ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಬ್ರಿ ತುಳು–ಕನ್ನಡ ಭಾಷೆಯ ಗಡಿನಾಡು’

Last Updated 28 ನವೆಂಬರ್ 2017, 9:40 IST
ಅಕ್ಷರ ಗಾತ್ರ

ಹೆಬ್ರಿ: ಹೆಬ್ರಿಯಲ್ಲಿ ಕನ್ನಡ ಮತ್ತು ತುಳು ಭಾಷೆ ಎರಡನ್ನೂ ಮಾತನಾಡುತ್ತಾರೆ. ಹೆಬ್ರಿ ಗ್ರಾಮದ ಪಕ್ಕದಿಂದ ಕನ್ನಡ ಮಾತನಾಡುವ ಗ್ರಾಮಗಳು ಆರಂಭ ವಾಗುತ್ತವೆ. ಹಾಗಾಗಿ ಹೆಬ್ರಿ ಕನ್ನಡ ಮತ್ತು ತುಳು ಭಾಷೆಗಳ ಗಡಿನಾಡು ಎಂದು ಕಾರ್ಕಳದ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಹೇಳಿದರು.

ಅವರು ಹೆಬ್ರಿ ಬಸ್ ನಿಲ್ದಾಣದಲ್ಲಿ ಸೋಮವಾರ ವಿಶ್ವ ತುಳುವೆರೆ ಆಯನೊದ ತುಳುನಾಡೋಚ್ಚಯ 2017ರ ಒಪ್ಪು ಸೇರಾವುನ ಸಾರೋಟ್‌ ಅನ್ನು ಸ್ವಾಗತಿಸಿ ಮಾತನಾಡಿದರು.

ತುಳು ಭಾಷೆ ಮಾತನಾಡುವವರು ವಿಶ್ವದೆಲ್ಲಡೆ ಸಿಗುತ್ತಾರೆ. ಅವರಲ್ಲಿ ತುಳು ಮಾತನಾಡಿದಾಗ ತುಂಬಾ ಖುಷಿ ಪಡುತ್ತಾರೆ. ತುಳು ಬದುಕಿನ ಭಾಷೆ, ತುಳು ಜಾಗೃತಿಯ ಭಾಷೆ, ಜಾತಿ ಮತವನ್ನು ಒಗ್ಗೂಡಿಸಿದ ಭಾಷೆ ಎಂದರು.

ತುಳು ಎಂದರೆ ಮೈ ರೋಮಾಂಚನ: ಹೆಬ್ರಿ ತಾಲ್ಲೂಕು ತುಳುನಾ ಡೋಚ್ಚಯ ಸಮಿತಿಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ‘ತುಳು ಭಾಷೆ ಎಂದರೆ ಮೈ ರೋಮಾಂಚನಗೊಳ್ಳುತ್ತದೆ. ತುಳು ಭಾಷೆಗೆ ಗಟ್ಟಿ ತಳಪಾಯ ಹಾಕುವ ಕೆಲಸವನ್ನು ವಿಶ್ವ ತುಳುವೆರೆ ಆಯೊನೊದ ಮೂಲಕ ಮುದ್ರಾಡಿ ನಮ್ ತುಳುವೆರ್ ಕಲಾ ಸಂಘಟನೆಯು ಮಾಡುತ್ತಿರುವುದು ಮೆಚ್ಚುವ ಕೆಲಸ’ ಎಂದರು.

ಎಚ್. ಗೋಪಾಲ ಭಂಡಾರಿ ಅವರು ಸಾರೋಟ್‌ಗೆ ಮಲ್ಲಿಗೆ ಹೂ ಸಮರ್ಪಿಸಿ ಸ್ವಾಗತಿಸಿದರು. ಭಾಸ್ಕರ ಜೋಯಿಸ್ ಮತ್ತು ಧರ್ಮಯೋಗಿ ಮೋಹನ್ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ತುಳು ಭಾಷೆಗೆ ಮಾನ್ಯತೆ ದೊರಕಿಸಲು ಸರ್ಕಾರಕ್ಕೆ ಒತ್ತಡ ಹೇರುವ ಸಹಿ ಸಂಗ್ರಹ ಅಭಿಯಾನಕ್ಕೆ ಭಂಡಾರಿ ಅವರು ಹೆಬ್ರಿಯಲ್ಲಿ ಸಹಿ ಮಾಡಿ ಚಾಲನೆ ನೀಡಿದರು.

ಹೆಬ್ರಿ ತಾಲ್ಲೂಕು ತುಳುನಾ ಡೋಚ್ಚಯ ಸಮಿತಿ ಗೌರವಾಧ್ಯಕ್ಷ ಎಚ್. ಭಾಸ್ಕರ ಜೋಯಿಸ್, ಧರ್ಮಯೋಗಿ ಮೋಹನ್, ಪ್ರಮುಖರಾದ ಸುಕುಮಾರ್ ಮೋಹನ್, ಟಿ.ಜಿ.ಆಚಾರ್ಯ, ಎಚ್. ಜನಾರ್ದನ್, ಸುಜಾತ ಲಕ್ಷ್ಮಣ್, ಗಾಯತ್ರಿ ಆಚಾರ್, ಸೀತಾನದಿ ವಿಠ್ಠಲ ಶೆಟ್ಟಿ, ಕಬ್ಬಿನಾಲೆ ಸೀತಾರಾಮ ಹೆಬ್ಬಾರ್, ಬಾಲಚಂದ್ರ ಮುದ್ರಾಡಿ, ಭುಜಂಗ ಶೆಟ್ಟಿ, ಭೂತುಗುಂಡಿ ಕರುಣಾಕರ ಶೆಟ್ಟಿ, ಆನಂದ ಹೆಗ್ಡೆ, ಕೃಷ್ಣಮೂರ್ತಿ ರಾವ್, ಚಾರ ಪಂಚಾಯಿತಿ ಅಧ್ಯಕ್ಷ ಸಂದೀಪ್, ಸುರೇಶ ಭಂಡಾರಿ, ಶಂಕರ ಶೇರಿಗಾರ್, ಬೇಳಂಜೆ ಹರೀಶ ಪೂಜಾರಿ, ಸುಂದರ ಪೂಜಾರಿ, ಎಚ್.ಕೆ.ನಾರಾಯಣ ನಾಯ್ಕ್, ತಣ್ಣೀರು ಉದಯ ಆಚಾರ್, ವಾಣಿ ಸುಕುಮಾರ್, ಸುಗಂಧಿ ಉಮೇಶ ಕಲ್ಮಾಡಿ, ಸುಧೀಂದ್ರ ಮೋಹನ್, ಗುಳಿಬೆಟ್ಟು ಸುರೇಶ ಶೆಟ್ಟಿ ಉಪಸ್ಥಿತರಿದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT