ಚಿಕ್ಕಮಗಳೂರು

ಕಾರುಗಳ ಅಬ್ಬರ, ಪ್ರೇಕ್ಷಕರು ತತ್ತರ

ಕಾಫಿ ತೋಟಗಳು ಕಾರ್ಮಿಕರು, ಸುತ್ತಮುತ್ತಲಿನ ಊರುಗಳ ಜನರು ಕುಟುಂಬ ಸಮೇತರಾಗಿ ರ‍್ಯಾಲಿ ವೀಕ್ಷಣೆಗೆ ಬಂದಿದ್ದರು. ಮರಗಳು, ತೋಟದಲ್ಲಿನ ದಿಣ್ಣೆಗಳು, ಗದ್ದೆ ಬದುಗಳು, ಕರೆ ಏರಿಗಳ ಮೇಲೆ ನಿಂತು ರ‍್ಯಾಲಿಯನ್ನು ಕಣ್ತುಂಬಿಕೊಂಡರು.

ಚೇತನಹಳ್ಳಿ ಎಸ್ಟೇಟ್‌ ಕೆರೆ ಏರಿ ಬಳಿ ಕಾರೊಂದು ದೂಳೆಬ್ಬಿಸಿಕೊಂಡು ಶರವೇಗದಲ್ಲಿ ಸಾಗಿದ ಪರಿ

ಚಿಕ್ಕಮಗಳೂರು: ಕಾಫಿ ಕಣಿವೆಯಲ್ಲಿ ನಡೆದ ಏಷ್ಯಾ ಪೆಸಿಫಿಕ್‌ ರ‍್ಯಾಲಿಯ ಕೊನೆ ದಿನವಾದ ಭಾನುವಾರ ಕಾಫಿ ಎಸ್ಟೇಟ್‌ಗಳಲ್ಲಿ ಕಾರುಗಳ ಅಬ್ಬರ ನೋಡಿ ಪ್ರೇಕ್ಷಕರು ಸಂಭ್ರಮಿಸಿದರು.

ಮೋಟಾರ್‌್ಸ ಸ್ಪೋರ್ಟ್ಸ್‌ ಕ್ಲಬ್‌ ಆಫ್‌ ಚಿಕ್ಕಮಗಳೂರು (ಎಂಎಸ್‌ಸಿಸಿ), ಕಾಫಿ ಡೇ ಪ್ರಾಯೋಜಕತ್ವದಲ್ಲಿ ಮೂರು ದಿನ ನಡೆದ ಈ ರ‍್ಯಾಲಿಯಲ್ಲಿ ಕಾರುಗಳ ಓಟ ಕಂಡು ಪ್ರೇಕ್ಷಕರು ಚಕಿತರಾದರು. ರ‍್ಯಾಲಿಯ ಕೊನೆ ದಿನವಾದ ಭಾನುವಾರ ಏಪಿಆರ್‌ಸಿ ಕೊನೆಯ ನಾಲ್ಕು ಹಂತಗಳು ಮತ್ತು ಕಾಫಿ 500 ರ‍್ಯಾಲಿ ನಡೆದವು.

ಮೂಡಿಗೆರೆ ತಾಲ್ಲೂಕಿನ ಜಾಗೀರ ಮನೆ, ಚಂದ್ರಾಪುರ, ಚಟ್ನಹಳ್ಳಿ ಕಾಫಿ ತೋಟಗಳ ಓರೆಕೋರೆ ಮಾರ್ಗದಲ್ಲಿ ದೇಶವಿದೇಶಗಳ ಚಾಲಕರು ಕಾರು ಗಳನ್ನು ಮಿಂಚಿನ ವೇಗದಲ್ಲಿ ಚಲಾ ಯಿಸಿ ಸಂಚಲನ ಮೂಡಿಸಿದರು. ಬೆಳಿಗ್ಗೆ 9.30ರ ಹೊತ್ತಿಗೆ ರ‍್ಯಾಲಿ ಆರಂಭವಾಯಿತು.

