ಧಾರವಾಡ

ಧಾರವಾಡದ ಯೋಧ ನಕ್ಸಲರ ಗುಂಡಿಗೆ ಬಲಿ

‘ಯೋಧನ ಪಾರ್ಥಿವ ಶರೀರವನ್ನು ಮಂಗಳವಾರ ಬೆಳಿಗ್ಗೆ 10ಕ್ಕೆ ಧಾರವಾಡಕ್ಕೆ ತರಲಾಗುವುದು. ಇಲ್ಲಿನ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ

ಧಾರವಾಡ: ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯ ಗ್ಯಾರಾಪತಿ ಪ್ರದೇಶದಲ್ಲಿ ಭಾನುವಾರ ರಾತ್ರಿ ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ತಾಲ್ಲೂಕಿನ ಮನಗುಂಡಿ ಗ್ರಾಮದ ಸಿಆರ್‌ಪಿಎಫ್‌ ಯೋಧ ಮಂಜುನಾಥ ಜಕ್ಕಣ್ಣವರ(31) ಮೃತಪಟ್ಟಿದ್ದಾರೆ.

ಸಿಆರ್‌ಪಿಎಫ್‌ 113ನೇ ಬೆಟಾಲಿಯನ್‌ನಲ್ಲಿ 12 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದರು. ಕಾರ್ಯಾಚರಣೆಯಲ್ಲಿ, ಆರು ಗುಂಡುಗಳು ಇವರ ದೇಹವನ್ನು ಹೊಕ್ಕಿದ್ದರಿಂದ ಸ್ಥಳದಲ್ಲೇ ಅಸು ನೀಗಿದ್ದಾರೆ.

‘ಯೋಧನ ಪಾರ್ಥಿವ ಶರೀರವನ್ನು ಮಂಗಳವಾರ ಬೆಳಿಗ್ಗೆ 10ಕ್ಕೆ ಧಾರವಾಡಕ್ಕೆ ತರಲಾಗುವುದು. ಇಲ್ಲಿನ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಸ್ವಗ್ರಾಮ ಮನಗುಂಡಿವರೆಗೂ ಮೆರವಣಿಗೆ ಮೂಲಕ ಸಾಗಿ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಜಿಲ್ಲಾಡಳಿತ ತಿಳಿಸಿದೆ.

ಯೋಧ ಮಂಜುನಾಥ ಅವರಿಗೆ ಪತ್ನಿ ಲಲಿತಾ, ಮೂರೂವರೆ ವರ್ಷದ ಪುತ್ರ ಗಣೇಶ, ಎರಡು ವರ್ಷದ ಪುತ್ರಿ ಲಕ್ಷ್ಮಿ, ತಂದೆ ಶಿವಲಿಂಗಪ್ಪ, ತಾಯಿ ರತ್ನವ್ವ, ಇಬ್ಬರು ಸಹೋದರಿಯರು ಹಾಗೂ ನಾಲ್ವರು ಸಹೋದರರು ಇದ್ದಾರೆ.

ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಮನಗುಂಡಿ ಹಾಗೂ ನಿಗದಿಯ ಸರ್ಕಾರಿ ಶಾಲೆಯಲ್ಲಿ ಮುಗಿಸಿದ್ದರು. ಪಿಯುಸಿ ಶಿಕ್ಷಣವನ್ನು ನವಲೂರಿನ ಕಾಲೇಜಿನಲ್ಲಿ ಹಾಗೂ ಪದವಿಯನ್ನು ನಗರದ ಅಂಜುಮನ್ ಕಾಲೇಜಿನಲ್ಲಿ ಪಡೆದಿದ್ದರು. 2005ರಲ್ಲಿ ಸಿಆರ್‌ಪಿಎಫ್ ಗೆ ನೇಮಕಗೊಂಡಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಹುಬ್ಬಳ್ಳಿ
ಸಮಿತಿ ದಾಖಲೆಗಳನ್ನೇ ಪರಿಶೀಲಿಸಿಲ್ಲ

‘ನ್ಯಾ.ನಾಗಮೋಹನ ದಾಸ್‌ ಸಮಿತಿಯು ನಾವು ಕೊಟ್ಟ ಯಾವ ದಾಖಲೆಗಳನ್ನೂ ಪರಿಶೀಲಿಸದೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರ ಇಚ್ಛೆಯಂತೆ ವರದಿ ಕೊಟ್ಟಿದೆ. ಏಕಪಕ್ಷೀಯವಾದ ಈ ವರದಿಯನ್ನು...

20 Mar, 2018
ಅತಂತ್ರ ಸ್ಥಿತಿಯಲ್ಲಿ ಸಂಪರ್ಕ ರಸ್ತೆಗಳು

ಹುಬ್ಬಳ್ಳಿ
ಅತಂತ್ರ ಸ್ಥಿತಿಯಲ್ಲಿ ಸಂಪರ್ಕ ರಸ್ತೆಗಳು

20 Mar, 2018
ಮೂರು ವರ್ಷದಿಂದ ಟ್ಯಾಂಕರ್‌ ನೀರೇ ಗತಿ

ಹುಬ್ಬಳ್ಳಿ
ಮೂರು ವರ್ಷದಿಂದ ಟ್ಯಾಂಕರ್‌ ನೀರೇ ಗತಿ

20 Mar, 2018
150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ

ಹುಬ್ಬಳ್ಳಿ
150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ

19 Mar, 2018
ಜಿಲ್ಲೆಯ ವಿವಿಧೆಡೆ ಮಳೆ

ಧಾರವಾಡ
ಜಿಲ್ಲೆಯ ವಿವಿಧೆಡೆ ಮಳೆ

16 Mar, 2018