ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಮ ಮಂದಿರ ಬದಲು ಬುದ್ಧ ಮಂದಿರ ಸ್ಥಾಪಿಸಿ’

Last Updated 28 ನವೆಂಬರ್ 2017, 8:52 IST
ಅಕ್ಷರ ಗಾತ್ರ

ಕಲಬುರ್ಗಿ: ‘ಅಯೋಧ್ಯೆಯಲ್ಲಿರುವ ಬಾಬ್ರಿ ಮಸೀದಿ ಜಾಗದಲ್ಲಿ ಬುದ್ಧನ ಶಿಲಾ ಶಾಸನಗಳು ಪತ್ತೆಯಾಗಿದ್ದು, ಆ ಸ್ಥಳದಲ್ಲಿ ರಾಮ ಮಂದಿರ ಬದಲು ಬುದ್ಧ ಮಂದಿರ ಸ್ಥಾಪಿಸಬೇಕು’ ಎಂದು ಮುಖಂಡ ಗುರುಶಾಂತ ಪಟ್ಟೇದಾರ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೂ ಧರ್ಮ ರಕ್ಷಣೆಗಾಗಿ ಸಂವಿಧಾನ ಬದಲಾಯಿಸಬೇಕು ಎಂಬ ಉಡುಪಿ ಪೇಜಾವರ ಶ್ರೀಗಳ ಹೇಳಿಕೆ ಸರಿಯಲ್ಲ. ಅಂಬೇಡ್ಕರ್‌ ಅವರು ಎಲ್ಲರನ್ನೂ ಒಳಗೊಂಡ ಸಂವಿಧಾನ ರಚಿಸಿದ್ದಾರೆ.

ಈ ಕುರಿತು ಬಿಜೆಪಿ ಮತ್ತು ಆರ್‌ಎಸ್ಎಸ್ ಮುಖಂಡರು ವಿನಾಕಾರಣ ಗೊಂದಲ ಸೃಷ್ಟಿಸುವ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು. ಸಂತೋಷ ಕುಮಾರ ಅಂಕಲಗಿ, ಶಿವಕುಮಾರ ಮದ್ರಿ, ಪವನಕುಮಾರ ಖೇವಣಿ, ಶಾಮರಾಯ ರಾಜಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT