ಮಂಡ್ಯ

ರೈತ ಸಮಾವೇಶ ಇಂದು

ಸಮಾವೇಶವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಉದ್ಘಾಟಿಸುವರು. ಟಿ.ಪಿ.ಎಂ.ಎಲ್‌ ಸಂಸ್ಥೆಯ ಸಿಇಒ ಕಾರ್ತಿಕ್‌ ಸುಬ್ರಮಣ್ಯ ಅಧ್ಯಕ್ಷತೆ ವಹಿಸುವರು.

ಮಂಡ್ಯ: ಪ್ರಜಾವಾಣಿ ವತಿಯಿಂದ ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದಲ್ಲಿ ಮಂಗಳವಾರ ನಡೆಯಲಿರುವ ರೈತ ಸಮಾವೇಶದಲ್ಲಿ ನೂರಾರು ರೈತರು ಭಾಗವಹಿಸಲಿದ್ದಾರೆ.

ಸಮಾವೇಶವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಉದ್ಘಾಟಿಸುವರು. ಟಿ.ಪಿ.ಎಂ.ಎಲ್‌ ಸಂಸ್ಥೆಯ ಸಿಇಒ ಕಾರ್ತಿಕ್‌ ಸುಬ್ರಮಣ್ಯ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಸುರೇಶ್‌ಬಾಬು ಅವರು ಹೈನುಗಾರಿಕೆ ಬಗ್ಗೆ ಮಾಹಿತಿ ನೀಡುವರು. ವಿ.ಸಿ.ಫಾರಂನ ಬೇಸಾಯ ಶಾಸ್ತ್ರಜ್ಞರಾದ ಡಾ.ಪಿ.ತಿಮ್ಮೇಗೌಡ ನೀರಿನ ಸದ್ಬಳಕೆ ಹಾಗೂ ಪರ್ಯಾಯ ಬೆಳೆಗಳ ಬಗ್ಗೆ ಉಪನ್ಯಾಸ ನೀಡುವರು. ಮತ್ತೊಬ್ಬ ಬೇಸಾಯ ವಿಜ್ಞಾನ ತಜ್ಞರಾದ ಡಾ.ಕೆ.ಎಸ್‌.ಶುಭಶ್ರೀ ಅವರು ಸಿರಿಧಾನ್ಯಗಳ ಕುರಿತು ಉಪನ್ಯಾಸ ನೀಡುವರು.

ಪ್ರಜಾವಾಣಿ ಪತ್ರಿಕೆ ವಿತರಕರಾದ ಎ.ಎಸ್‌.ಪ್ರಭಾಕರ್‌ (ಮಳವಳ್ಳಿ), ಅಣ್ಣೂರು ಲಕ್ಷ್ಮಣ್‌ (ಭಾರತೀನಗರ) ಅವರಿಗೆ ಸನ್ಮಾನ ಮಾಡಲಾಗುವುದು. ಸಮಾವೇಶದಲ್ಲಿ ಪ್ರಗತಿಪರ ರೈತರು, ಕೃಷಿ, ತೋಟಗಾರಿಕೆ ಇಲಾಖೆ ತಜ್ಞರು ರೈತರಿಗೆ ಮಾರ್ಗದರ್ಶನ ಮಾಡುವರು. ಕಲಾವಿದ ಸಿದ್ಧಾರ್ಥ ಹಾಗೂ ತಂಡದ ಸದಸ್ಯರು ರೈತ ಗೀತೆಗಳನ್ನು ಪ್ರಸ್ತುಪಡಿಸುವರು. ಕಾರ್ಯಕ್ರಮ ಬೆಳಿಗ್ಗೆ 9.30ಕ್ಕೆ ಆರಂಭವಾಗಲಿದೆ.

ನೂರಾರು ರೈತರು ಸಮಾವೇಶದಲ್ಲಿ ಭಾಗವಹಿಸಲು ನೋಂದಣಿ ಮಾಡಿಸಿಕೊಂಡಿದ್ದು ಸಮಗ್ರ ಕೃಷಿಯ ಬಗ್ಗೆ ಮಾರ್ಗದರ್ಶನ ಪಡೆಯಲಿದ್ದಾರೆ. ರೈತ ಸಮುದಾಯ ಭವನದ ಎದುರು ಹನಿ ನೀರಾವರಿ ಬಗ್ಗೆ ಮಾಹಿತಿ ನೀಡುವ ಮಾದರಿಯೊಂದನ್ನು ಮಣ್ಣಿನಿಂದ ವಿನ್ಯಾಸ ಮಾಡಲಾಗಿದೆ.

