ಸುರಪುರ

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ

‘ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ತಾಲ್ಲೂಕಿನಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳೇ ಶ್ರೀರಕ್ಷೆ ಆಗಿದ್ದು, ಮುಂಬರುವ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು’

ಸುರಪುರ: ತಾಲ್ಲೂಕಿನ ಜುಮಾಲಪುರ ತಾಂಡಾದ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಚಿವ ರಾಜುಗೌಡ ಅವರ ಸಮ್ಮುಖದಲ್ಲಿ ಮಂಗಳವಾರ ಬಿಜೆಪಿ ಸೇರ್ಪಡೆಯಾದರು.

ಪಕ್ಷಕ್ಕೆ ಬರಮಾಡಿಕೊಂಡ ರಾಜುಗೌಡ ಮಾತನಾಡಿ, ‘ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಕೈಗೊಂಡಿರುವ ಯೋಜನೆಗಳನ್ನು ಮನೆ ಮನೆಗೆ ತಲುಪಿಸಬೇಕು. ಮತ್ತು ಈ ಕುರಿತು ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

‘ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ತಾಲ್ಲೂಕಿನಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳೇ ಶ್ರೀರಕ್ಷೆ ಆಗಿದ್ದು, ಮುಂಬರುವ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು’ ಎಂದರು.

ಗೋವಿಂದಪ್ಪ ಸಾಹುಕಾರ, ವಸರಾಮ ಸಾಹುಕಾರ, ಹೊನ್ನಪ್ಪ ತೋಟದ, ರಾಜು ಪೂಜಾರಿ, ಬಾಬು ಪೂಜಾರಿ, ಗೋಪಿಲಾಲ ರಾಠೋಡ, ಶೇಖರ ಸಾಹುಕಾರ, ಶಂಕರ ರಾಠೋಡ, ಶಿವಪ್ಪ ರಾಠೋಡ, ಗೋವಿಂದಪ್ಪ ಮಡ್ಡಿ, ತಿರುಪತಿ ರಾಠೋಡ, ದೇವದಾಸ ಚವ್ಹಾಣ ಸೇರಿದಂತೆ 50ಕ್ಕೂ ಹೆಚ್ಚು ಜನ ಬಿಜೆಪಿಗೆ ಸೇರ್ಪಡೆಗೊಂಡರು.

ಮುಖಂಡರಾದ ವೆಂಕಟೇಶ ಸಾಹುಕಾರ, ಶಾಂತಿಲಾಲ ರಾಠೋಡ, ಸಂಗನಗೌಡ ವಜ್ಜಲ, ಎಚ್.ಸಿ.ಪಾಟೀಲ, ಮೋತಿಲಾಲ ಚವ್ಹಾಣ, ಬಸಣ್ಣ ಸಾಹುಕಾರ ಬೈಲಕುಂಟಿ, ಗದ್ದೆಪ್ಪ ಪೂಜಾರಿ, ಅಮರೇಶ ಸಾಹುಕಾರ ಗೆದ್ದಲಮರಿ, ಟಾಕಪ್ಪ ಕಾರಬಾರಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಅರ್ಹರಿಗೆ ಸಿಗದ ಸರ್ಕಾರದ ಸೂರು

ಯಾದಗಿರಿ
ಅರ್ಹರಿಗೆ ಸಿಗದ ಸರ್ಕಾರದ ಸೂರು

20 Mar, 2018

ಮಹಿಳೆಯರಿಗೆ ಒಂದೇ ಸೂರಿನಡಿ ವಿವಿಧ ಸೌಲಭ್ಯ
‘ಗೆಳತಿ’ ವಿಶೇಷ ಚಿಕಿತ್ಸಾ ಘಟಕ ಆರಂಭ

‘ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವಿವಿಧ ಸೌಲಭ್ಯಗಳನ್ನು ಒದಗಿಸಲು ‘ಗೆಳತಿ’ ವಿಶೇಷ ಚಿಕಿತ್ಸಾ ಘಟಕವನ್ನು ತಾಲ್ಲೂಕು ಕೇಂದ್ರದಲ್ಲಿ ಪ್ರಾರಂಭಿಸಲಾಗಿದೆ’ ಎಂದು ಶಿಶು ಅಭಿವೃದ್ಧಿ ಅಧಿಕಾರಿ...

20 Mar, 2018

ಯಾದಗಿರಿ
ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಷಡ್ಯಂತ್ರ

‘ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾನಮಾನ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ನಿರ್ಧರಿಸಿರುವುದು ಕಾಂಗ್ರೆಸ್‌ ಸರ್ಕಾರದ ಷಡ್ಯಂತ್ರವಾಗಿದೆ’ ಎಂದು ಜಿಲ್ಲೆಯ ಅಬ್ಬೆತುಮಕೂರು...

20 Mar, 2018
ಯಾದಗಿರಿ ನಗರಸಭೆಯಿಂದ ನಿತ್ಯ ನೀರು ಪೂರೈಕೆ

ಯಾದಗಿರಿ
ಯಾದಗಿರಿ ನಗರಸಭೆಯಿಂದ ನಿತ್ಯ ನೀರು ಪೂರೈಕೆ

19 Mar, 2018
ಕಾಂಗ್ರೆಸ್ ಮುಕ್ತ ಭಾರತ ಸನ್ನಿಹಿತ

ಯಾದಗಿರಿ
ಕಾಂಗ್ರೆಸ್ ಮುಕ್ತ ಭಾರತ ಸನ್ನಿಹಿತ

17 Mar, 2018