ಚಿಕ್ಕನಾಯಕನಹಳ್ಳಿ

ಬಯಲು ಶೌಚಮುಕ್ತ ಪಟ್ಟಣದ ಕನಸು

ಒಂದೆಡೆ ಮುಂದಿನ ಎರಡು ತಿಂಗಳಲ್ಲಿ ಬಯಲು ಶೌಚಮುಕ್ತ ಪಟ್ಟಣ ಮಾಡುತ್ತೇವೆ ಎಂದು ಪುರಸಭೆ ಅಧಿಕಾರಿಗಳು ಶೌಚಾಲಯ ನಿರ್ಮಿಸಿಕೊಳ್ಳದ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.

ಚಿಕ್ಕನಾಯಕನಹಳ್ಳಿ: ಒಂದೆಡೆ ಮುಂದಿನ ಎರಡು ತಿಂಗಳಲ್ಲಿ ಬಯಲು ಶೌಚಮುಕ್ತ ಪಟ್ಟಣ ಮಾಡುತ್ತೇವೆ ಎಂದು ಪುರಸಭೆ ಅಧಿಕಾರಿಗಳು ಶೌಚಾಲಯ ನಿರ್ಮಿಸಿಕೊಳ್ಳದ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಇನ್ನೊಂದೆಡೆ ಪುರಸಭೆ ವತಿಯಿಂದ ನಿರ್ಮಾಣ ಮಾಡಿರುವ ಸಾರ್ವಜನಿಕ ಶೌಚಾಲಯಗಳು ನಿರ್ವಹಣೆಯಿಲ್ಲದೆ ಗಬ್ಬೆದ್ದು, ನಾರುತ್ತಿದ್ದು ಅಧಿಕಾರಿಗಳ ನಡೆ ನಗೆಪಾಡಲಿಗೀಡಾಗಿದೆ.

ಪಟ್ಟಣದ 18ನೇ ವಾರ್ಡ್‌ನಲ್ಲಿ ಶೌಚಾಲಯ ಸಮಚ್ಛಯ ನಿರ್ಮಾಣವಾಗಿ 5 ವರ್ಷ ಕಳೆದಿದ್ದರೂ ಸಾರ್ವಜನಿಕರ ಬಳಕೆಗೆ ಲಭ್ಯವಾಗಿಲ್ಲ. ತಿ.ನಂ.ಶ್ರೀ. ಸಾರ್ವಜನಿಕ ಗ್ರಂಥಾಲಯದ ಬಳಿ ನಿರ್ಮಿಸಿರುವ ಶೌಚಾಲಯ, ಶೆಟ್ಟಿಕೆರೆ ಗೇಟ್ ಬಳಿಯ ಆಯುಷ್ ಆಸ್ಪತ್ರೆ ಹಿಂಬದಿಯ ಸಾರ್ವಜನಿಕ ಶೌಚಾಲಯ, 23ನೇ ವಾರ್ಡ್‌ ನಾಯಕರ ಬೀದಿಯ ಸಾರ್ವಜನಿಕ ಶೌಚಾಲಯದ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ.

ವೆಂಕಟರಮಣಸ್ವಾಮಿ ದೇವಾಲಯದ ಆವರಣ, ಮಾವರದಮ್ಮನಗುಡಿ ಆಸುಪಾಸು, ಕೆರೆ ಏರಿ, ವೆಂಕಣ್ಣನ ಕಟ್ಟೆ ಉದ್ಯಾನ, ಎಪಿಎಂಸಿ ಪ್ರಾಂಗಣ, ಅಂಬೇಡ್ಕರ್ ನಗರ, ಡಿವಿಪಿ ಪ್ರೌಢಶಾಲೆ ಆಸುಪಾಸು, ಉರ್ದು ಶಾಲೆ ಆವರಣ ಹೀಗೆ ಹಲವು ಸಾರ್ವಜನಿಕ ಸ್ಥಳಗಳು ಬಯಲು ಬಹಿರ್ದೆಸೆ ತಾಣಗಳಾಗಿ ಮಾರ್ಪಟ್ಟಿವೆ. ಈ ಅವ್ಯವಸ್ಥೆಯನ್ನು ಕಣ್ಣೆತ್ತಿ ನೋಡದ ಪುರಸಭೆ ಅಧಿಕಾರಿಗಳು 2 ತಿಂಗಳಲ್ಲಿ ಪಟ್ಟಣವನ್ನು ಬಯಲು ಬಹಿರ್ದೆಸೆ ಮುಕ್ತ ಮಡುತ್ತೇವೆ ಎಂದು ಹೇಳಿಕೊಳ್ಳುತ್ತಿರುವುದು ನಗೆಪಾಟಲಿಗೆ ಕಾರಣವಾಗಿದೆ ಎಂದು 18ನೇ ವಾರ್ಡ್‌ ನಾಗರಿಕ ನಟರಾಜು ಹೇಳುತ್ತಾರೆ.

