ರಾಮನಗರ

ಚರಂಡಿ ಪಾಲಾಗುವ ನೀರು-: ದೂರು

‘ಹಲವು ವಾರ್ಡ್‌ಗಳಲ್ಲಿ ಆರು ದಿನಕ್ಕೆ ಒಮ್ಮೆ ನೀರನ್ನು ಬಿಡಲಾಗುತ್ತಿದೆ. ಈಚೆಗೆ ಮಳೆಯಾಗಿರುವುದರಿಂದ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಆದರೆ ಇನ್ನು ಕೆಲವೆ ತಿಂಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತದೆ

ರಾಮನಗರ : ಜಲ ಮಂಡಳಿಯಿಂದ ಹಲವು ವಾರ್ಡ್‌ಗಳಿಗೆ ಸಮರ್ಪಕವಾಗಿ ನೀರನ್ನು ಸರಬರಾಜು ಮಾಡಲು ಆಗುತ್ತಿಲ್ಲ. ನೀರಿಗಾಗಿ ಜನತೆ ಪರಿತಪಿಸುತ್ತಿದ್ದಾರೆ. ಆದರೆ ಇಲ್ಲಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮುಂಭಾಗ ನಲ್ಲಿ ಸರಿಯಿಲ್ಲದ ಕಾರಣ ದಿನದ 24 ಗಂಟೆಯೂ ನೀರು ವ್ಯರ್ಥವಾಗಿ ಚರಂಡಿ ಸೇರುತ್ತಿದೆ.

ನೀರಿನ ಟ್ಯಾಂಕ್‌ನಿಂದ ಬಂದ ಮುಖ್ಯ ನೀರಿನ ಪೈಪಿಗೆ ಈ ನಲ್ಲಿಯನ್ನು ಹಾಕಲಾಗಿದೆ. ಆದ್ದರಿಂದ ಅದರ ಮೂಲಕ ನೀರು ಪೋಲಾಗುತ್ತಿದೆ. ಈ ರಸ್ತೆಯ ಮೂಲಕ ಹಲವು ಅಧಿಕಾರಿಗಳು, ಶಿಕ್ಷಕರು, ಉಪನ್ಯಾಸಕರು, ಚುನಾಯಿತ ಪ್ರತಿನಿಧಿಗಳು ಹಾಗೂ ಜನರು ಓಡಾಡುತ್ತಾರೆ. ಆದರೆ ನಲ್ಲಿಯ ಮೂಲಕ ವ್ಯರ್ಥವಾಗುತ್ತಿರುವ ನೀರನ್ನು ನಿಲ್ಲಿಸುವ ಪ್ರಯತ್ನ ಮಾಡಿಲ್ಲ ಎಂಬ ದೂರು ಜನರದು.

ಆಕ್ರೋಶ : ‘ಕಳೆದ ಹಲವು ತಿಂಗಳಿಂದ ನೀರು ವ್ಯರ್ಥವಾರಿ ಚರಂಡಿ ಸೇರುತ್ತಿದೆ. ಸಂಬಂಧಪಟ್ಟ ಇಲಾಖೆಯವರು ಸರಿಪಡಿಸಿಲ್ಲ. ಈ ಕಾಲೇಜಿನಲ್ಲಿರುವ ಉಪನ್ಯಾಸಕರಾಗಲಿ, ಶಿಕ್ಷಕರಾಗಲಿ ಈ ಸಮಸ್ಯೆಯನ್ನು ಬಗೆಹರಿಸಬಹುದು. ಆದರೆ ಅವರಿಗೆ ಕಾಳಜಿ ಇಲ್ಲ, ನೀರನ್ನು ಉಳಿಸಿ ಎಂದು ಹೇಳುವವರು ಮೊದಲು ಇಂತಹ ನಲ್ಲಿಗಳನ್ನು ಸರಿಪಡಿಸಬೇಕು’ ಎನ್ನುತ್ತಾರೆ ನಿವಾಸಿ ಶಿವಶಂಕರ್.

