ಹಗರಿಬೊಮ್ಮನಹಳ್ಳಿ

ಡಿ.25 ರೊಳಗೆ ಮಾಲವಿ ಜಲಾಶಯಕ್ಕೆ ಚಾಲನೆ

ಮಾಲವಿ ಜಲಾಶಯಕ್ಕೆ ಶಾಶ್ವತ ನೀರೊದಗಿಸುವ ಯೋಜನೆಗೆ ಡಿಸೆಂಬರ್ 25 ರೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ಕೊಡಿಸಲಾಗುವುದು

ಹಗರಿಬೊಮ್ಮನಹಳ್ಳಿ: ಮಾಲವಿ ಜಲಾಶಯಕ್ಕೆ ಶಾಶ್ವತ ನೀರೊದಗಿಸುವ ಯೋಜನೆಗೆ ಡಿಸೆಂಬರ್ 25 ರೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ಕೊಡಿಸಲಾಗುವುದು ಎಂದು ಶಾಸಕ ಎಸ್.ಭೀಮಾನಾಯ್ಕ ಹೇಳಿದರು.

ಪಟ್ಟಣದಲ್ಲಿ ತಾಲ್ಲೂಕು ಕುರುಬರ ಸಮಾಜ ಭಾನುವಾರ ಹಮ್ಮಿಕೊಂಡಿದ್ದ ಕನಕದಾಸರ 530ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ಯೋಜನೆಗೆ ಸರ್ಕಾರ ₹136ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಟೆಂಡರ್‌ಗೆ ಅರ್ಜಿ ಸಲ್ಲಿಸಲು ಡಿ.1 ಕೊನೆಯ ದಿನವಾಗಿದೆ ಎಂದರು.

ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬುಡ್ಡಿ ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್ಟಿ) ವರ್ಗಕ್ಕೆ ಸೇರಿಸಬೇಕು. ಸಮಾಜದ ಪೀಠಾಧೀಶರ ನೇತೃತ್ವದಲ್ಲಿ ಹೋರಾಟ ರೂಪಿಸಿ, ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಕಾಗಿನೆಲೆ ಸಂಸ್ಥಾನ ಪೀಠದ ಗುರು ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕನಕದಾಸರ ಭಾವಚಿತ್ರ ಮೆರವಣಿಗೆಯಲ್ಲಿ ಸೌಂಡ್‌ ಮ್ಯೂಸಿಕ್ ಬದಲಾಗಿ ಕನಕದಾಸರ ಸಾಹಿತ್ಯದ ಪುಸ್ತಕಗಳನ್ನು ವಿತರಿಸಬೇಕಿದೆ. ಸಮಾಜವನ್ನು ರೊಚ್ಚಿಗೆಬ್ಬಿಸುವ ಶಬ್ದಗಳ ಬಳಕೆಯನ್ನು ಕನಕಗುರು ಪೀಠ ಸಹಿಸುವುದಿಲ್ಲ. ದಾಸರು ತೊಡೆ ತಟ್ಟುವ ಸಂಸ್ಕೃತಿಯವರಲ್ಲ, ಅವರು ಪ್ರೀತಿಯಿಂದ ಸಮಾಜವನ್ನು ಕಟ್ಟಿದರು ಎಂದು ಮಾರ್ಮಿಕವಾಗಿ ನುಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷೆ ಸುಶೀಲಾ, ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಾನಾಯ್ಕ, ಸದಸ್ಯರಾದ ಕೋಗಳಿ ಶ್ಯಾಮಲಾ , ಸೊನ್ನದ ಪ್ರಭಾಕರ, ಸಿ.ಗೀತಾ, ಮುಖಂಡರಾದ ಕುರಿ ಶಿವಮೂರ್ತಿ, ಮುಟುಗನಹಳ್ಳಿ ಕೊಟ್ರೇಶ್, ಕನಕ ನೌಕರರ ಸಂಘದ ಅಧ್ಯಕ್ಷ ದೇವಪ್ಪ, ಎಪಿಎಂಸಿ ಅಧ್ಯಕ್ಷ ಅಳವಂಡಿ ವೀರಣ್ಣ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಕೆ.ಬಸವರಾಜ, ಮೈಲಾರಪ್ಪ, ಸದ್ಯೋಜಾತಪ್ಪ, ರಾಮಣ್ಣ, ಮೈಲಾರಪ್ಪ, ಆರ್.ವೆಂಕಟೇಶ, ಪರಶುರಾಮ, ಭರ್ಮಪ್ಪ, ವರದಾಪುರ ಕುಮಾರ, ಕನಕ ಯುವಸೇನೆ ಅಧ್ಯಕ್ಷ ದೊಡ್ಡಬಸಪ್ಪ, ಮೆಟ್ರಿಗೋಣೆಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪಾರಿ ಬಸವರಾಜ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಜಿ.ಪರಮೇಶ್ವರ್, ಪಿಡಬ್ಲ್ಯುಡಿ ಎಇಇ ಪ್ರಭಾಕರ ಶೆಟ್ಟಿ ಇದ್ದರು. ಇದಕ್ಕೂ ಮುನ್ನ ತಹಶೀಲ್ದಾರ್ ಕಚೇರಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

