ದಾವಣಗೆರೆ

ದುರ್ಗಾಂಬಿಕಾ ದೇಗುಲದ ಸುತ್ತ ಅಭಿವೃದ್ಧಿ: ಶಾಮನೂರು

‘ದೇಗುಲದ ಪ್ರದಕ್ಷಿಣಾ ಪಥಗಳ ಅಭಿವೃದ್ಧಿ, ಭಕ್ತರು ನಿಲ್ಲುವ ಸ್ಥಳ, ದೇವಸ್ಥಾನಕ್ಕೆ ತೆರಳುವ 3 ಕಡೆಗಳಲ್ಲಿ ಸ್ವಾಗತ ಗೋಪುರ ನಿರ್ಮಾಣ, ಭಕ್ತರಿಗೆ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಸ್ಥಳಗಳನ್ನು ನಿರ್ಮಿಸಲಾಗುವುದು’

ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಸ್ಮಾರ್ಟ್‌ಸಿಟಿ ಲಿಮಿಟೆಡ್, ಮಹಾನಗರ ಪಾಲಿಕೆ, ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರಿ ಆಪ್ತ ಮಾತನಾಡಿ, ‘ದೇಗುಲದ ಪ್ರದಕ್ಷಿಣಾ ಪಥಗಳ ಅಭಿವೃದ್ಧಿ, ಭಕ್ತರು ನಿಲ್ಲುವ ಸ್ಥಳ, ದೇವಸ್ಥಾನಕ್ಕೆ ತೆರಳುವ 3 ಕಡೆಗಳಲ್ಲಿ ಸ್ವಾಗತ ಗೋಪುರ ನಿರ್ಮಾಣ, ಭಕ್ತರಿಗೆ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಸ್ಥಳಗಳನ್ನು ನಿರ್ಮಿಸಲಾಗುವುದು’ಎಂದರು.

ಜಾತ್ರೆ ಸಂದರ್ಭಗಳಲ್ಲಿ ತಾತ್ಕಾಲಿಕ ಮಾರಾಟ ಮಳಿಗೆ, ಹೊಂಡದ ಸರ್ಕಲ್‌ ಬಳಿಯ ಕಲ್ಯಾಣಿ ಅಭಿವೃದ್ಧಿ, ಗಡಿಯಾರ ಕಂಬದ ಸುತ್ತಲಿನ ಪ್ರದೇಶವನ್ನೂ ಅಭಿ
ವೃದ್ಧಿ ಮಾಡಲಾಗುವುದು. ಪುರಾತನ ದೇವಸ್ಥಾನದ ಕಟ್ಟಡಕ್ಕೆ ಯಾವುದೇ ಧಕ್ಕೆಯಾಗದಂತೆ ಕಾಮಗಾರಿ ನಡೆಸಲು ಯೋಜನೆ ರೂಪಿಸಲಾಗಿದೆ ಎಂದರು.

ಸಭೆಯಲ್ಲಿ ಮೇಯರ್ ಅನಿತಾಬಾಯಿ ಮಾಲತೇಶ್, ಪಾಲಿಕೆ ಆಯುಕ್ತ ಬಿ.ಎಚ್.ನಾರಾಯಣಪ್ಪ, ಉಪ ಆಯುಕ್ತ ರವೀಂದ್ರ, ಸದಸ್ಯರಾದ ಅಶ್ವಿನಿ, ದಿಲ್‌ಶಾದ್ ಷೇಕ್‌ ಅಹಮದ್, ಗೋಣೆಪ್ಪ, ದೇವಸ್ಥಾನ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ, ಹನುಮಂತರಾವ್ ಸಾವಂತ್, ಪಿಸಾಳೆ ಸತ್ಯನಾರಾಯಣ್, ಬಿ.ಎಚ್.ವೀರಭದ್ರಪ್ಪ ಅವರೂ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ದಾವಣಗೆರೆ
ಬಿ ಫಾರಂ ತಡೀರಿ, ಇಲ್ಲ ವಿರೋಧ ಎದುರಿಸಿ

ಟಿಕೆಟ್ ಘೋಷಣೆಯಾದ ವ್ಯಕ್ತಿಗೆ ಗೆಲ್ಲುವ ಸಾಮರ್ಥ್ಯ ಇಲ್ಲ. ಅವರಿಗೆ ಪಕ್ಷದ ‘ಬಿ ಫಾರಂ’ ಕೊಡಬಾರದು. ವಿರೋಧಗಳ ನಡುವೆಯೂ ಪಕ್ಷ ‘ಬಿ ಫಾರಂ’ ನೀಡಿದರೆ ಮುಂದಿನ...

18 Apr, 2018
ಅರ್ಧಕ್ಕೇ ಸ್ಥಗಿತಗೊಂಡ ಮೇಲ್ಸೇತುವೆ ಕಾಮಗಾರಿ

ಚನ್ನಗಿರಿ
ಅರ್ಧಕ್ಕೇ ಸ್ಥಗಿತಗೊಂಡ ಮೇಲ್ಸೇತುವೆ ಕಾಮಗಾರಿ

18 Apr, 2018

ದಾವಣಗೆರೆ
ಹೈಕಮಾಂಡ್‌ ನಿರ್ಧಾರದಿಂದ ತುಂಬಾ ನೋವಾಗಿದೆ

ಜಗಳೂರು ಕ್ಷೇತ್ರದಿಂದ ಎಚ್‌.ಪಿ.ರಾಜೇಶ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿರುವುದನ್ನು ಖಂಡಿಸಿ ನೂರಾರು ಬೆಂಬಲಿಗರು ಮಂಗಳವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

18 Apr, 2018
ಉಚ್ಚಂಗಿದುರ್ಗ: ಬಿರುಗಾಳಿಗೆ ತತ್ತರಿಸಿದ ಜನರು

ಉಚ್ಚಂಗಿದುರ್ಗ
ಉಚ್ಚಂಗಿದುರ್ಗ: ಬಿರುಗಾಳಿಗೆ ತತ್ತರಿಸಿದ ಜನರು

18 Apr, 2018

‌ದಾವಣಗೆರೆ
ಕಲಿಕೆಯಲ್ಲಿ ಕೀಳರಿಮೆ ಬೇಡ, ಆತ್ಮವಿಶ್ವಾಸವಿರಲಿ

ಗಣಿತ, ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯಗಳ ಕಲಿಕೆಯ ಬಗ್ಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಹೆಚ್ಚು ಆಸಕ್ತಿ ಮೂಡಿಸುವುದು ಅವಶ್ಯ ಎಂದು ಡಯಟ್‌ ಪ್ರಾಂಶುಪಾಲ ಪ್ರೊ.ಎಚ್‌.ಕೆ....

17 Apr, 2018