ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯೋತ್ಸವ: ಆಚರಣೆಗೆ ಸೀಮಿತ ಬೇಡ’

Last Updated 27 ನವೆಂಬರ್ 2017, 9:28 IST
ಅಕ್ಷರ ಗಾತ್ರ

ಕೆಂಭಾವಿ: ‘ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಾಗಬಾರದು’ ಎಂದು ಜೆಡಿಎಸ್ ಯುವ ಮುಖಂಡ ಅಮೀನರೆಡ್ಡಿ ಪಾಟೀಲ ಯಾಳಗಿ ಹೇಳಿದರು. ಪಟ್ಟಣದ ಪುರಸಭೆ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮ ಹಾಗೂ ಕುವೆಂಪು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವಕರ ಮೇಲಿದೆ ಎಂದು ಹೇಳಿದರು. ಕರಡಕಲ್ ಕೋರಿಸಿದ್ದೇಶ್ವರ ಶಾಖಾ ಮಠದ ಶಾಂತರುದ್ರಮುನಿ ಸ್ವಾಮಿಗಳು ಸಾನ್ನಿಧ್ಯ ವಹಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಿಂಗನಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶರಣಪ್ಪ ಬಂಡೋಳಿ, ವಿಕಾಸ ಸೊನ್ನದ, ಹಣಮಂತ್ರಾಯ ಮಾಣಸುಣಗಿ, ಸಾಯಬಣ್ಣ ದೊಡ್ಡಮನಿ, ರವಿ ಸೊನ್ನದ, ಭೀಮನಗೌಡ ಕಾಚಾಪುರ, ಭೀಮರಾಯ ಕವಾಲ್ದಾರ, ಶಿವರಾಜ ಬೂದುರ, ಕೃಷ್ಣಯ್ಯ ಗುತ್ತೇದಾರ, ಪ್ರಭಾಕರಶೆಟ್ಟಿ, ರಾಮನಗೌಡ ದಾನರೆಡ್ಡಿ, ಪ್ರಶಾಂತರೆಡ್ಡಿ ದೊಡ್ಡಮನಿ, ಚಾಂದಪಾಶಾ ಮುಲ್ಲಾ, ಪ್ರತಾಪರೆಡ್ಡಿ, ಶಿವು ಮಲ್ಲಿಭಾವಿ ಭಾಗವಹಿಸಿದ್ದರು. ಕರವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶನಾಯಕ ಭೈರಮಡ್ಡಿ ಸ್ವಾಗತಿಸಿದರು. ಡಾ.ಯಂಕನಗೌಡ ಪಾಟೀಲ ನಿರೂಪಿಸಿದರು. ಕೃಷ್ಣ ಪರಸನಹಳ್ಳಿ ವಂದಿಸಿದರು.

ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಿಜಗುಣಿ ಬಡಿಗೇರ, ಬಸವರಾಜ ಬಂಟನೂರ, ಬಾಪುಗೌಡ ಎಸ್ ಪಾಟೀಲ, ಡಾ.ಶಂಕರಗೌಡ ಮೂಲಿಮನಿ, ಲಿಂಗನಗೌಡ ಮಾಲಿಪಾಟೀಲ, ಚಂದ್ರಕಾಂತ ಕೊಣ್ಣುರು, ಪವನ ಕುಲಕರ್ಣಿ, ಲೇಮನ್ ಪರಶುರಾಮ, ಶಿವಲಿಂಗಪ್ಪಗೌಡ ಪೊಲೀಸ್ ಪಾಟೀಲ ಅವರಿಗೆ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಂಜುಳಾ ಮೆಲೋಡಿಸ್ ಬಾಗಲಕೋಟೆ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಥಮ, ವಿದ್ಯಾಲಕ್ಷ್ಮಿ ಶಾಲೆ ದ್ವಿತೀಯ ಹಾಗೂ ಪಿವಿಎಸ್ ಶಾಲೆ ತೃತೀಯ ಸ್ಥಾನ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT