ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಸಾಹಿತ್ಯ ಪರಿಷತ್ ಚಂಪಾ ಹೇಳಿಕೆ ಖಂಡಿಸಲಿ’

Last Updated 29 ನವೆಂಬರ್ 2017, 6:20 IST
ಅಕ್ಷರ ಗಾತ್ರ

ಶಿರಸಿ: ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಸರ್ವಾಧ್ಯಕ್ಷರಾಗಿದ್ದ ಚಂದ್ರ ಶೇಖರ ಪಾಟೀಲ (ಚಂಪಾ) ಅವರ ರಾಜಕೀಯದ ಮಾತುಗಳು ಸಾಹಿತ್ಯದ ವೇದಿಕೆಗೆ ಗೌರವ ತರುವಂಥವುಗಳಲ್ಲ. ಶತಮಾನಗಳ ಇತಿಹಾಸ ಹೊಂದಿರುವ ಸಾಹಿತ್ಯ ಪರಿಷತ್ ಅವರ ಈ ಹೇಳಿಕೆ ಯನ್ನು ಖಂಡಿಸಬೇಕು ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.

ಮಂಗಳವಾರ ಇಲ್ಲಿ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ಯಲ್ಲಿ ಅವರು ಮಾತನಾಡಿದರು. ‘ರಾಜ್ಯದ ಕಾಂಗ್ರೆಸ್ ಸರ್ಕಾರ ಎಲ್ಲ ವೇದಿಕೆ ದುರುಪಯೋಗಪಡಿಸಿ ಕೊಳ್ಳುತ್ತಿರು ವುದನ್ನು ಜನ ಗುರುತಿಸಿದ್ದಾರೆ. ಆಸಕ್ತಿ ಇದ್ದರೆ ಚಂಪಾ ನೇರವಾಗಿ ರಾಜಕೀಯಕ್ಕೆ ಬರಲಿ. ಯಾವುದೇ ಪಕ್ಷ ಸೇರುವುದಿದ್ದರೆ, ಪಕ್ಷ ಕಟ್ಟುವುದಿದ್ದರೆ ಕಟ್ಟಲಿ. ಅದು ಬಿಟ್ಟು ಸಾಹಿತ್ಯ ಪರಿಷತ್ ಬಗ್ಗೆ ಜನರಿಗೆ ಇರುವ ಪವಿತ್ರ ಭಾವನೆ ಘಾಸಿಗೊಳಿಸಿರುವುದು ಸರಿಯಲ್ಲ. ಚಂಪಾ ಹೇಳಿಕೆಯನ್ನು ಸಾಹಿತ್ಯ ಪರಿಷತ್ ಜಿಲ್ಲಾ, ತಾಲ್ಲೂಕು ಘಟಕಗಳು ಖಂಡಿಸಬೇಕು’ ಎಂದರು.

ಬೂತ್ ಸಶಕ್ತೀರಣ ಚುರುಕು ಗೊಳ್ಳಬೇಕು. ಪ್ರತಿ ಬೂತ್‌ನಲ್ಲಿ ಸಮಿತಿಯ ಒಂಬತ್ತು ಪದಾಧಿಕಾರಿಗಳನ್ನು ಸೇರಿಸಿ ನವಶಕ್ತಿ ಸಮಾವೇಶ ನಡೆಸಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಈ ಕಾರ್ಯದಲ್ಲಿ ನಡೆಯಲಿದೆ ಎಂದರು.

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಪರಿವರ್ತನಾ ಯಾತ್ರೆ ಜಿಲ್ಲೆಯಲ್ಲಿ ಬಿಜೆಪಿ ಅಲೆ ಮೂಡಿಸಿದೆ. ಈ ಅಲೆ ತಡೆ ಯಲು ಕಾಂಗ್ರೆಸ್ಸಿಗರು ಮುಖ್ಯಮಂತ್ರಿ ಕರೆಯಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ಮುಖ್ಯಮಂತ್ರಿ ಪ್ರವಾಸ ವ್ಯರ್ಥ ಪ್ರಯತ್ನ ಆಗಲಿದೆ ಎಂದು ಭವಿಷ್ಯ ನುಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಶಿವಾನಂದ ನಾಯ್ಕ, ಜೆ.ಡಿ.ನಾಯ್ಕ, ದಿನಕರ ಶೆಟ್ಟಿ, ಕೃಷ್ಣ ಎಸಳೆ, ರಾಮು ರಾಯ್ಕರ್, ಗಣೇಶರಾವ್ ಇದ್ದರು. ಆರ್‌.ಡಿ. ಹೆಗಡೆ ನಿರೂಪಿಸಿದರು.

* *

ಬಿಜೆಪಿಯ ಪರಿವರ್ತನಾ ಯಾತ್ರೆಯ ಯಶಸ್ಸನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಜಿಲ್ಲೆಯ ಎಲ್ಲ ಆರು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಮುಖ್ಯಮಂತ್ರಿಯನ್ನು ಕರೆಯಿಸುತ್ತಿದೆ
ವಿಶ್ವೇಶ್ವರ ಹೆಗಡೆ ಕಾಗೇರಿ
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT