ಹಾನಗಲ್‌

ಕಚೇರಿಗೆ ಬೀಗ: ರೈತ ಸಂಘ ಎಚ್ಚರಿಕೆ

‘ಕಾರ್ಪೋರೆಟ್‌, ಉದ್ಯಮಿಗಳ ಪರವಾಗಿರುವ ಕೇಂದ್ರ ಸರ್ಕಾರ ರೈತರ ಹಿತ ಕಡೆಗಣಿಸಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ರೈತರ ಚಳವಳಿಯಲ್ಲಿ ಜಿಲ್ಲೆಯ 800 ರೈತರು ಭಾಗಿಯಾಗಿದ್ದರು. ಆದರೆ ರಾಜ್ಯದ ಸಂಸದರು ರೈತರ ಭೇಟಿಗೆ ಬರಲಿಲ್ಲ’

ಹಾನಗಲ್‌: ‘ತಾಲ್ಲೂಕಿನ ಹಲವು ರೈತರಿಗೆ ಈತನಕ 2015–16ನೇ ಸಾಲಿನ ಮತ್ತು 16–17ನೇ ಸಾಲಿನ ಬೆಳೆವಿಮೆ ಪರಿಹಾರ ಮೊತ್ತ ಬಿಡುಗಡೆ ಆಗಿಲ್ಲ. ಪರಿಹಾರ ಹಣ ಶೀಘ್ರವೇ ರೈತರ ಖಾತೆಗೆ ಜಮೆ ಮಾಡದಿದ್ದರೆ,  ಡಿಸೆಂಬರ್ 11ರಂದು ಕೃಷಿ ಇಲಾಖೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು’ ಎಂದು ರೈತ ಸಂಘದವರು ಎಚ್ಚರಿಕೆ ನೀಡಿದ್ದಾರೆ. ತಹಶೀಲ್ದಾರ್‌ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದ ರೈತರು,ಈ ಸಂಬಂಧ ಶಿರಸ್ತೇದಾರ್ ಉಮೇಶ ಸವಣೂರ ಅವರಿಗೆ ಮನವಿ ಸಲ್ಲಿಸಿದ್ದಾರೆ.

‘ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಸಂಸದರು ಒತ್ತಾಯ ಮಾಡಿ ಕೇಂದ್ರದಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳ ಬೆಳೆಸಾಲ ಮನ್ನಾ ಮಾಡಿಸಬೇಕು. 2015–16ನೇ ಸಾಲಿನ ಬೆಳೆವಿಮೆ ಪರಿಹಾರದ ಲೆಕ್ಕಾಚಾರದಲ್ಲಿ ಅಕ್ಕಿ–ಭತ್ತ ವಿಂಗಡಣೆ ವ್ಯತ್ಯಾಸದ ಹೆಚ್ಚಿನ ಪರಿಹಾರ ಮೊತ್ತ ಶೀಘ್ರ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಲಾಗಿದೆ.

ಈ ವೇಳೆ ಮಾತನಾಡಿದ ರೈತ ಸಂಘದ ಮುಖಂಡ ಮಲ್ಲೇಶಪ್ಪ ಪರಪ್ಪನವರ, ‘ಕಾರ್ಪೋರೆಟ್‌, ಉದ್ಯಮಿಗಳ ಪರವಾಗಿರುವ ಕೇಂದ್ರ ಸರ್ಕಾರ ರೈತರ ಹಿತ ಕಡೆಗಣಿಸಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ರೈತರ ಚಳವಳಿಯಲ್ಲಿ ಜಿಲ್ಲೆಯ 800 ರೈತರು ಭಾಗಿಯಾಗಿದ್ದರು. ಆದರೆ ರಾಜ್ಯದ ಸಂಸದರು ರೈತರ ಭೇಟಿಗೆ ಬರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಮಾತನಾಡಿದರು. ತಾಲ್ಲೂಕು ಘಟಕದ ಅಧಕ್ಷ ಮರಿಗೌಡ ಪಾಟೀಲ ಮಾತನಾಡಿ, ‘ದೇಶದ ರೈತರು ದೆಹಲಿಯಲ್ಲಿ ಸೇರಿ ಒಮ್ಮತದಿಂದ ಮಂಡಿಸಿದ ಹಕ್ಕೊತ್ತಾಯಗಳಿಗೆ ಪ್ರಧಾನಿ ಮೋದಿ ಸ್ಪಂದಿಸಲಿಲ್ಲ. ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆ ತಳೆದಿದೆ’ ಎಂದು ಆರೋಪಿಸಿದರು.

ರೈತ ಮುಖಂಡ ರುದ್ರಪ್ಪ ಹಣ್ಣಿ ಮಾತನಾಡಿ, ‘ಮನವಿಪತ್ರ ಸಲ್ಲಿಸಿ ಮನೆಗೆ ಹೋಗುವುದಷ್ಟೆ ರೈತರ ಕೆಲಸವಾಗಿದೆ. ಸಮಸ್ಯೆಗಳ ಪರಿಹಾರಕ್ಕೆ ಜನಪ್ರತಿನಿಧಿಗಳನ್ನು ತಡೆದು ನಿಲ್ಲಿಸುವ ಸ್ಥೈರ್ಯ ಬೇಕಾಗಿದೆ’ ಎಂದರು. ವಾಸುದೇವ ಕಮಾಟಿ, ಶ್ರೀಕಾಂತ ದುಂಡಣ್ಣನವರ, ಸುರೇಂದ್ರ ಬಿದರಗಡ್ಡಿ, ಗಂಗಾಧರ ಕೊಪ್ಪದ, ಬಸನಗೌಡ ಪಾಟೀಲ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಹಾನಗಲ್
ಹಾನಗಲ್‌ ಕಾಂಗ್ರೆಸ್‌ನ ಭದ್ರ ಕೋಟೆ: ಮಾನೆ

‘ಹಾನಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ಪಕ್ಷ ರಾಜ್ಯದ ಚುಕ್ಕಾಣಿ ಹಿಡಿಯುತ್ತದೆ, ಹಾನಗಲ್‌ ಕಾಂಗ್ರೆಸ್‌ನ ಭದ್ರ ನೆಲೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಹೇಳಿದರು. ...

23 Apr, 2018
ಹಂದಿಗಳ ಹಾವಳಿ: ರೋಸಿಹೋದ ಜನ

ಕುಮಾರಪಟ್ಟಣ
ಹಂದಿಗಳ ಹಾವಳಿ: ರೋಸಿಹೋದ ಜನ

23 Apr, 2018
ಒಣಗಿದ ಬೃಹತ್ ಬೇವಿನ ಮರ: ಆತಂಕದಲ್ಲಿ ವಾಹನ ಸವಾರರು

ಕುಮಾರಪಟ್ಟಣ
ಒಣಗಿದ ಬೃಹತ್ ಬೇವಿನ ಮರ: ಆತಂಕದಲ್ಲಿ ವಾಹನ ಸವಾರರು

23 Apr, 2018

ಸವಣೂರ
ಪುರಸಭೆಯಿಂದ ಮತದಾನ ಜಾಗೃತಿ ಜಾಥಾ

ಭಾರತದ ಪ್ರತಿಯೊಬ್ಬ ಪ್ರಜೆಗೆ ಮತದಾನ ಜನ್ಮಸಿದ್ಧಹಕ್ಕು. ಅದನ್ನು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ, ಹಕ್ಕನ್ನು ಮಾರಿಕೊಳ್ಳದೆ ಯೋಗ್ಯ ಅಭ್ಯರ್ಥಿಗೆ ಮತ ನೀಡಬೇಕು ಎಂದು ಜಿಲ್ಲಾ...

21 Apr, 2018

ಶಿಗ್ಗಾವಿ
ಸ್ಪರ್ಧೆ ಯಾರ ವಿರುದ್ಧವಲ್ಲ; ಜನಸೇವೆಗಾಗಿ

‘ನಾನು ಚುನಾವಣೆ ಕಣಕ್ಕಿಳಿದಿರುವುದು ಯಾರ ವಿರುದ್ಧವಲ್ಲ. ಯಾರನ್ನೂ ಸೋಲಿಸಲು ಅಲ್ಲ. ಜನ ಸೇವೆ, ಅಭಿವೃದ್ಧಿಗಾಗಿ ಎಂಬುವುದನ್ನು ಮರೆಯಬಾರದು’ ಎಂದು ವಿಧಾನ ಪರಿಷತ್ ಸದಸ್ಯ ಸೋಮಣ್ಣ...

21 Apr, 2018