ಚಾಮರಾಜನಗರ

ಅವರೆಕಾಯಿ ಪ್ರಿಯರಿಗೆ ಸುಗ್ಗಿ

ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಅವರೆಕಾಯಿ ರಾಶಿ. ಈ ಅವಧಿಗಾಗಿ ಕಾದು ಕುಳಿತವರಂತೆ ಅವರೆ ಪ್ರಿಯರು ಖರೀದಿಗೆ ಮುಗಿಬೀಳುತ್ತಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆಯೂ ಆಗುತ್ತಿದೆ.

ಚಾಮರಾಜನಗರದ ಮಾರುಕಟ್ಟೆಯಲ್ಲಿ ಅವರೆಕಾಯಿ ಖರೀದಿಸುತ್ತಿರುವ ಗ್ರಾಹಕ

ಚಾಮರಾಜನಗರ: ಚುಮುಚುಮು ಚಳಿಯ ವಾತಾವರಣ ಜಿಲ್ಲೆಗೆ ಕಾಲಿಟ್ಟಿದೆ. ಅದರ ಬೆನ್ನಲ್ಲೇ ಮಾಗಿಯ ಅವಧಿಯ ಬಹುಜನರ ಪ್ರಿಯವಾದ ಅವರೆಕಾಯಿಯೂ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸಾಲು ಸಾಲು ಹಬ್ಬಗಳು ಕಳೆದ ಬಳಿಕ ಈಗ ಅವರೆಯದ್ದೇ ಹಬ್ಬ.

ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಅವರೆಕಾಯಿ ರಾಶಿ. ಈ ಅವಧಿಗಾಗಿ ಕಾದು ಕುಳಿತವರಂತೆ ಅವರೆ ಪ್ರಿಯರು ಖರೀದಿಗೆ ಮುಗಿಬೀಳುತ್ತಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆಯೂ ಆಗುತ್ತಿದೆ. ಅನಿವಾರ್ಯವಾಗಿ ಅಧಿಕ ದರ ತೆತ್ತು ತರಕಾರಿ ಖರೀದಿಸುತ್ತಿದ್ದ ಗ್ರಾಹಕರು ಈಗ ಅವರೆಯತ್ತ ಮುಖಮಾಡುತ್ತಿದ್ದಾರೆ.

ಈಗತಾನೆ ಸೊನೆ ಅವರೆಕಾಯಿ ಋತು ಆರಂಭವಾಗಿದ್ದು, ಜನವರಿ ಅಂತ್ಯದವರೆಗೂ ಮಾರುಕಟ್ಟೆಗೆ ಪೂರೈಕೆಯಾಗಲಿದೆ. ಇದರ ಬೆನ್ನಲ್ಲೇ ಬಹುತೇಕ ತರಕಾರಿಗಳ ಬೆಲೆ ತಕ್ಕಮಟ್ಟಿಗೆ ಇಳಿಕೆಯಾಗಿರುವುದು ಗ್ರಾಹಕರಲ್ಲಿ ನೆಮ್ಮದಿ ಮೂಡಿಸಿದೆ.

ಜಿಲ್ಲೆಯ ಕೊಳ್ಳೇಗಾಲ ಹಾಗೂ ಹನೂರು ಭಾಗದಲ್ಲಿ ಅವರೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಅವರೆಕಾಯಿಗೆ ಸಾಕಷ್ಟು ಬೇಡಿಕೆ ಯಿದೆ. ಸದ್ಯ ಮಾರುಕಟ್ಟೆಯಲ್ಲಿ ಮೈಸೂರು ಹಾಗೂ ಸ್ಥಳೀಯ ರೈತರು ಬೆಳೆದಿರುವ ಅವರೆಕಾಯಿ ಹೆಚ್ಚು ಪೂರೈಕೆ ಯಾಗುತ್ತಿದ್ದು, ಕೆ.ಜಿ.ಗೆ ₹40ರಿಂದ 50 ಧಾರಣೆಯಿದೆ.

ತರಕಾರಿ ಬೆಲೆ ಇಳಿಕೆ: ಮಾರುಕಟ್ಟೆಯಲ್ಲಿ ಗೆಡ್ಡೆಕೋಸು, ಹೂಕೋಸು, ದಪ್ಪ ಮೆಣಸಿನಕಾಯಿ ಮುಂತಾದ ತರಕಾರಿ ಬೆಲೆಯಲ್ಲಿ ಇಳಿಕೆಯಾಗಿದ್ದು, ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕೆಜಿಗೆ ₹ 100 ಧಾರಣೆಯಿದ್ದ ಗೆಡ್ಡೆಕೋಸು ₹ 50, ದಪ್ಪ ಮೆಣಸಿಕಾಯಿ ₹ 50 ಹಾಗೂ ಹೂಕೋಸು ₹ 40ಕ್ಕೆ ಇಳಿಕೆಯಾಗಿದೆ.

ಈರುಳ್ಳಿ, ನುಗ್ಗೆಕಾಯಿ ಏರಿಕೆ:
ಮೂರು ನಾಲ್ಕು ವಾರದಿಂದ ಸಣ್ಣ ಈರುಳ್ಳಿ ಧಾರಣೆ ₹ 180 ರಿಂದ 200ರ ಗಡಿಯಲ್ಲಿದೆ. ಇದರ ಪರಿಣಾಮ ದಪ್ಪ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿದ್ದು, ಕೆಜಿಗೆ ₹ 60ಕ್ಕೆ ತಲುಪಿದೆ. ಇನ್ನೊಂದೆಡೆ ನುಗ್ಗೆಕಾಯಿ ಬೆಲೆಯೂ ಕೆ.ಜಿ.ಗೆ ₹ 200 ಗಡಿ ಮುಟ್ಟಿದೆ.