ಶರವೇಗದಲ್ಲಿ ದೂಳೆಬ್ಬಿಸಿಕೊಂಡು ಕಾರುಗಳ ಸಾಗಿದ ಪರಿಯನ್ನು ಪ್ರೇಕ್ಷಕರು ರೆಪ್ಪೆ ಮಿಟುಕಿಸದಂತೆ ಕಣ್ತುಂಬಿಕೊಂಡರು. ದೇಶದ ಅಗ್ರ ಶ್ರೇಯಾಂಕದ ಚಾಲಕ ಗೌರವ್‌ಗಿಲ್‌–ಬೆಲ್ಜಿಯಂನ ಸಹಚಾಲಕ ಸ್ಟೀಫನ್‌ ಪ್ರೆವೊಟ್ ಜೋಡಿ ಫ್ಯಾಬಿಯಾನ್‌ ಚಲಾಯಿಸಿದ ಸ್ಕೋಡಾ ಫ್ಯಾಬಿಯಾ ಆರ್‌–5 ಕಾರಿನ ಕಲರವಕ್ಕ ಮಾರು ಹೋಗದವರೇ ಇರಲಿಲ್ಲ. ಎಲ್ಲರೂ ಗೌರವ್‌ ಹೆಸರು ಗುನುಗುತ್ತಿದ್ದರು. ಚಟ್ಟನಹಳ್ಳಿಯ ಕಾಫಿ ಎಸ್ಟೇಟ್‌ನ ತಿರುವು ಮುರುವು, ಕೆರೆ ದಿಣ್ಣೆ, ಇಳಿಜಾರು, ತಿರುವು, ಗದ್ದೆ ಸಾಲಿನ ಬದುವಿನ ಕಿರಿದಾದ ಮಾರ್ಗದಲ್ಲಿ ಕಾರುಗಳು ನುಗ್ಗುವುದನ್ನು ಕಂಡು ಪ್ರೇಕ್ಷಕರು ನಿಬ್ಬೆರಗಾದರು.

ಕಾಫಿ ತೋಟಗಳು ಕಾರ್ಮಿಕರು, ಸುತ್ತಮುತ್ತಲಿನ ಊರುಗಳ ಜನರು ಕುಟುಂಬ ಸಮೇತರಾಗಿ ರ‍್ಯಾಲಿ ವೀಕ್ಷಣೆಗೆ ಬಂದಿದ್ದರು. ಮರಗಳು, ತೋಟದಲ್ಲಿನ ದಿಣ್ಣೆಗಳು, ಗದ್ದೆ ಬದುಗಳು, ಕರೆ ಏರಿಗಳ ಮೇಲೆ ನಿಂತು ರ‍್ಯಾಲಿಯನ್ನು ಕಣ್ತುಂಬಿಕೊಂಡರು. ಕಾರುಗಳ ಓಟವನ್ನು ರ‍್ಯಾಲಿ ಪ್ರಿಯರು, ಅಭಿಮಾನಿಗಳು, ಪ್ರೇಕ್ಷಕರು ಮೊಬೈಲ್‌ ಕ್ಯಾಮೆರಾಗಳಲ್ಲಿ ಸೆರೆ ಹಿಡಿದರು. ಇನ್ನು ಕೆಲವರು ವಿಡಿಯೊ ಮಾಡಿಕೊಂಡರು. ಕೆಲವರು ದೂರದಿಂದಲ್ಲೇ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಯುದ್ಧ ವಿಮಾನ, ರಾಕೆಟ್‌ಗಳಂತೆ ಶಬ್ದ ಹೊರಡಿಸುತ್ತಾ, ಮುಗಿಲೆತ್ತರಕ್ಕೆ ದೂಳೆ ಬ್ಬಿಸಿ ತೋಟದೊಳಗಿನ ಮಾರ್ಗದಲ್ಲಿ ಕಾರುಗಳು ನುಗ್ಗಿ ಪ್ರೇಕ್ಷಕರಿಗೆ ಮುದ ನೀಡಿದವು.

ಕಾಫಿ 500ನಲ್ಲಿ ಭಾಗವಹಿಸಿದ್ದ ಕೇರಳದ ಕಾಸರಗೋಡಿನ ಮೊಹಿಯುದ್ದಿನ್‌ ಷರೀಫ್‌ ಮತ್ತು ಮುಜಿಬ್‌ ರೆಹಮಾನ್‌ ಜೋಡಿಯ ಕಾರು ಚಟ್ಟನಹಳ್ಳಿಯ ಹೊಂಡದ ಬಳಿ ಇಳಿಜಾರಿನಲ್ಲಿ ತಗ್ಗಿಗೆ ಇಳಿಯಿತು. ಚಾಲಕ ಕೌಶಲದಿಂದ ಮುನ್ನುಗ್ಗಿಸಿ ಕಾರನ್ನು ತಗ್ಗು ತಡಾಯಿಸಿದ ಪರಿಗೆ ಪ್ರೇಕ್ಷಕರು ಆಶ್ಚರ್ಯ ಚಕಿತರಾದರು. ಇದೇ ಕಾರು ಚೀಕನಹಳ್ಳಿಯ ಬಳಿ ಹಿಂದಿನ ಚಕ್ರ ವಾರೆಯಾಗಿ ದೋಷ ಕಾಣಿಸಿಕೊಂಡು ನಿಂತಿತು.

