ಚಿತ್ತಾಪುರ

ಹೈದರಾಬಾದ್-ಕೊಲ್ಲಂ ವಿಶೇಷ ರೈಲು ನಿಲುಗಡೆ: ಸಂಭ್ರಮ

ರೆ ರಾಜ್ಯ ತೆಲಂಗಾಣದ ಹೈದರಾಬಾದಿನಿಂದ ಕೊಲ್ಲಮ್ ವರೆಗೆ ಪ್ರಥಮ ಬಾರಿಗೆ ಸಂಚರಿಸುತ್ತಿರುವ ಶಬರಿಮಲ (ಆದೋನಿ ಮಾರ್ಗ) ವಿಶೇಷ ರೈಲು ಶನಿವಾರ ರಾತ್ರಿ ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಜನರು ಸಂಭ್ರಮದಿಂದ ಸ್ವಾಗತಿಸಿಕೊಂಡರು.

ಚಿತ್ತಾಪುರ: ನೆರೆ ರಾಜ್ಯ ತೆಲಂಗಾಣದ ಹೈದರಾಬಾದಿನಿಂದ ಕೊಲ್ಲಮ್ ವರೆಗೆ ಪ್ರಥಮ ಬಾರಿಗೆ ಸಂಚರಿಸುತ್ತಿರುವ ಶಬರಿಮಲ (ಆದೋನಿ ಮಾರ್ಗ) ವಿಶೇಷ ರೈಲು ಶನಿವಾರ ರಾತ್ರಿ ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಜನರು ಸಂಭ್ರಮದಿಂದ ಸ್ವಾಗತಿಸಿಕೊಂಡರು.

ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಪಟ್ಟಣದ ಅನೇಕ ಮುಖಂಡರು, ಯುವಕರು, ರಾಜಕೀಯ ಕಾರ್ಯಕರ್ತರು ಜಯಘೋಷದೊಂದಿಗೆ ಸ್ವಾಗತಿಸಿಕೊಂಡು ರೈಲು ಚಾಲಕರನ್ನು ಕೆಳಗಿಸಿ ಸನ್ಮಾನಿಸಿ, ಸಂಭ್ರಮಿಸಿದರು.

‘ಶಬರಿಮಲ ವಿಶೇಷ ರೈಲು ಪಟ್ಟಣದ ನಿಲ್ದಾಣದಲ್ಲಿ ನಿಲುಗಡೆ ಮಾಡುತ್ತಿರುವುದರಿಂದ ಪಟ್ಟಣದ ವ್ಯಾಪಾರಸ್ಥರಿಗೆ, ಉದ್ಯಮಿಗಳಿಗೆ, ಸಾರ್ವಜನಿಕ ಪ್ರಯಾಣಿಕರಿಗೆ ತುಂಬಾ ಪ್ರಯೋಜನವಾಗಲಿದೆ’ ಎಂದು ಮುಖಂಡರಾದ ಗೋಪಾಲ ರಾಠೋಡ್, ಪ್ರವೀಣ ಪವಾರ್ ಅವರು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಬಾಲಾಜಿ ಬುರಬುರೆ, ಮಲ್ಲಿಕಾರ್ಜುನ ಇಜೇರಿ, ಅಕ್ಕಮಾಹದೇವಿ, ವಿನೋದ ಪವಾರ್, ರೂಪೇಶ, ವಿನೋದ ರಾಠೋಡ್, ಅಶ್ವಥ್ ರಾಠೋಡ್, ಚಂದ್ರು ಕಾಳಗಿ, ಶಿವರಾಂ ಚವ್ಹಾಣ್, ಯಮನಪ್ಪ ಬೋಸಗಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಕಲಬುರ್ಗಿ
ಕಾಂಗ್ರೆಸ್ ನಿರಾಳ, ಬಿಜೆಪಿಗೆ ಬಂಡಾಯದ ಬಿಸಿ

ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನೊಂದೇ ದಿನ ಬಾಕಿ ಉಳಿದಿದೆ. ಎಲ್ಲ ಪಕ್ಷಗಳೂ ಅಭ್ಯರ್ಥಿಗಳ ಹೆಸರು ಆಖೈರುಗೊಳಿಸಿದ್ದು, ಕಾಂಗ್ರೆಸ್‌– ಜೆಡಿಎಸ್‌ಗಿಂತ ಬಿಜೆಪಿಗೆ ಬಂಡಾಯದ ಬಿಸಿ...

24 Apr, 2018

ಕಲಬುರ್ಗಿ
15 ಸಾವಿರ ಜನರಿಗೆ ವಿವಿ ಪ್ಯಾಟ್ ಮಾಹಿತಿ

‘ಜಿಲ್ಲಾ ಸ್ವೀಪ್ ಸಮಿತಿಯಿಂದ ಒಂದೇ ದಿನದಲ್ಲಿ ಸುಮಾರು 15 ಸಾವಿರ ಜನರಿಗೆ ವಿವಿ ಪ್ಯಾಟ್ ಯಂತ್ರದ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ’ ಎಂದು ಈಶಾನ್ಯ ವಲಯ...

24 Apr, 2018

ಅಫಜಲಪುರ
30 ವರ್ಷ ಬಿಜೆಪಿ ಟೀಕೆ ಮಾಡಿದವರಿಗೆ ಟಿಕೆಟ್: ರಾಜೂಗೌಡ ವಿಷಾದ

‘ಬಿಜೆಪಿಯಲ್ಲಿ ಪಕ್ಷಕ್ಕಾಗಿ ದುಡಿದವರಿಗೆ, ಒಳ್ಳೆಯವರಿಗೆ ಕಾಲವಿಲ್ಲದಂತಾಗಿದೆ. ಪಕ್ಷವನ್ನು ಯಾರು ಟೀಕೆ ಮಾಡುತ್ತಾರೋ ಅಂತಹವರಿಗೆ ಮಣೆ ಹಾಕುವ ದುಸ್ಥಿತಿ ಬಂದೊದಗಿದೆ. ಮಾಲೀಕಯ್ಯ ಗುತ್ತೇದಾರ ಬಿಜೆಪಿಯನ್ನು ನಿರಂತರವಾಗಿ...

24 Apr, 2018

ಆಳಂದ
ಕಾಂಗ್ರೆಸ್‌ ಸೇರಿ ಐವರು ನಾಮಪತ್ರ ಸಲ್ಲಿಕೆ

ಆಳಂದ ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧೆ ಬಯಸಿ ಸೋಮವಾರ ಐವರು ವಿವಿಧ ಪಕ್ಷದ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯು ಏ.17ರಿಂದ ಆರಂಭವಾದರೂ ಈವರೆಗೆ ಯಾವ...

24 Apr, 2018

ಕಲಬುರ್ಗಿ
ಪರಿಸರ ಸಂರಕ್ಷಣೆ; ನಮ್ಮೆಲ್ಲರ ಹೊಣೆ

‘ಪ್ರಪಂಚದ ಪ್ರತಿ ಜೀವಿಯ ಆರೋಗ್ಯ ನಮ್ಮ ಪರಿಸರದ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ಅದರ ಸಂರಕ್ಷಣೆ ಮಾಡದೆ ಹೋದರೆ ಮಾನವ ಕುಲಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ’...

24 Apr, 2018