ಮಂಗಳೂರು

ಕದ್ರಿ ದೇವಸ್ಥಾನಕ್ಕೆ ಶಾಸಕ ಲೋಬೊ ಭೇಟಿ ಬ್ರಹ್ಮಕಲಶ ಪೂರ್ವ ತಯಾರಿಗೆ ಸೂಚನೆ

‘ಕದ್ರಿ ದೇವಸ್ಥಾನವೆಂದರೆ ಜನರಿಗೆ ವಿಶೇಷ ಭಾವನೆ ಇದೆ. ಇಲ್ಲಿಗೆ ಬರುವ ಭಕ್ತರು ಯಾವುದೇ ಅನನುಕೂಲಕ್ಕೆ ಒಳಗಾಗಬಾರದು ಎನ್ನುವುದನ್ನು ನಾವು ಎಚ್ಚರಿಕೆಯಿಂದ ನೋಡಬೇಕು.

ಕದ್ರಿ ದೇವಸ್ಥಾನಕ್ಕೆ ಶಾಸಕ ಲೋಬೊ ಭೇಟಿ ನೀಡಿ ಬ್ರಹ್ಮಕಲಶ ಪೂರ್ವ ತಯಾರಿ ಕುರಿತು ಚರ್ಚಿಸಿದರು.

ಮಂಗಳೂರು: ಕದ್ರಿ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮ 2019ರಲ್ಲಿ ನಡೆಯಲಿದ್ದು ಅದನ್ನು ಅದ್ದೂರಿಯಾಗಿ ಆಯೋಜಿಸಲು ಪೂರ್ವ ತಯಾರಿ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿ, ಅವಶ್ಯಕ ಕಾಮಗಾರಿಗಳ ಬಗ್ಗೆ ಪರಿಶೀಲನೆ ಮಾಡಿ ಅವರು ಮಾತನಾಡಿದರು. ‘ಬ್ರಹ್ಮಕಲಶ ಕಾರ್ಯಕ್ರಮ ಈ ಭಾಗದ ಜನರಿಗೆ ಮಹತ್ವವಾಗಲಿದೆ. ಅದಕ್ಕೆ ಬೇಕಾದ ಕೆಲಸಗಳನ್ನು ಈಗಿನಿಂದಲೇ ಮಾಡಬೇಕು. ಧಾರ್ಮಿಕ ಕೆಲಸವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಬೇಕಾಗುತ್ತದೆ’ ಎಂದರು.

‘ಕದ್ರಿ ದೇವಸ್ಥಾನವೆಂದರೆ ಜನರಿಗೆ ವಿಶೇಷ ಭಾವನೆ ಇದೆ. ಇಲ್ಲಿಗೆ ಬರುವ ಭಕ್ತರು ಯಾವುದೇ ಅನನುಕೂಲಕ್ಕೆ ಒಳಗಾಗಬಾರದು ಎನ್ನುವುದನ್ನು ನಾವು ಎಚ್ಚರಿಕೆಯಿಂದ ನೋಡಬೇಕು. ಏನೆಲ್ಲಾ ಕೆಲಸಗಳು ಇಲ್ಲಿ ಆಗಬೇಕು ಎನ್ನುವುದನ್ನು ಸೂಚಿಸಿದರೆ ಶಾಸಕನಾಗಿ ಮಾಡಲು ಸಿದ್ಧ’ ಎಂದರು.

ದೇವಸ್ಥಾನ ಅಭಿವೃದ್ಧಿ ಕಾಮಗಾರಿ, ಕದ್ರಿ ಸ್ಮಶಾನ ಅಭಿವೃದ್ಧಿ, ದೇವಸ್ಥಾನದ ಬಳಿ ಸಂಚಾರ ಸಮಸ್ಯೆಗಳ ಬಗ್ಗೆ ಅವರು ಸ್ಥಳೀಯರೊಂದಿಗೆ ಚರ್ಚಿಸಿದರು. ಎ.ಸಿ ಪ್ರಮೀಳಾ, ಆಡಳಿತಾಧಿಕಾರಿ ನಿಂಗೇಗೌಡ, ಟ್ರಸ್ಟಿಗಳಾದ ಸುರೇಶ್ ಕುಮಾರ್ ಕದ್ರಿ, ಚಂದ್ರ ಕಲಾ, ದಿನೇಶ್ ದೇವಾಡಿಗ, ಪೇಜಾವರ, ಪುಷ್ಪಲತಾ ಶೆಟ್ಟಿ, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಮುಂತಾದವರು ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಸುಳ್ಯ
ಮಂತ್ರಾಲಯದ ಮೂಲ ಮೃತಿಕೆ ಶ್ರೇಷ್ಠ:

‘ಮಂತ್ರಾಲಯದ ಮೂಲ ಮೃತ್ತಿಕೆ ಬಹಳ ಶ್ರೇಷ್ಠವಾಗಿದ್ದು, ಇದರಲ್ಲಿ ವಿಜ್ಞಾನಿಗಳಿಂದಲೂ ಕಂಡುಹಿಡಿಯಲಾಗದ ಶಕ್ತಿ ಅದರಲ್ಲಿದೆ. ಮೃತಿಕೆ ಅತೀಂದ್ರಿಯ ಶಕ್ತಿಯನ್ನು ಹೊಂದಿದೆ ’ಎಂದು ಶ್ರೀಕ್ಷೇತ್ರ ರಾಘವೇಂದ್ರ ಸ್ವಾಮಿ...

25 Apr, 2018
ಇಂದಿನಿಂದ ಖಾಸಗಿ ಬಸ್‌ ದರ ಹೆಚ್ಚಳ

ಮಂಗಳೂರು
ಇಂದಿನಿಂದ ಖಾಸಗಿ ಬಸ್‌ ದರ ಹೆಚ್ಚಳ

25 Apr, 2018
‘ಸಂವಿಧಾನ ಬದಲಿಸಲು ಅವಕಾಶ ನೀಡದಿರಿ’

ಮಂಗಳೂರು
‘ಸಂವಿಧಾನ ಬದಲಿಸಲು ಅವಕಾಶ ನೀಡದಿರಿ’

24 Apr, 2018
ಕೇಂದ್ರ ಮಾರುಕಟ್ಟೆಯಲ್ಲಿ ಸ್ವಯಂಪ್ರೇರಿತ ಬಂದ್‌

ಮಂಗಳೂರು
ಕೇಂದ್ರ ಮಾರುಕಟ್ಟೆಯಲ್ಲಿ ಸ್ವಯಂಪ್ರೇರಿತ ಬಂದ್‌

24 Apr, 2018

ಮಂಗಳೂರು
ಒಂದೇ ದಿನ 26 ಮಂದಿ ನಾಮಪತ್ರ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿಧಾನಸಭಾ ಚುನಾವಣೆಯ ಕಾವು ಏರಿದ್ದು, ಸಚಿವ ಯು.ಟಿ.ಖಾದರ್‌, ಶಾಸಕರಾದ ಶಕುಂತಳಾ ಶೆಟ್ಟಿ, ಜೆ.ಆರ್‌.ಲೋಬೊ, ಬಿ.ಎ.ಮೊಹಿಯುದ್ದೀನ್ ಬಾವಾ ಸೇರಿದಂತೆ 26 ಅಭ್ಯರ್ಥಿಗಳು...

24 Apr, 2018