ಸಿಂಧನೂರು

‘ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಇಲ್ಲ’

ಜಿಲ್ಲೆಯಲ್ಲಿ ಯಾವೊಬ್ಬ ಶಾಸಕರು ಕಾಂಗ್ರೆಸ್ ತೊರೆದು ಬೇರೆ ಪಕ್ಷಕ್ಕೆ ಹೋಗುವ ಸ್ಥಿತಿ ಇಲ್ಲ. ಅಂತಹ ಹೀನಾಯ ಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ.

ಸಿಂಧನೂರು: ರಾಯಚೂರು ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ವೈಯಕ್ತಿಕವಾಗಿ ವೈಚಾರಿಕ ಭಿನ್ನತೆ ಇದೆಯೇ ಹೊರತು, ಪಕ್ಷದ ವಿಚಾರ ಬಂದಾಗ ಎಲ್ಲ ಮುಖಂಡರು ಒಗ್ಗಟಾಗಿ ನಿಲ್ಲುತ್ತೇವೆ ಎಂದು ರಾಯಚೂರು ಸಂಸದ ಬಿ.ವಿ.ನಾಯಕ ಸ್ಪಷ್ಟಪಡಿಸಿದರು.

ಸೋಮವಾರ ಸುದ್ದಿಗಾರ ಜತೆ ಮಾತನಾಡಿದ, ‘ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಏನೂ ಇಲ್ಲ. ಕೆಲವರು ಈಚೆಿಗೆ ಪಕ್ಷದ ವೇದಿಕೆಯಲ್ಲಿ ಸಮಾಲೋಚಿಸಬೇಕಾದ ಸಂಗತಿಗಳನ್ನು ಬಹಿರಂಗವಾಗಿ ಮಾಧ್ಯಮಗಳ ಮೂಲಕ ಹೇಳಿರುವ ವಿಷಯ ಗಮನಕ್ಕೆ ಬಂದಿದ್ದು, ಅಂತಹವರಿಗೆ ಈಗಾಗಲೇ ನೋಟಿಸ್ ನೀಡಿ ಎಚ್ಚರಿಸಲಾಗಿದೆ.

ಅಲ್ಲದೆ ಹಿರಿಯ ನಾಯಕರಾದ ಹಂಪನಗೌಡ ಬಾದರ್ಲಿ, ಎನ್.ಎಸ್.ಬೋಸರಾಜು, ಎ.ವಸಂತಕುಮಾರ, ಹಂಪಯ್ಯನಾಯಕ ಸೇರಿದಂತೆ ಜನಪ್ರತಿನಿಧಿಗಳ ಸಮನ್ವಯ ಸಮಿತಿಯನ್ನು ರಚಿಸಲಾಗಿದ್ದು, ತಾವು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಧಿಕಾರ ಬಂದಾಗ ಸಹಜವಾಗಿ ಕೆಲವರಲ್ಲಿ ಭಿನ್ನ ವಿಚಾರಗಳು ಬರುತ್ತವೆ. ವೈಯಕ್ತಿಕ ಪ್ರತಿಷ್ಠೆ ಮತ್ತು ದ್ವೇಷದ ಭಾವನೆ ಯಾರಲ್ಲಿಯೂ ಇಲ್ಲ. ಎಲ್ಲರಲ್ಲೂ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕನಸಿದೆ’ ಎಂದರು.

‘ಜಿಲ್ಲೆಯಲ್ಲಿ ಯಾವೊಬ್ಬ ಶಾಸಕರು ಕಾಂಗ್ರೆಸ್ ತೊರೆದು ಬೇರೆ ಪಕ್ಷಕ್ಕೆ ಹೋಗುವ ಸ್ಥಿತಿ ಇಲ್ಲ. ಅಂತಹ ಹೀನಾಯ ಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಹಾಗೂ ಜನಪ್ರಿಯ ಯೋಜನೆಗಳು ಸಾಮಾನ್ಯ ಜನರ ಮನಸು ಗೆದ್ದಿವೆ. ಎಲ್ಲ ವರ್ಗಗಳ ಜನರ ಹಿತಾಸಕ್ತಿಯನ್ನು ಹೊಂದಿರುವ ಪಕ್ಷ ಕಾಂಗ್ರೆಸ್‌’ ಎಂದು ಸಮರ್ಥಿಸಿಕೊಂಡರು.

83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂಪಾ ಅವರು ರಾಜಕೀಯದ ವಿಚಾರ ಮಾತನಾಡಿರುವುದು ಅವರ ವ್ಯಕ್ತಿಗತ ಸ್ವಾತಂತ್ರ್ಯ. ಆದರೆ, ಬಿಜೆಪಿಯವರು ದೊಡ್ಡದನ್ನಾಗಿ ಮಾಡಲು ಹೊರಟಿದ್ದಾರೆ. ಏಕೆಂದರೆ ಅವರಿಗೆ ಬೇರೆ ಯಾವುದೇ ವಿಷಯ ಇಲ್ಲ ಎಂದು ಟೀಕಿಸಿದರು. ಮುಖಂಡರಾದ ಶಾಕೀರ್‌ಪಾಷಾ ತುರಕಟ್ಟಿ, ಅಮ್ಜದ್ಅಲಿ, ಕಮಲ್‌ ಕುಮಾರ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ರಾಯಚೂರು ಬಿಜೆಪಿ ಶಕ್ತಿ ಕೇಂದ್ರ ಆಗಲಿದೆ: ಸಂಸದ

ರಾಯಚೂರು
ರಾಯಚೂರು ಬಿಜೆಪಿ ಶಕ್ತಿ ಕೇಂದ್ರ ಆಗಲಿದೆ: ಸಂಸದ

21 Mar, 2018

ಮಾನ್ವಿ
‘ಬರಹಗಾರರಿಂದ ಸಮಾಜ ತಿದ್ದುವ ಕೆಲಸ ನಡೆಯಲಿ’

‘ಬರಹಗಾರರಿಂದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಸಮಾಜ ತಿದ್ದುವ ಕೆಲಸ ಅಗತ್ಯ’ ಎಂದು ಲೇಖಕಿ ಡಾ.ಗಂಗಮ್ಮ ಸತ್ಯಂಪೇಟೆ ಹೇಳಿದರು.

21 Mar, 2018

ರಾಯಚೂರು
ಚುನಾವಣೆ ಕರ್ತವ್ಯ ನಿರ್ಲಕ್ಷಿಸಿದರೆ ಕ್ರಮ

ಚುನಾವಣಾ ಕಾರ್ಯಗಳಿಗೆ ನಿಯೋಜಿತ ಅಧಿಕಾರಿಗಳು ಚುನಾವಣಾ ಸಭೆಗೆ ಗೈರು ಹಾಜರಿ ಆಗುವುದು ಅಥವಾ ತಡವಾಗಿ ಬರುವುದು ಸಲ್ಲದು. ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಸೂಕ್ತ...

21 Mar, 2018

ಮಾನ್ವಿ
‘ಬಿಜೆಪಿ ಗೆಲುವು ಖಚಿತ’

‘ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಜನಮನ್ನಣೆ ಮುಂದುವರಿದಿದ್ದು, ಕರ್ನಾಟದಲ್ಲಿಯೂ ಕೂಡ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬರುವುದು ಖಚಿತ’ಎಂದು...

21 Mar, 2018
ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ

ಸಿರವಾರ
ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ

20 Mar, 2018