ನೆಹರೂ ಸರ್ಕಲ್, ಶೆಟ್ಟಿಕೆರೆ ಗೇಟ್, ಸಂತೆ ಮೈದಾನ, ಕೋಡುಗಲ್ಲು ರಸ್ತೆ, ಬೆಳಗಿನ ಮಾರುಕಟ್ಟೆ ಹಾಗೂ ಎಪಿಎಂಸಿ ಆವರಣದಲ್ಲಿ ಜನದಟ್ಟಣೆ ಹೆಚ್ಚು ಇದ್ದು, ದೂರದ ಹಳ್ಳಿಗಳಿಂದ ಬರುವ ಹೆಂಗಸರು, ಮಕ್ಕಳು ಸಾರ್ವಜನಿಕ ಶೌಚಾಲಯವಿಲ್ಲದೆ ಯಮ ಯಾತನೆ ಪಡುವಂತಾಗಿದೆ. ಈ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ ಹಾಗೂ ಇರುವ ಶೌಚಾಲಯಗಳನ್ನು ಸರಿಯಾಗಿ ನಿರ್ವಹಿಸುವಂತೆ ಒತ್ತಾಯಿಸಿದರು ಪುರಸಭೆ ಅಧಿಕಾರಿಗಳು ಕಿವುಗೊಡುತ್ತಿಲ್ಲ ಎಂಬುದು ನಗರದ ನಿವಾಸಿ ಪರಮೇಶ್ ಆರೋಪ.

* * 

ಪಟ್ಟಣದಲ್ಲಿ ಬಯಲು ಮುಕ್ತ ಶೌಚಾಲಯ ಆಂದೋಲನ ಶುರುವಾಗಿದೆ.ಎರಡುವರೆ ತಿಂಗಳಲ್ಲಿ ಎಲ್ಲ ಮನೆಗಳಲ್ಲೂ ಶೌಚಾಲಯ ನಿರ್ಮಿಸಿಕೊಳ್ಳಲು ಮನವೊಲಿಸಲಾಗುವುದು.
-ಚಂದ್ರಶೇಖರ್, ಪರಿಸರ ಎಂಜಿನಿಯರ್, ಪುರಸಭೆ ಚಿ.ನಾ.ಹಳ್ಳಿ

Comments
ಈ ವಿಭಾಗದಿಂದ ಇನ್ನಷ್ಟು
ಬಗರ್ ಹುಕುಂ ಸಾಗುವಳಿ: ಹಕ್ಕುಪತ್ರಕ್ಕೆ ಆಗ್ರಹ

ಗುಬ್ಬಿ
ಬಗರ್ ಹುಕುಂ ಸಾಗುವಳಿ: ಹಕ್ಕುಪತ್ರಕ್ಕೆ ಆಗ್ರಹ

23 Jan, 2018

ಗುಬ್ಬಿ
ಕಾವೇರಿ ತೀರ್ಪು: ಹೋರಾಟಕ್ಕೆ ಸಿದ್ಧತೆ

ಕಾವೇರಿ ನ್ಯಾಯಾಧಿಕರಣದ ತೀರ್ಪು ರಾಜ್ಯದ ಪರವಾಗಿ ಬಂದರೆ ತುಮಕೂರು ಜಿಲ್ಲೆಗೆ ಹೆಚ್ಚು ನೀರು ಸಿಗಲಿದೆ. ಹೇಮಾವತಿ ನಾಲೆಯಿಂದ ಕಾವೇರಿ ಮೂಲಕ 23 ಟಿಂಎಂಸಿ ಅಡಿ...

23 Jan, 2018
ಸರಳ ವಿವಾಹ: ಸುಂದರ ಜೀವನಕ್ಕೆ ರಹದಾರಿ

ತುಮಕೂರು
ಸರಳ ವಿವಾಹ: ಸುಂದರ ಜೀವನಕ್ಕೆ ರಹದಾರಿ

23 Jan, 2018
ಸಂಘಟಿತರಾದರೆ ಸೌಲಭ್ಯ ಪಡೆಯಲು ಸಾಧ್ಯ

ತುಮಕೂರು
ಸಂಘಟಿತರಾದರೆ ಸೌಲಭ್ಯ ಪಡೆಯಲು ಸಾಧ್ಯ

22 Jan, 2018

ಕೊಡಿಗೇನಹಳ್ಳಿ
ಸರ್ಕಾರಿ ಜಾಗದಲ್ಲಿ ರಾತ್ರೋ ರಾತ್ರಿ ಕಟ್ಟಡ: ಆಕ್ರೋಶ

ಸರ್ವೆ ನಡೆಸಿ ಬಾಂಡು ಕಲ್ಲು ಹಾಕುವವರಿಗೆ ಯಾವುದೇ ಕಾಮಗಾರಿ ನಡೆಸಬಾರದು ಎಂದು ಅಧಿಕಾರಿಗಳು ಸೂಚಿಸಿದ್ದರು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ರಾತ್ರೋ ರಾತ್ರಿ ಕಮಲ್...

22 Jan, 2018