ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 39 ಸಾವಿರ ಮಂದಿಗೆ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯ ಲಾಭ

Last Updated 28 ನವೆಂಬರ್ 2017, 9:28 IST
ಅಕ್ಷರ ಗಾತ್ರ

ಶಿರಾ: ‘ಜಿಲ್ಲೆಯಲ್ಲಿ 39 ಸಾವಿರ ಮಂದಿ ರೈತರಿಗೆ ಈ ವರ್ಷ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ಲಾಭ ದೊರೆಯಲಿದೆ’ ಎಂದು ಸಚಿವ ಟಿ.ಬಿ.ಜಯಚಂದ್ರ ಹೇಳಿದರು. ನಗರದಲ್ಲಿ ಸೋಮವಾರ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಎಲ್.ಪಿ.ಜಿ ಸಿಲಿಂಡರ್ ಮತ್ತು ಸ್ಟೌ ಹಾಗೂ ಜೇನು ಸಾಕಾಣಿಕೆ ಪೆಟ್ಟಿಗೆಗಳನ್ನು ವಿತರಿಸಿ ಮಾತನಾಡಿದರು.

‘ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಲ್ಲಿ ಶಿರಾ ತಾಲ್ಲೂಕಿನ 10 ಸಾವಿರ ರೈತರಿಗೆ ಎಲ್.ಪಿ.ಜಿ ಸಿಲಿಂಡರ್ ಮತ್ತು ಸ್ಟೌ ನೀಡಲಾಗುವುದು’ ಎಂದರು. ‘ಕೇಂದ್ರ ಸರ್ಕಾರ ಉಜ್ಜಲ ಯೋಜನೆಯಲ್ಲಿ ಸಿಲಿಂಡರ್ ಮತ್ತು ಸ್ಟೌ ನೀಡಿ ನಂತರ ಅವರಿಗೆ ಸಿಲಿಂಡರ್ ನೀಡುವ ಸಬ್ಸಿಡಿ ಹಣವನ್ನು ನೀಡುತ್ತಿಲ್ಲ. ಇದನ್ನು ಮನಗೊಂಡ ರಾಜ್ಯ ಸರ್ಕಾರ ಬಡಜನರಿಗೆ ಅನುಕೂಲ ಮಾಡಿಕೊ

ಡುವ ದೃಷ್ಟಿಯಿಂದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯನ್ನು ₹ 250 ಕೋಟಿ ವೆಚ್ಚದಲ್ಲಿ ಜಾರಿಗೊಳಿಸಿದೆ. ನಾವು ಕೊಡಲು ಸಿದ್ಧವಿದ್ದರು ಸಹ ಕೇಂದ್ರ ಸರ್ಕಾರ ರಾಜಕೀಯ ಲಾಭಕ್ಕಾಗಿ ಚುನಾವಣೆಯ ದೃಷ್ಟಿಯಿಂದ ಎಲ್.ಪಿ.ಜಿ ಸಿಲಿಂಡರ್ ನೀಡಲು ವಿಳಂಬ ಮಾಡುತ್ತಿದೆ’ ಎಂದರು.

‘ಪ್ರಕೃತಿ ವಿಕೋಪ ರೈತರಿಗೆ ಸಂಕಷ್ಟ ತಂದಿದೆ. ಶಿರಾ ತಾಲ್ಲೂಕಿನಲ್ಲಿ ಕಳೆದ 15 ವರ್ಷದಲ್ಲಿ 13 ವರ್ಷ ಬರಗಾಲ ಕಂಡಿದ್ದೇವೆ. ಕುಡಿಯಲು ನೀರು ಸಹ ದೊರೆಯದಂತಾಗಿದೆ. ಗಿಡ–ಮರ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು. ಸಾಲು ಮರದ ತಿಮ್ಮಕ್ಕ ನಮಗೆ ಮಾದರಿಯಾಗಬೇಕು. ಜೀವ ಕೊಡುವ ಮರವನ್ನು ಕಡಿಯುವುದು ಎಷ್ಟು ಸೂಕ್ತ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಅಮಾನುಲ್ಲಾ ಖಾನ್, ತುಮಕೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ, ವಲಯ ಅರಣ್ಯಾಧಿಕಾರಿ ಸುರೇಶ್, ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ನಾಗರಾಜು, ಉಪಕಾರ್ ಗ್ಯಾಸ್ ಏಜೆನ್ಸಿಯ ನಸ್ರುಲ್ಲಾಖಾನ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಂಗನಾಥಗೌಡ, ಸದಸ್ಯರಾದ ಪುಟ್ಟರಾಜು, ಪಾಂಡುರಂಗಪ್ಪ, ಶ್ರೀನಿವಾಸ್, ಚಂದ್ರಪ್ಪ, ಮಂಜುಳಾ ಶೇಷಾನಾಯ್ಕ, ಛಾಯಾ ಮಂಜುನಾಥ್, ನಗರಸಭೆ ಸದಸ್ಯ ಎಸ್.ಜೆ.ರಾಜಣ್ಣ, ಮದಲೂರು ನರಸಿಂಹಮೂರ್ತಿ, ಶೇಷಾನಾಯ್ಕ, ಮುಕುಂದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT