ಶಿವಮೊಗ್ಗ

ಜಿಲ್ಲೆಯಲ್ಲೂ ಕಾಂಗ್ರೆಸ್ ನಿರ್ಮೂಲನೆಗೆ ಪಣ

‘ರಾಜ್ಯ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಸರ್ಕಾರ ಯಾವುದೇ ಅಜೆಂಡಾ ಇಟ್ಟುಕೊಳ್ಳದೇ ಕೇವಲ ಜಾತಿಯ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತಾ ರಾಜಕೀಯ ಮಾಡುತ್ತಿ

ಶಿವಮೊಗ್ಗ: ‘ಕಾಂಗ್ರೆಸ್‌ ಮುಕ್ತ ರಾಜ್ಯದ ಕಲ್ಪನೆ ಯಶಸ್ವಿಯಾಗಲು ಜಿಲ್ಲೆಯಲ್ಲೂ ಕಾಂಗ್ರೆಸ್ ನಿರ್ಮೂಲನೆಗೆ ಶ್ರಮಿಸಬೇಕು’ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ. ಶಂಕರ್ ಕೋರಿದರು. ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ನವ ಭಾರತಕ್ಕಾಗಿ ನವ ಕರ್ನಾಟಕ’ ಕುರಿತ ಜಿಲ್ಲಾ ಪ್ರಣಾಳಿಕಾ ಸಮಿತಿಯ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಸರ್ಕಾರ ಯಾವುದೇ ಅಜೆಂಡಾ ಇಟ್ಟುಕೊಳ್ಳದೇ ಕೇವಲ ಜಾತಿಯ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತಾ ರಾಜಕೀಯ ಮಾಡುತ್ತಿದೆ. ರಾಜ್ಯದ ಅಭಿವೃದ್ಧಿ ಕಡೆಗಣಿಸಿ ಕುರ್ಚಿ ಉಳಿಸಿಕೊಳ್ಳಲು ಸಮಯ ವ್ಯರ್ಥ ಮಾಡುತ್ತಿದೆ’ ಎಂದು ದೂರಿದರು.

ಚುನಾವಣೆಗೆ ಮುಂಚಿತವಾಗಿ ಪಕ್ಷದಿಂದ ಮತದಾರರ ಆಶೋತ್ತರ ಈಡೇರಿಸಲು ಅತ್ಯುತ್ತಮ ಪ್ರಣಾಳಿಕೆ ಸಿದ್ಧಪಡಿಸಬೇಕು. ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಎಲ್ಲ ಭರವಸೆಗಳನ್ನೂ ಈಡೇರಿಸುತ್ತದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಯಾವುದಕ್ಕೆ ಪ್ರಥಮ ಆದ್ಯತೆ ನೀಡಬೇಕು. ಪ್ರತಿ ವಿಧಾನಸಭಾ ಕ್ಷೇತ್ರದ ಅಗತ್ಯತೆ ಏನು ಎಂಬ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಸಲಾಗುವುದು. ನಂತರ ಪ್ರಣಾಳಿಕೆ ಹೊರತರಲಾಗುವುದು’ ಎಂದರು.

‘ಕಾರ್ಯಕರ್ತರು ಮತದಾರರ ಜತೆ ನಿರಂತರ ಸಂಪರ್ಕ ಹೊಂದಿರಬೇಕು. ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಕುರಿತು ಮತದಾರರಿಗೆ ತಿಳಿಸಬೇಕು. ಬಿ.ಎಸ್. ಯಡಿಯೂರಪ್ಪ  ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದರು. ಆ ಅರ್ಹತೆಯ ಮೇಲೆ ಜಿಲ್ಲೆ ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗಿದೆ. ಆದರೆ, ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಅವರು ಸ್ಮಾರ್ಟ್‌ಸಿಟಿ ರೂವಾರಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ರುದ್ರೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಸಂಸದ ಆಯನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಮುಖಂಡರಾದ ಎಸ್.ದತ್ತಾತ್ರಿ, ಸ್ವಾಮಿರಾವ್, ಡಾ. ಶಿವಕುಮಾರ್, ಡಿ.ಎಸ್. ಅರುಣ್ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಕ್ಷೇತ್ರದಲ್ಲಿ ಸಿಗುತ್ತಿಲ್ಲ ಬಾಡಿಗೆ ಮನೆ!

ಶಿವಮೊಗ್ಗ
ಕ್ಷೇತ್ರದಲ್ಲಿ ಸಿಗುತ್ತಿಲ್ಲ ಬಾಡಿಗೆ ಮನೆ!

24 Apr, 2018

ಶಿವಮೊಗ್ಗ
ಕೊನೆಯ ದಿನಕ್ಕೂ ಮುನ್ನ ನಾಮಪತ್ರ ಭರಾಟೆ

ನಾಮಪತ್ರ ಸಲ್ಲಿಕೆಗೆ ಕೇವಲ ಒಂದು ದಿನ ಬಾಕಿ ಉಳಿದಿದ್ದು, ಸೋಮವಾರ ಜಿಲ್ಲೆಯಲ್ಲಿ ಹಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

24 Apr, 2018

ಶಿಕಾರಿಪುರ
ಯಡಿಯೂರಪ್ಪ ಕುತಂತ್ರಕ್ಕೆ ಮತದಾರರು ಬಲಿಯಾಗದಿರಿ

‘ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕುತಂತ್ರಕ್ಕೆ ಕ್ಷೇತ್ರದ ಮತದಾರರು ಬಲಿಯಾಗಬಾರದು’ ಎಂದು ವಿಧಾನ ಪರಿಷತ್‌ ಸದಸ್ಯ ಆರ್. ಪ್ರಸನ್ನಕುಮಾರ್‌ ಕಿವಿಮಾತು ಹೇಳಿದರು. ...

24 Apr, 2018
ಬಡವರ ಹಸಿವು ನೀಗಿಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದು

ಸಾಗರ
ಬಡವರ ಹಸಿವು ನೀಗಿಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದು

24 Apr, 2018
ಇದ್ದು ಇಲ್ಲದಂತಾಗಿರುವ ಸ್ವಾಗತ ಕಮಾನುಗಳು

ಶಿವಮೊಗ್ಗ
ಇದ್ದು ಇಲ್ಲದಂತಾಗಿರುವ ಸ್ವಾಗತ ಕಮಾನುಗಳು

23 Apr, 2018