‘ಹಲವು ವಾರ್ಡ್‌ಗಳಲ್ಲಿ ಆರು ದಿನಕ್ಕೆ ಒಮ್ಮೆ ನೀರನ್ನು ಬಿಡಲಾಗುತ್ತಿದೆ. ಈಚೆಗೆ ಮಳೆಯಾಗಿರುವುದರಿಂದ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಆದರೆ ಇನ್ನು ಕೆಲವೆ ತಿಂಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತದೆ. ಕೂಡಲೆ ಜಲ ಮಂಡಳಿ ಅಧಿಕಾರಿಗಳು ನಲ್ಲಿ ಹಾಗೂ ಪೈಪ್‌ ಅನ್ನು ಸರಿಪಡಿಸಬೇಕು’ ಎಂದು ಗೃಹಿಣಿ ಕಾವ್ಯ ಹೇಳಿದರು.

‘ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವುದನ್ನು ನಮ್ಮ ಜನರು ಕಲಿಯಬೇಕು. ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಮೇಲಿನ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ನಗರ ವ್ಯಾಪ್ತಿಯಲ್ಲಿ ಈ ರೀತಿ ನಲ್ಲಿ ಸರಿ ಇಲ್ಲದೆ ನೀರು ವ್ಯರ್ಥವಾಗುತ್ತಿದೆ. ಕೂಡಲೇ ಇಂಥವುಗಳನ್ನು ಗುರುತಿಸಿ, ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ನಿವಾಸಿ ರಾಜಶೇಖರಯ್ಯ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಬೇಸಿಗೆ ಶಿಬಿರಗಳಲ್ಲಿ ಚಿಣ್ಣರ ಕಲರವ

ರಾಮನಗರ
ಬೇಸಿಗೆ ಶಿಬಿರಗಳಲ್ಲಿ ಚಿಣ್ಣರ ಕಲರವ

20 Apr, 2018

ಮಾಗಡಿ
‘ವಿವೇಚನೆಯಿಂದ ಮತ ಚಲಾಯಿಸಿ’

ಆಮಿಷಕ್ಕೆ ಮರುಳಾಗದೆ, ಪ್ರಾಮಾಣಿಕವಾಗಿ ವಿವೇಚನೆಯಿಂದ ಮತ ಚಲಾಯಿಸಿ ಪ್ರಜಾಪ್ರಭುತ್ವ ಉಳಿಸಿ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪುಟ್ಟಸ್ವಾಮಿ ತಿಳಿಸಿದರು.

20 Apr, 2018

ಮಾಗಡಿ
‘ಎಚ್‌ಡಿಕೆ ಕೆಲಸಗಳೇ ಗೆಲುವಿಗೆ ಶ್ರೀರಕ್ಷೆ’

ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ ಅವರು ಚುನಾವಣಾ ಅಧಿಕಾರಿ ಕೃಷ್ಣಮೂರ್ತಿ, ಸಹಾಯಕ ಚುನಾವಣಾಧಿಕಾರಿ ಎನ್.ಶಿವಕುಮಾರ್ ಸಮ್ಮುಖದಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದರು.

20 Apr, 2018
ಮನುಷ್ಯ ಧರ್ಮದ ಸ್ಥಾಪನೆಗೆ ಕ್ರಮ

ಕನಕಪುರ
ಮನುಷ್ಯ ಧರ್ಮದ ಸ್ಥಾಪನೆಗೆ ಕ್ರಮ

19 Apr, 2018

ಚನ್ನಪಟ್ಟಣ
ಅತ್ಯಾಚಾರಿಗಳಿಗೆ ಶಿಕ್ಷೆ ನೀಡಲು ಆಗ್ರಹ

ಜಮ್ಮು ಕಾಶ್ಮೀರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಅಮಾನುಷವಾಗಿ ಕೊಲೆ ಮಾಡಿರುವ ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡುವಂತೆ ಆಗ್ರಹಿಸಿ ವಿವಿಧ ಮುಸ್ಲಿಂ ಸಂಘಟನೆಯ ಪದಾಧಿಕಾರಿಗಳು...

18 Apr, 2018