ಅಲ್ಲದೆ ಸಭಾಂಗಣದ ಹೊರಗೆ ಕೃಷಿ ಯಂತ್ರೋಪಕರಣ ಪ್ರದರ್ಶನ ಮಾಡಲಾಗುತ್ತಿದ್ದು ಆ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ರೈತರ ಪ್ರಶ್ನೆಗಳಿಗೆ ಉತ್ತರ ನೀಡುವರು. ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಅವರೂ ರೈತರ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ. ಸಮಾವೇಶದಲ್ಲಿ ಪ್ರಜಾವಾಣಿ ಹೊರತಂದಿರುವ 2018ರ ಕ್ಯಾಲೆಂಡರ್‌ ಬಿಡುಗಡೆಗೊಳ್ಳಲಿದೆ.

ಮಾಹಿತಿಗಾಗಿ ಟಿ.ಎನ್‌.ಬಸವರಾಜು ಮೊ: 9731399460, ಎಲ್‌.ಎಸ್‌.ಮಹೇಶ್‌ ಮೊ: 9741773751 ಸಂಪರ್ಕಿಸಬಹುದು.

ರೈತರು ಪಾಲ್ಗೊಳ್ಳಿ: ಶಾಸಕ
ಮಳವಳ್ಳಿ: ಪಟ್ಟಣದ ರೈತ ಸಮುದಾಯ ಭವನದಲ್ಲಿ ನ. 28ರಂದು ಪ್ರಜಾವಾಣಿ ವತಿಯಿಂದ ನಡೆಯುತ್ತಿರುವ ರೈತ ಸಮಾವೇಶಕ್ಕೆ ತಾಲ್ಲೂಕಿನ ರೈತರು ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ವಿವಿಧ ಭಾಗದಲ್ಲಿ ರೈತರು ನಡೆಸುವ ಚಟುವಟಿಕೆಗಳ ಬಗ್ಗೆ ಮಾಹಿತಿ, ವಿಜ್ಞಾನಿಗಳಿಂದ ಅರಿವು ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ರೈತರು ಭಾಗವಹಿಸಿ ಸದುಯೋಗಪಡೆದುಕೊಳ್ಳಬೇಕು ಎಂದು ತಿಳಿಸಿದರು.

 

Comments
ಈ ವಿಭಾಗದಿಂದ ಇನ್ನಷ್ಟು
ಸೂರು ಕಾಣದ ಮೂರು ತಲೆಮಾರು!

ಮಂಡ್ಯ
ಸೂರು ಕಾಣದ ಮೂರು ತಲೆಮಾರು!

18 Jan, 2018
ಕಳೆಗಟ್ಟಿದ ಕೆಆರ್‌ಎಸ್‌ ದನಗಳ ಜಾತ್ರೆ

ಶ್ರೀರಂಗಪಟ್ಟಣ
ಕಳೆಗಟ್ಟಿದ ಕೆಆರ್‌ಎಸ್‌ ದನಗಳ ಜಾತ್ರೆ

18 Jan, 2018

ಮಂಡ್ಯ
ನೌಕರಿ ಕಾಯಂಗೊಳಿಸಿ, ಕನಿಷ್ಠ ವೇತನ ಕೊಡಿ

ಎಐಯುಟಿಯುಸಿ ನೇತೃತ್ವದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘ, ಅಕ್ಷರ ದಾಸೋಹ ಸಂಘದ ಸಾವಿರಾರು ಮಹಿಳೆಯರು ಜಿಲ್ಲಾಧಿಕಾರಿ ಮೂಲಕ...

18 Jan, 2018
ಜೀವ ಕೈಯಲ್ಲಿಡಿದು ಮಹಿಳೆಯರ ಪಯಣ

ಮಂಡ್ಯ
ಜೀವ ಕೈಯಲ್ಲಿಡಿದು ಮಹಿಳೆಯರ ಪಯಣ

17 Jan, 2018

ಮದ್ದೂರು
ಗೋವಾ ಸಚಿವರ ಹೇಳಿಕೆಗೆ ಆಕ್ರೋಶ, ಪ್ರತಿಭಟನೆ

ಗೋವಾದ ನೀರಾವರಿ ಸಚಿವ ಪಾಲೇಕಾರ್ ಕನ್ನಡಿಗರ ಬಗ್ಗೆ ನೀಡಿರುವ ಹೇಳಿಕೆ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಪಟ್ಟಣದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ...

17 Jan, 2018