ಶಕ್ತಿನಗರ

ಗುಲಾಬಿ ಕಾಯಿಕೊರಕ ನಿರ್ಮೂಲನೆಗೆ ಆಂದೋಲನ

ಕಡಿಮೆ ಅವಧಿಯ ಬಿ.ಟಿ.ಹತ್ತಿ ಹೈಬ್ರಿಡ್‌ ತಳಿಗಳನ್ನು ಆಯ್ಕೆ ಮಾಡಿ ಸೂಕ್ತ ಸಮಯದಲ್ಲಿ ಬಿತ್ತನೆ ಮಾಡಬೇಕು. ಹತ್ತಿಯ ಜೊತೆಗೆ ಬಿ.ಟಿ.ರಹಿತ ಹತ್ತಿಯನ್ನು ಆಶ್ರಯ ಬೆಳೆಯಾಗಿ ಎಕರೆಗೆ 4 ರಿಂದ 5 ಸಾಲುಗಳನ್ನು ಬೆಳೆಯಬೇಕು.

ಶಕ್ತಿನಗರ: ಬಿ.ಟಿ.ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ನಿರ್ಮೂಲನೆಗೆ ಸಂಬಂಧಿಸಿದಂತೆ ದೇವಸೂಗೂರು ಹೋಬಳಿ ಮಟ್ಟದ ಹನುಮಪುರ, ಎಚ್.ತಿಮ್ಮಾಪುರ, ಜೆ.ಮಲ್ಲಾಪುರ, ಹೊಸಪೇಟೆ, ಆಶಾಪುರ ಗ್ರಾಮಗಳಿಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಭೇಟಿ ನೀಡಿ ರೈತರಲ್ಲಿ ಅರಿವು ಮೂಡಿಸಿದರು.

ಕಡಿಮೆ ಅವಧಿಯ ಬಿ.ಟಿ.ಹತ್ತಿ ಹೈಬ್ರಿಡ್‌ ತಳಿಗಳನ್ನು ಆಯ್ಕೆ ಮಾಡಿ ಸೂಕ್ತ ಸಮಯದಲ್ಲಿ ಬಿತ್ತನೆ ಮಾಡಬೇಕು. ಹತ್ತಿಯ ಜೊತೆಗೆ ಬಿ.ಟಿ.ರಹಿತ ಹತ್ತಿಯನ್ನು ಆಶ್ರಯ ಬೆಳೆಯಾಗಿ ಎಕರೆಗೆ 4 ರಿಂದ 5 ಸಾಲುಗಳನ್ನು ಬೆಳೆಯಬೇಕು. ಹತ್ತಿ ಬಿತ್ತಿದ 40 ರಿಂದ 45 ದಿನಗಳ ನಂತರ ಗುಲಾಬಿ ಕಾಯಿಕೊರಕ ವೀಕ್ಷಣೆ ಮಾಡುವುದಕ್ಕೆ ಎಕರೆಗೆ ಕನಿಷ್ಠ ಎರಡು ಲಿಂಗಾಕರ್ಷಕ ಬಲೆಗಳನ್ನು ನೆಡಬೇಕು. ಸತತ ಮೂರು ದಿನವರೆಗೆ ಪ್ರತಿ ಲಿಂಗಾಕರ್ಷಕ ಬಲೆಗಳಲ್ಲಿ 8 ಗಂಡು ಪತಂಗಗಳು ಬಿದ್ದಲ್ಲಿ ಅಥವಾ 60 ಹೂವುಗಳಲ್ಲಿ 6 ಹೂವುಗಳು ಹಾನಿಗೊಳಗಾದರೆ ಸಸ್ಯ ಸಂರಕ್ಷಣೆ ಕ್ರಮಗಳನ್ನು ಅನುಸರಿಸಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜಿ.ಆರ್. ಸಂದೀಪ್ ಅವರು ರೈತರಿಗೆ ವಿವರಿಸಿದರು.

