ಗದಗ

‘ವಿನಯ ಕುಲಕರ್ಣಿ ವರ್ಚಸ್ಸು ಹಾಳುಗೆಡವಲು ಬಿಜೆಪಿ ಹುನ್ನಾರ’

‘ಕುಲಕರ್ಣಿ ಅವರ ಮೇಲೆ ಏನಿದೆ ಆರೋಪ’ ಎಂದು ಪ್ರಶ್ನಿಸಿದ ಅವರು, ‘ಬಿಜೆಪಿಯವರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಇದರ ಜತೆಗೆ ಕೆಂಪಯ್ಯ ಅವರ ಹೆಸರನ್ನೂ ತಳಕು ಹಾಕಿದ್ದಾರೆ’

ಗದಗ: ‘ಸಚಿವ ವಿನಯ ಕುಲಕರ್ಣಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಭಾಗವಹಿಸಿರುವುದರಿಂದ, ಅವರ ವರ್ಚಸ್ಸು ಹಾಳುಗೆಡವಲು ಬಿಜೆಪಿ ಹಾಗೂ ಬಿ.ಎಸ್. ಯಡಿಯೂರಪ್ಪ ಹುನ್ನಾರ ನಡೆಸಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.

ನರಗುಂದದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರು, ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ವಿನಯ ಕುಲಕರ್ಣಿ ಅವರ ಮೇಲಿರುವ ಆರೋಪದ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

‘ಕುಲಕರ್ಣಿ ಅವರ ಮೇಲೆ ಏನಿದೆ ಆರೋಪ’ ಎಂದು ಪ್ರಶ್ನಿಸಿದ ಅವರು, ‘ಬಿಜೆಪಿಯವರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಇದರ ಜತೆಗೆ ಕೆಂಪಯ್ಯ ಅವರ ಹೆಸರನ್ನೂ ತಳಕು ಹಾಕಿದ್ದಾರೆ’ ಎಂದು ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.

ದಯವಿಟ್ಟು ಆ ಕೆಲ್ಸಾ ಮಾಡ್ಸಪ್ಪಾ: ‘ಪ್ರಧಾನಿ ಮಧ್ಯಸ್ಥಿಕೆಯಿಂದ ಮಾತ್ರ ಮಹದಾಯಿ ವಿವಾದ ಇತ್ಯರ್ಥವಾಗಲು ಸಾಧ್ಯ. ಸಂಧಾನಕ್ಕಾಗಿ ಈಗಾಗಲೇ ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸಾಕಷ್ಟು ಬಾರಿ ಪತ್ರ ಬರೆಯಲಾಗಿದೆ. ಆದರೆ, ಬಿಜೆಪಿಯವರು ಮುಂದೆ ಬರುತ್ತಿಲ್ಲ. ಮೂರು ವರ್ಷಗಳಿಂದ ಸುಮ್ಮನಿದ್ದ ಯಡಿಯೂರಪ್ಪ, ಈಗ ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸಿ, ನೀರು ಹರಿಸುವುದಾಗಿ ಹೇಳಿದ್ದಾರೆ’ ಎಂದ ಸಿದ್ದರಾಮಯ್ಯ, ‘ಯಡಿಯೂರಪ್ಪ ನಿನ್ನ ಕೈ ಮುಗಿತೀನಿ, ದಯವಿಟ್ಟು ಆ ಕೆಲ್ಸಾ ಮಾಡ್ಸಪ್ಪಾ’ ಎಂದು ತಿವಿದರು.

‘ಕಾಂಗ್ರೆಸ್‌ನ ಕೆಲವು ಶಾಸಕರು, ಸಚಿವರು ಬಿಜೆಪಿ ಅಥವಾ ಜೆಡಿಎಸ್ ಸೇರ್ಪಡೆಯಾಗುವುದು ಸುಳ್ಳು. ಕೆಲ ಬಿಜೆಪಿ ಶಾಸಕರೇ ನನ್ನ ಸಂರ್ಪಕದಲ್ಲಿದ್ದಾರೆ’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು
ಹಂಗಾಮು ಮುಗಿದರೂ ಇಳಿಯದ ಬೆಲೆ

ಗದಗ
ಹಂಗಾಮು ಮುಗಿದರೂ ಇಳಿಯದ ಬೆಲೆ

21 Jan, 2018
‘ಸಮಾಜ ಕಲ್ಯಾಣಕ್ಕಾಗಿ ಶ್ರಮಿಸಿದ ವೇಮನ’

ಗದಗ
‘ಸಮಾಜ ಕಲ್ಯಾಣಕ್ಕಾಗಿ ಶ್ರಮಿಸಿದ ವೇಮನ’

20 Jan, 2018

ಮುಂಡರಗಿ
ಪಾಲ್ಯೇಕರ್ ವಿರುದ್ಧ ಮುಂಡರಗಿಯಲ್ಲಿ ಆಕ್ರೋಶ

ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತಕುಮಾರ ಗಡಾದ ಮಾತನಾಡಿ ಪ್ರಧಾನ ಮಂತ್ರಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಬಗೆಹರಿಸಬೇಕು

20 Jan, 2018

ಗಜೇಂದ್ರಗಡ
ವಿವಿಧ ಸಂಘಟನೆಗಳಿಂದ ಪ್ರತಿಭಟನೆ: ಎಚ್ಚರಿಕೆ

‘ಈ ಕಚೇರಿ ಜಿಲ್ಲಾಧಿಕಾರಿ ಅಥವಾ ಉಪ ವಿಭಾಗಾಧಿಕಾರಿಗಳಿಗಾಗಿ ಅಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ. ಯಾರಿಗೂ ತಿಳಿಸದೇ ತಾಲ್ಲೂಕಿನ ಜನಪ್ರತಿನಿಧಿಗಳು ತಮ್ಮ ಸ್ವಹಿತಕ್ಕಾಗಿ ಜನರಿಗೆ ತೊಂದರೆ ನೀಡುತ್ತಿದ್ದಾರೆ

20 Jan, 2018
ಹೆಚ್ಚಿದ ತೊಗರಿ ಬಿತ್ತನೆ ಪ್ರದೇಶ: ಅಧಿಕ ಇಳುವರಿ

ಲಕ್ಷ್ಮೇಶ್ವರ
ಹೆಚ್ಚಿದ ತೊಗರಿ ಬಿತ್ತನೆ ಪ್ರದೇಶ: ಅಧಿಕ ಇಳುವರಿ

19 Jan, 2018