ಜೀವನ ನಡೆಸಬೇಕು. ಇವೇ ತತ್ವಗಳ ಅಡಿಪಾಯದ ಮೇಲೆ ಅಂಬೇಡ್ಕರ್‌ ಅವರು ಸಂವಿಧಾನ ರಚನೆ ಮಾಡಿದ್ದಾರೆ.

ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯ ಉದ್ಯಾನದಲ್ಲಿರುವ ಅಂಬೇಡ್ಕರ್‌ ಪ್ರತಿಮೆ ಎದುರು ಬುದ್ಧಭಾರತ ಫೌಂಡೇಷನ್ ವತಿಯಿಂದ ಭಾನುವಾರ ನಡೆದ ಭಾರತ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಎಂ.ಬಿ.ಶ್ರೀನಿವಾಸ್ ಮಾತನಾಡಿದರು

ಮಂಡ್ಯ: ‘ಭಾರತದ ಸಂವಿಧಾನ ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ತತ್ವದಡಿ ನಿರ್ಮಾಣಗೊಂಡಿದ್ದು ಘನತೆ ಹಾಗೂ ಸ್ವಾಭಿಮಾನದ ಪ್ರತೀಕವಾಗಿದೆ’ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಆತ್ಮಾನಂದ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಉದ್ಯಾನದಲ್ಲಿ ಬುದ್ಧಭಾರತ ಫೌಂಡೇಷನ್ ವತಿಯಿಂದ ಭಾನುವಾರ ಭಾರತ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಹಾಗೂ ಸಂವಿಧಾನದ ಗ್ರಂಥಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

‘ಭಾರತೀಯರಾದ ನಾವು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ತತ್ವಗಳ ಜೊತೆ ಜೀವನ ನಡೆಸಬೇಕು. ಇವೇ ತತ್ವಗಳ ಅಡಿಪಾಯದ ಮೇಲೆ ಅಂಬೇಡ್ಕರ್‌ ಅವರು ಸಂವಿಧಾನ ರಚನೆ ಮಾಡಿದ್ದಾರೆ. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ಅಭಿವ್ಯಕ್ತಿ, ನಂಬಿಕೆ, ಸ್ವಾತಂತ್ರವನ್ನು ಭಾರತದ ಪ್ರತಿಯೊಬ್ಬ ಪ್ರಜೆಯೂ ಎತ್ತಿ ಹಿಡಿಯಬೇಕು. ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆ, ಸಹೋದರತ್ವ, ಭ್ರಾತೃತ್ವಕ್ಕಾಗಿ ಸಂವಿಧಾನ ದೇಶಕ್ಕೆ ಅರ್ಪಣೆಯಾಗಿದೆ. ಭಾರತೀಯರಾದ ಎಲ್ಲರೂ ವಿಶೇಷವಾಗಿ ವಿದ್ಯಾರ್ಥಿಗಳು ಭಾರತ ಸಂವಿಧಾನದ ಮೂಲ ಪೀಠಿಕೆಯನ್ನು ಓದಿ ಅರ್ಥಮಾಡಿಕೊಂಡು ಮುನ್ನಡೆಯಬೇಕು’ ಎಂದು ಹೇಳಿದರು.

ದಸಂಸ ರಾಜ್ಯ ಘಟಕದ ಸಂಚಾಲಕ ಎಂ.ಬಿ. ಶ್ರೀನಿವಾಸ್ ಮಾತನಾಡಿ ‘ದೇಶದ ಕೆಲವೆಡೆ ಕೋಮುವಾದ ತಾಂಡವವಾಡುತ್ತಿದ್ದು ಇದು ಪ್ರಜಾಸತ್ತಾತ್ಮಕ ತತ್ವಗಳಿಗೆ ಮಾರಕವಾಗಿದೆ. ಸಂವಿಧಾನಕ್ಕೆ ವಿರೋಧವಾಗಿ ಹೇಳಿಕೆ ನೀಡುವವರು ಕೋಮು ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಕಾನೂನು ರೀತಿಯಲ್ಲಿ ಶಿಕ್ಷಿಸುವ ಜವಾಬ್ದಾರಿಯನ್ನು ಸರ್ಕಾರಗಳು ಕೈಗೊಳ್ಳಬೇಕು. ಸಂವಿಧಾನದ ಮೂಲ ತತ್ವಗಳ ವಿರುದ್ಧ ಮಾತನಾಡುವವರ ವಿರುದ್ಧ ವಿವಿಧ ಸಂಘಟನೆಗಳು ಹೋರಾಟ ನಡೆಸಬೇಕು’ ಎಂದು ಹೇಳಿದರು.