ಚಾಲಕ ಶೇಖ್‌ ರೆಹಮಾನ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಹಿಂದಿನ ಚಕ್ರದ ಬ್ಯಾಲೆನ್ಸ್‌ ವೈರ್‌ ತುಂಡಾಗಿ ಸಮಸ್ಯೆಯಾಗಿದೆ. ಸುತ್ತು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ಚಾಲಕರ ಚಮತ್ಕಾರಗಳಿಗೆ ಪ್ರೇಕ್ಷಕರು ತಲೆದೂಗಿದರು. ಮಕ್ಕಳಿಂದ ಮುದುಕರವರೆಗೂ ಎಲ್ಲ ವಯೋ ಮಾನದವರು ರ‍್ಯಾಲಿ ವೀಕ್ಷಣೆಗೆ ಬಂದಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರು ರ‍್ಯಾಲಿಯನ್ನು ವೀಕ್ಷಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಬಾಳೆಹೊನ್ನೂರು
ಕಾಂಗ್ರೆಸ್‌ನಿಂದ ಬಡವರ ಪರ ಯೋಜನೆ ಜಾರಿ

‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರು, ನಿರ್ಗತಿಕರು, ಕೃಷಿಕರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಜನತೆ ಅದನ್ನು ಗುರುತಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಿ ದ್ದಾರೆ’...

24 Apr, 2018
ಸಮಯ ಪ್ರಜ್ಞೆ ಮೆರೆದ ಅರಣ್ಯ ಸಿಬ್ಬಂದಿ

ಚಿಕ್ಕಮಗಳೂರು
ಸಮಯ ಪ್ರಜ್ಞೆ ಮೆರೆದ ಅರಣ್ಯ ಸಿಬ್ಬಂದಿ

24 Apr, 2018

ಚಿಕ್ಕಮಗಳೂರು
ಋಣ ತೀರಿಸಲು ಅವಕಾಶ ನೀಡಿ

‘ಅಭಿವೃದ್ಧಿಯನ್ನೇ ಕಾರ್ಯಸೂಚಿಯಾಗಿಟ್ಟುಕೊಂಡು ಈ ಬಾರಿ ಚುನಾವಣೆ ಎದುರಿಸುತ್ತಿದ್ದೇವೆ. ಜಿಲ್ಲೆಯ ಋಣ ತೀರಿಸುವ ಸಂಕಲ್ಪ ಮಾಡಿದ್ದು, ಅದಕ್ಕೆ ಅವಕಾಶ ನೀಡಿ’ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ...

24 Apr, 2018

ಚಿಕ್ಕಮಗಳೂರು
6 ಮಂದಿಯಿಂದ 11 ನಾಮಪತ್ರ ಸಲ್ಲಿಕೆ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಕಾಂಗ್ರೆಸ್‌ನ ಬಿ.ಎಲ್‌.ಶಂಕರ್‌ ಅವರು ನಾಲ್ಕು, ಜೆಡಿಎಸ್‌ನ ಬಿ.ಎಚ್‌.ಹರೀಶ್‌ ಅವರು ಮೂರು, ಪಕ್ಷೇತರ ಎರಡು, ಶಿವಸೇನೆಯ ಬಿ.ವಿ.ರಂಜಿತ್‌, ಎಂಇಪಿಯ ನೂರುಲ್ಲಾಖಾನ್‌...

24 Apr, 2018
ಜೆಡಿಎಸ್‌ ಗೆಲುವಿಗೆ ಶ್ರಮಿಸಿ: ಧರ್ಮೇಗೌಡ

ಚಿಕ್ಕಮಗಳೂರು
ಜೆಡಿಎಸ್‌ ಗೆಲುವಿಗೆ ಶ್ರಮಿಸಿ: ಧರ್ಮೇಗೌಡ

24 Apr, 2018