ರಾಮದುರ್ಗ

‘ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ’

‘ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ದೊರೆತರೆ ಕುಮಾರಸ್ವಾಮಿ ಪುನಃ ಮುಖ್ಯಮಂತ್ರಿಯಾಗಲಿದ್ದಾರೆ. ಉತ್ತರ ಕರ್ನಾಟಕದ ಹಲವಾರು ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ’

ರಾಮದುರ್ಗ: ‘ಬಡವರ, ದೀನ ದಲಿತರ ಮತ್ತು ರೈತರ ಹಿತ ಕಾಪಾಡುವಲ್ಲಿ ರಾಷ್ಟ್ರೀಯ ಪಕ್ಷಗಳು ವಿಫಲವಾಗಿವೆ. ಮುಂಬರುವ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ಗೆ ಮತ ನೀಡಿ, ಅಧಿಕಾರಕ್ಕೆ ತರಬೇಕು’ ಎಂದು ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ಜಾವೀದ್‌ ಹೇಳಿದರು.

ತಾಲ್ಲೂಕಿನ ಮುದೇನೂರ ಗ್ರಾಮದಲ್ಲಿ ಸೋಮವಾರ ’ಮನೆ ಮನೆಗೆ ಕುಮಾರಣ್ಣ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಜಾರಿಗೊಳಿಸಿದ್ದ ಯೋಜನೆಗಳ ಬಗ್ಗೆ ಕಾರ್ಯಕರ್ತರು ಮನೆಮನೆಗೆ ತೆರಳಿ ಪ್ರಚಾರ ಮಾಡಬೇಕು’ ಎಂದರು.

‘ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ದೊರೆತರೆ ಕುಮಾರಸ್ವಾಮಿ ಪುನಃ ಮುಖ್ಯಮಂತ್ರಿಯಾಗಲಿದ್ದಾರೆ. ಉತ್ತರ ಕರ್ನಾಟಕದ ಹಲವಾರು ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಶಿವಣ್ಣ ಅಂಗಡಿ, ರೈತ ಘಟಕದ ಅಧ್ಯಕ್ಷ ಬಸವರಾಜ ಕರಿಗಾರ, ಮುದೇನೂರ ಪಂಚಾಯ್ತಿ ಉಪಾಧ್ಯಕ್ಷ ಹುಸೇನಸಾಬ ಬಡೇಖಾನ, ಈರಪ್ಪ ಬಲ್ಕಿ, ಬಸವರಾಜ ಜಾಯಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಗೋಕಾಕಿಗೆ ಜಿಲ್ಲಾ ಮಾನ್ಯತೆ: ಶ್ರೀಗಳಿಗೆ ಹೋರಾಟದ ನೇತೃತ್ವ

ಗೋಕಾಕ
ಗೋಕಾಕಿಗೆ ಜಿಲ್ಲಾ ಮಾನ್ಯತೆ: ಶ್ರೀಗಳಿಗೆ ಹೋರಾಟದ ನೇತೃತ್ವ

13 Dec, 2017

ಬೈಲಹೊಂಗಲ
‘ದೇಶಕ್ಕೆ ದಾರ್ಶನಿಕರ ಕೊಡುಗೆ ಅಪಾರ’

‘ದೇಶದ ಸಂಸ್ಕೃತಿಗೆ ಹಲವಾರು ದಾರ್ಶನಿಕರು ಅಧ್ಯಾತ್ಮ ಮೌಲ್ಯ ನೀಡಿದ್ದಾರೆ. ಈ ಮೌಲ್ಯ ಉಳಿಸಿ ಬೆಳೆಸುವುದು ನಮ್ಮೆಲ್ಲರ ಮೇಲಿದೆ.

13 Dec, 2017

ಬೆಳಗಾವಿ
ಶಾಸಕ ಪಾಟೀಲ ವಿರುದ್ಧ ಪ್ರತಿಭಟನೆ

ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಗಡಿ ವಿವಾದ ತೀರ್ಪು ಮರಾಠಿಗರ ಪರವಾಗಿ ಬರಲಿ

13 Dec, 2017
ಅಪಾಯದ ಅಂಚಿನಲ್ಲಿ ಮೇಲ್ಮಟ್ಟದ ನೀರಿನ ಟ್ಯಾಂಕ್

ಮೂಡಲಗಿ
ಅಪಾಯದ ಅಂಚಿನಲ್ಲಿ ಮೇಲ್ಮಟ್ಟದ ನೀರಿನ ಟ್ಯಾಂಕ್

12 Dec, 2017

ಸವದತ್ತಿ
ಕಲ್ಮಠದಲ್ಲಿ ದ್ವಿತೀಯ ರಥೋತ್ಸವ ಸಂಭ್ರಮ

ಮಲಪ್ರಭಾ ನದಿ ದಡದಲ್ಲಿ ಈಗಿನ ಒಡಕಹೊಳೆಯ ದುರ್ಗಮ ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದ ಆ ಯೋಗಿಯ ದರ್ಶನ ಪಡೆಯಲು ಭಕ್ತರು ಬರುತ್ತಿದ್ದರು. ಎರಡು ತಿಂಗಳ ಕಠಿಣ...

12 Dec, 2017