ಬುದ್ಧಭಾರತ ಫೌಂಡೇಷನ್‌ ಅಧ್ಯಕ್ಷ, ವಕೀಲ ಜೆ.ರಾಮಣ್ಣ ಮಾತನಾಡಿ ‘ಸಂವಿಧಾನದ ಮೂಲ ಆಶಯಗಳ ಅರಿವು ಶೇ 75ರಷ್ಟು ಜನರಿಗೆ ಇಲ್ಲದೇ ಇರುವುದು ದುರದೃಷ್ಟಕರ. ಸರ್ಕಾರಗಳು ಸಂವಿಧಾನದ ತತ್ವಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಜವಾಬ್ದಾರಿ ನಿರ್ವಹಣೆ ಮಾಡಬೇಕು. ಯುವ ಸಮುದಾಯ ಸಂವಿಧಾನ ಓದುವ, ಚರ್ಚೆ ನಡೆಸುವ, ವಿಚಾರ ಸಂಕಿರಣ ಆಯೋಜನೆ ಮಾಡುವ ಮೂಲಕ ಸಂವಿಧಾನ ಅರಿಯಬೇಕು. ದೇಶದ ಸಾರ್ವಭೌಮ ತತ್ವ ಉಳಿಯಬೇಕಾದರೆ ಸಂವಿಧಾನದ ಬಗ್ಗೆ ಯುವ ಸಮುದಾಯ ಜಾಗೃತಿ ಹೊಂದಬೇಕು. ಭಾರತದ ಹಿಂದಿನ ಪರಂಪರೆ ಮತ್ತು ಸಂವಿಧಾನ ಜಾರಿಗೊಂಡ ನಂತರದ ಸ್ಥಿತಿಯ ಇತಿಹಾಸ ಅರಿಯಬೇಕು’ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರೈತಸಂಘ ಮಹಿಳಾ ಘಟಕದ ಉಪಾಧ್ಯಕ್ಷೆ ಅರುಣಾಜ್ಯೋತಿ, ಬುದ್ಧಭಾರತ ಫೌಂಡೇಷನ್‌ ಖಜಾಂಚಿ ಆಶಾಜ್ಯೋತಿ, ದಸಂಸ ಮುಖಂಡರಾದ ಬಸವರಾಜು, ನಟರಾಜು, ಪವನ್, ಮಲ್ಲಪ್ಪ ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
‘ಪಟ್ಟಣದ ಅಭಿವೃದ್ಧಿಗೆ ₹ 55 ಕೋಟಿ’

ಕೆ.ಆರ್.ಪೇಟೆ
‘ಪಟ್ಟಣದ ಅಭಿವೃದ್ಧಿಗೆ ₹ 55 ಕೋಟಿ’

19 Mar, 2018
‘ಧರ್ಮ ಬಾಂಧವ್ಯದ ಸೇತುವೆಯಾಗಲಿ’

ಭಾರತೀನಗರ
‘ಧರ್ಮ ಬಾಂಧವ್ಯದ ಸೇತುವೆಯಾಗಲಿ’

17 Mar, 2018
ಇಂದಿರಾ ಕ್ಯಾಂಟೀನ್‍ಗೆ ಡಿ.ಸಿ ಭೇಟಿ: ಪರಿಶೀಲನೆ

ಮಂಡ್ಯ
ಇಂದಿರಾ ಕ್ಯಾಂಟೀನ್‍ಗೆ ಡಿ.ಸಿ ಭೇಟಿ: ಪರಿಶೀಲನೆ

17 Mar, 2018
ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ

ಪಾಂಡವಪುರ
ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ

17 Mar, 2018

ಮಂಡ್ಯ
ಜಿಲ್ಲೆಯಲ್ಲಿ ₹ 2,277 ಕೋಟಿ ಸಾಲ ವಿತರಣೆ

'ಜಿಲ್ಲೆಯಾದ್ಯಂತ ಎಲ್ಲಾ ಬ್ಯಾಂಕ್‌ಗಳು ವಿವಿಧ ಕ್ಷೇತ್ರಗಳಲ್ಲಿ ₹ 2,277 ಕೋಟಿ ಸಾಲ ವಿತರಣೆ ಮಾಡಿದ್ದು ಶೇ 85 ರಷ್ಟು ಪ್ರಗತಿ ಸಾಧಿಸ ಲಾಗಿದೆ’ ಎಂದು...

17 Mar, 2018