‘ಶುಭ, ಸಮಾರಂಭಗಳಲ್ಲಿ ಸಣ್ಣ ಈರುಳ್ಳಿ ಹಾಗೂ ನುಗ್ಗೆಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಹಾಗಾಗಿ. ಇವುಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಪೂರೈಕೆ ಮಾತ್ರ ವಾರದಿಂದ ವಾರಕ್ಕೆ ಇಳಿಕೆಯಾಗುತ್ತಿರುವುದರಿಂದ ಬೆಲೆ ತುಟ್ಟಿಯಾಗಿದೆ’ ಎನ್ನುತ್ತಾರೆ ವ್ಯಾಪಾರಿಗಳು.

ಹಣ್ಣು, ಹೂ ಸ್ಥಿರ: ಮಾರುಕಟ್ಟೆಯಲ್ಲಿ ಹಣ್ಣು ಮತ್ತು ಹೂವಿನ ಧಾರಣೆ ಸ್ಥಿರವಾಗಿದೆ. ಏಲಕ್ಕಿ ಬಾಳೆಹಣ್ಣಿನ ಬೆಲೆ ಇಳಿಕೆಯಾಗಿದ್ದು, ಕೆ.ಜಿಗೆ ₹ 50 ಹಾಗೂ ಪಚ್ಚಬಾಳೆ ಹಣ್ಣಿಗೆ ₹ 30ರಿಂದ 40 ಧಾರಣೆ ಇದೆ. ಚೆಂಡು ಹೂವು ₹ 10, ಮಲ್ಲಿಗೆ ₹ 20ರಿಂದ 30, ಕಾಕಡ ₹ 20ರಿಂದ 30, ಕನಕಾಂಬರ ₹ 30ರಿಂದ 50 ಹಾಗೂ ಹೂವಿನ ಹಾರಕ್ಕೆ ₹ 50ರಿಂದ 300ರವರೆಗೂ ದರವಿದೆ.

ತರಕಾರಿ      ಬೆಲೆ(ಕೆಜಿಗೆ)
ಹಸಿಮೆಣಸಿಕಾಯಿ    ₹30
ಟೊಮೆಟೊ    ₹40
ಬೂದುಗುಂಬಳ    ₹20
ಸಿಹಿಕುಂಬಳ    ₹15
ಬಿಳಿ ಬದನೆ    ₹50
ಬೀನ್ಸ್‌     ₹40
ಕ್ಯಾರೆಟ್‌     ₹40
ಸೌತೆಕಾಯಿ    ₹20
ಆಲೂಗಡ್ಡೆ    ₹20
ಮೂಲಂಗಿ    ₹30
ಶುಂಠಿ    ₹60
ಬೀಟ್ರೂಟ್‌    ₹40
ಹೀರೇಕಾಯಿ   ₹30

ಹಣ್ಣು ಧಾರಣೆ(ಕೆಜಿಗೆ)
ಸೇಬು ₹100 ರಿಂದ 120
ಕಿತ್ತಳೆ ₹60 ರಿಂದ 80
ಮೂಸಂಬಿ ₹80
ದ್ರಾಕ್ಷಿ ₹100
ದಾಳಿಂಬೆ ₹100
ಸಪೋಟ ₹60

Comments
ಈ ವಿಭಾಗದಿಂದ ಇನ್ನಷ್ಟು
ನಾಲೆಗೆ ನೀರು ಹರಿಸಲು ಆಗ್ರಹ

ಸಂತೇಮರಹಳ್ಳಿ
ನಾಲೆಗೆ ನೀರು ಹರಿಸಲು ಆಗ್ರಹ

18 Jan, 2018
ರಸ್ತೆ ಅವ್ಯವಸ್ಥೆಗೆ ಸದಸ್ಯರ ಅಸಮಾಧಾನ

ಚಾಮರಾಜನಗರ
ರಸ್ತೆ ಅವ್ಯವಸ್ಥೆಗೆ ಸದಸ್ಯರ ಅಸಮಾಧಾನ

18 Jan, 2018

ಚಾಮರಾಜನಗರ
ಸೆಸ್ಕ್‌ ಕಾರ್ಯವೈಖರಿಗೆ ಅಸಮಾಧಾನ

ಉಳುಮೆ ಮಾಡುವಾಗ ಕಂಬಗಳು ಸಡಿಲಗೊಂಡು ಈ ಅವಘಡ ಸಂಭವಿಸುತ್ತದೆ ಎಂದು ಸೆಸ್ಕ್‌ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದರು.

18 Jan, 2018
ಏಳುದಂಡು ಜೋಡಿ ಮುನೇಶ್ವರ ಜಾತ್ರೆ ಸಡಗರ

ಹನೂರು
ಏಳುದಂಡು ಜೋಡಿ ಮುನೇಶ್ವರ ಜಾತ್ರೆ ಸಡಗರ

17 Jan, 2018
ವೀರಗಾಸೆ ಕಲೆ ಬೆಳೆಸುವ ಹಂಬಲ

ಚಾಮರಾಜನಗರ
ವೀರಗಾಸೆ ಕಲೆ ಬೆಳೆಸುವ ಹಂಬಲ

17 Jan, 2018