Comments
ಈ ವಿಭಾಗದಿಂದ ಇನ್ನಷ್ಟು

ಕಂಪ್ಲಿ
ಸಶಸ್ತ್ರ ಸೇನಾ ಪಡೆ ಪಥ ಸಂಚಲನ

ಕಂಪ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಬಂದಿರುವ ಇಂಡೋ ಟಿಬೆಟ್ ಗಡಿ ರಕ್ಷಣಾ ಪಡೆಯ ಸುಮಾರು 100 ಯೋಧರು ಮತ್ತು ಸ್ಥಳೀಯ...

23 Apr, 2018
ಮಾತಿಲ್ಲದವರಿಗೆ ಕೂಡಿ ಬಂತು ಕಂಕಣ ಬಲ

ಕೊಟ್ಟೂರು
ಮಾತಿಲ್ಲದವರಿಗೆ ಕೂಡಿ ಬಂತು ಕಂಕಣ ಬಲ

23 Apr, 2018
ಪಂಜಿನ ಮೆರವಣಿಗೆ ಮೂಲಕ ಮತದಾರ ಜಾಗೃತಿ

ಕುರುಗೋಡು
ಪಂಜಿನ ಮೆರವಣಿಗೆ ಮೂಲಕ ಮತದಾರ ಜಾಗೃತಿ

23 Apr, 2018

ಕುರುಗೋಡು
‘ಕಾಂಗ್ರೆಸ್ ಗೆ ಜನಬಲ ಬಿಜೆಪಿಗೆ ಹಣ ಬಲ’

ಟಿ.ಎಚ್.ಸುರೇಶ್ ಬಾಬು ಕಳೆದ ಎರಡು ಅವಧಿಯಲ್ಲಿಶಾಸಕರಾಗಿ ಆಯ್ಕೆಯಾಗಿದ್ದರೂ ಕಂಪ್ಲಿ ಕ್ಷೇತ್ರದಲ್ಲಿ ಯಾವುದೇ ಶಾಶ್ವತ ಅಭಿವೃದ್ಧಿ ಕಾರ್ಯಗಳು ಕೈಗೊಂಡಿಲ್ಲ ಎಂದು ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ...

23 Apr, 2018

ಮರಿಯಮ್ಮನಹಳ್ಳಿ
‘ಆಟದಲ್ಲಿ ಸೋಲು ಗೆಲವು ಮುಖ್ಯವಲ್ಲ’

ಸ್ಥಳೀಯ ರೆಡ್‌ಬಾಯ್ಸ್ ಕ್ರಿಕೆಟ್ ಕ್ಲಬ್‌ನ ಸದಸ್ಯರು ಶನಿವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕ್ರಿಕೆಟ್‌ ಟೂರ್ನಿಯ ಅಂತಿಮ ಪಂದ್ಯದಲ್ಲಿ ರೆಡ್‌ ಬಾಯ್ಸ್‌ ತಂಡದವರು ಜೂನಿಯರ್‌ ವಾಲ್ಮೀಕಿ...

22 Apr, 2018