ಕೀಟನಾಶಕ ಸಿಂಪರಣೆ: 2 ಮಿ.ಲೀ. ಪ್ರೊಫೆನೋಫಾಸ್‌, 50ಇ.ಸಿ. ಅಥವಾ 0.5 ಮಿ.ಲೀ. ಲಾಂಬ್ಡಸೈಯಾಲೋಥ್ರೀನ್‌ ಅಥವಾ 0.5 ಮಿ.ಲೀ. ಡೆಕಾಮೆತ್ರಿನ್‌, 2.8 ಇ.ಸಿ. ಅಥವಾ 0.5 ಮಿ.ಲೀ. ಸೈಪರ್‌ಮೆಥ್ರಿನ್‌ 10 ಇ.ಸಿ. ಅಥವಾ 1 ಗ್ರಾಂ. ಥೈಯೋಡಿಕಾರ್ಬ್‌ 75 ಡಬ್ಲ್ಯು.ಪಿ. ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಅವಶ್ಯಕತೆ ಅನುಸಾರವಾಗಿ ಸಿಂಪಡಿಸಬೇಕು.

ಕೀಟದ ಹತೋಟಿಗಾಗಿ ಕೀಟನಾಶಕ ಸಿಂಪರಣೆ ಮಾಡುವಾಗ, ಸಿಂಪರಣಾ ದ್ರಾವಣವು ಎಲ್ಲ ಭಾಗಗಳಿಗೆ ತಲುಪುವಂತೆ ಸಿಂಪರಣೆ ಮಾಡಬೇಕು. ಪ್ರಮುಖವಾಗಿ ಗುಲಾಬಿ ಕಾಯಿ ಕೊರಕ ಕೀಟವು ಮೊಗ್ಗು, ಹೂವು, ಕಾಯಿಗಳನ್ನು ಹಾನಿ ಮಾಡುವುದರಿಂದ ಈ ಭಾಗಗಳಿಗೆ ಸರಿಯಾಗಿ ತಲುಪುವಂತೆ ಎಚ್ಚರ ವಹಿಸಿ ಸಿಂಪಡಿಸಿದರೆ ಮಾತ್ರ ರೋಗವನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು.

Comments
ಈ ವಿಭಾಗದಿಂದ ಇನ್ನಷ್ಟು
ಅನಧಿಕೃತ ಫ್ಲೆಕ್ಸ್: ಅನುಮತಿಗೆ ಗಡುವು

ರಾಯಚೂರು
ಅನಧಿಕೃತ ಫ್ಲೆಕ್ಸ್: ಅನುಮತಿಗೆ ಗಡುವು

22 Jan, 2018

ಶಕ್ತಿನಗರ
ಕಲ್ಲಿದ್ದಲು ಸಾಗಣೆ; ಸಂಚಾರ ಸಂಕಟ

ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದ (ಆರ್‌ಟಿಪಿಎಸ್) ವೈಟಿಪಿಎಸ್‌ಗೆ ಟಿಪ್ಪರ್‌ ಮೂಲಕ ಕಲ್ಲಿದ್ದಲು ಸಾಗಣೆ ನಿಯಮ ಉಲ್ಲಂಘಿಸಿ ಹೆಚ್ಚಿನ ಪ್ರಮಾಣದಲ್ಲಿ ಸಾಗಿಸುತ್ತಿರುವ ಕಾರಣ ಸಂಚಾರಕ್ಕೆ ತೊಂದರೆಯಾಗಿದೆ ...

22 Jan, 2018
‘ಸಾಹಿತ್ಯದಲ್ಲಿ ಹೊಸ ಪರಂಪರೆ ಸೃಷ್ಟಿ’

ಮಾನ್ವಿ
‘ಸಾಹಿತ್ಯದಲ್ಲಿ ಹೊಸ ಪರಂಪರೆ ಸೃಷ್ಟಿ’

21 Jan, 2018
ಸಮ್ಮೇಳನದಿಂದ ಸಮಾಜ ಕಟ್ಟುವ ಕೆಲಸ

ರಾಯಚೂರು
ಸಮ್ಮೇಳನದಿಂದ ಸಮಾಜ ಕಟ್ಟುವ ಕೆಲಸ

20 Jan, 2018

ಮಸ್ಕಿ
ತೊಗರಿ ಖರೀದಿ ಕೇಂದ್ರ ಆರಂಭ

ತೊಗರಿ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದ್ದು ಸಹಕಾರಿ ಪತ್ತಿನ ಸಹಕಾರಿ ಬ್ಯಾಂಕ್ ಮೂಲಕ ಸರ್ಕಾರ ಖರೀದಿಗೆ ಮುಂದಾಗಿದೆ

20 Jan, 2018