ಕೆಜಿಎಫ್‌

₹ 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ

‘ಗ್ರಾಮ ವಿಕಾಸ ಯೋಜನೆಗೆ ಒಳಪಡುವ ಗ್ರಾಮಗಳಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಸಂಬಂಧಪಟ್ಟ ಜನಪ್ರತಿನಿಧಿಗಳು ತಯಾರಿಸಿಕೊಡಬೇಕು. ಅದನ್ನು ಅನುಮೋದನೆಗೆ ಕಳಿಸಲಾಗುವುದು’

ಕೆಜಿಎಫ್‌: ‘ಗ್ರಾಮ ವಿಕಾಸ ಯೋಜನೆಯಡಿ ಕೆಜಿಎಫ್ ವಿಧಾನಸಭಾಕ್ಷೇತ್ರದಲ್ಲಿ ನಾಲ್ಕು ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳನ್ನು ₹ 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು’ ಎಂದು ಶಾಸಕಿ ವೈ.ರಾಮಕ್ಕ ಹೇಳಿದರು. ಸಮೀಪದ ದಾಯಮಾನಗುಡಿಸಲು ಗ್ರಾಮದಲ್ಲಿ ಶನಿವಾರ ಮಾರಿಕುಪ್ಪಂ ಗ್ರಾಮ ಪಂಚಾಯಿತಿ ಏರ್ಪಡಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು.

‘ಕಳ್ಳಿಕುಪ್ಪ (ಟಿ.ಗೊಲ್ಲಹಳ್ಳಿ ಪಂಚಾಯಿತಿ), ದೊಡ್ಡಗಾನಹಳ್ಳಿ (ಜಕ್ಕರಸನಕುಪ್ಪ ಪಂಚಾಯಿತಿ), ಜೆ.ಕೆ.ಪುರಂ (ಶ್ರೀನಿವಾಸಸಂದ್ರ ಪಂಚಾಯಿತಿ) ಮತ್ತು ಮಾರಿಕುಪ್ಪಂ ಪಂಚಾಯಿತಿಯ ದಾಯಮಾನಗುಡಿಸಲು ಗ್ರಾಮವನ್ನು ಈ ಯೋಜನೆಗೆ ಅಳವಡಿಸಿಕೊಳ್ಳಲಾಗಿದೆ’ ಎಂದರು.‌

‘ಗ್ರಾಮ ವಿಕಾಸ ಯೋಜನೆಗೆ ಒಳಪಡುವ ಗ್ರಾಮಗಳಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಸಂಬಂಧಪಟ್ಟ ಜನಪ್ರತಿನಿಧಿಗಳು ತಯಾರಿಸಿಕೊಡಬೇಕು. ಅದನ್ನು ಅನುಮೋದನೆಗೆ ಕಳಿಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ ತಿಳಿಸಿದರು.

ಮುಖಂಡ ವೈ.ಸಂಪಂಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯರಾಮರೆಡ್ಡಿ, ಉಪಾಧ್ಯಕ್ಷೆ ಗೀತಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾಗ್ಯಲಕ್ಷ್ಮೀ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಬು ಶೇಷಾದ್ರಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಹರೀಶ್‌, ಲಕ್ಷ್ಮಮ್ಮ, ಬಾಬು, ಅಬ್ದುಲ್‌ ಖಾದರ್‌ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಬೆಳೆಗೆ ಗೊಬ್ಬರವಾಗಿ ಹೊಂಗೆ ಹೂ ಬಳಕೆ

ಶ್ರೀನಿವಾಸಪುರ
ಬೆಳೆಗೆ ಗೊಬ್ಬರವಾಗಿ ಹೊಂಗೆ ಹೂ ಬಳಕೆ

20 Apr, 2018

ಕೋಲಾರ
ಜವಾಬ್ದಾರಿ ಅರಿತು ಮತದಾನ ಮಾಡಿ

‘ಮತದಾರರು ತಮ್ಮ ಜವಾಬ್ದಾರಿ ಅರಿತು ಮತದಾನ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಈ ನೆಲ ಈ ಜಲ ಸಾಂಸ್ಕೃತಿ ಸಂಸ್ಥೆಯ ಅಧ್ಯಕ್ಷ...

20 Apr, 2018
ಸಾಮಾಜಿಕ ನ್ಯಾಯ ಆಧರಿಸಿ ಟಿಕೆಟ್

ಕೋಲಾರ
ಸಾಮಾಜಿಕ ನ್ಯಾಯ ಆಧರಿಸಿ ಟಿಕೆಟ್

20 Apr, 2018

ಮುಳಬಾಗಿಲು
ನಾಮಪತ್ರ ಸ್ವೀಕರಿಸದಂತೆ ಮನವಿ

ಶಾಸಕ ಕೊತ್ತೂರು ಜಿ.ಮಂಜುನಾಥ್ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಇವರ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ಸ್ವೀಕರಿಸಬಾರದು ಮತ್ತು ಕಾನೂನು...

20 Apr, 2018

ಕೋಲಾರ
ಭಿನ್ನಾಭಿಪ್ರಾಯ ಬಿಟ್ಟು ಸಹಕರಿಸಿ

‘ಕಾಂಗ್ರೆಸ್ ಕಾರ್ಯಕರ್ತರು ಭಿನ್ನಾಭಿಪ್ರಾಯ ಬಿಟ್ಟು ನನ್ನ ಗೆಲುವಿಗೆ ಸಹಕರಿಸಬೇಕು’ ಎಂದು ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಪಾಷಾ ಮನವಿ ಮಾಡಿದರು.

20 Apr, 2018