ಧಾರವಾಡ

'ಮೈಸೂರು ಸಿಲ್ಕ್‌' ಸೀರೆಗೆ ಅಂತರರಾಷ್ಟ್ರೀಯ ಹಿರಿಮೆ

ಕೆ.ಎಸ್.ಐ.ಸಿ. ಉತ್ಪಾದನೆಯ ರೇಷ್ಮೆ ಸೀರೆಗಳಿಗೆ ದೇಶದಲ್ಲಿ ಮಾತ್ರವಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ತನ್ನದೇ ಆದ ಬೇಡಿಕೆ ಇದೆ’

ಮೈಸೂರು ಸಿಲ್ಕ್‌ ಸೀರೆಗಳ ಪ್ರದರ್ಶನ ಮತ್ತು ಮಾರಾಟದಲ್ಲಿ ₹70 ಸಾವಿರ ಮುಖಬೆಲೆಯ ನೂತನ ಸೀರೆಯನ್ನು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಬಿಡುಗಡೆಗೊಳಿಸಿದರು

ಧಾರವಾಡ: ‘ಕೆ.ಎಸ್.ಐ.ಸಿ. ಉತ್ಪಾದನೆಯ ರೇಷ್ಮೆ ಸೀರೆಗಳಿಗೆ ದೇಶದಲ್ಲಿ ಮಾತ್ರವಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ತನ್ನದೇ ಆದ ಬೇಡಿಕೆ ಇದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.

ಇಲ್ಲಿನ ಭಾವಸಾರ ಮಂಗಲ ಕಾರ್ಯಾಲಯದಲ್ಲಿ ಮಂಗಳವಾರದಿಂದ ಆರಂಭವಾದ ಕೆ.ಎಸ್.ಐ.ಸಿ. ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಉದ್ಘಾಟಿಸಿ ಮಾತನಾಡಿದ ಅವರು, ‘ಈ ರೀತಿಯ ಪ್ರದರ್ಶನ ಮತ್ತು ಮಾರಾಟದಿಂದ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಉತ್ಪಾದನೆಗಳು ದೊರೆಯುವುದರ ಜೊತೆ ರೇಷ್ಮೆ ಬೆಳೆಗಾರರಿಗೂ ಪ್ರೋತ್ಸಾಹ ದೊರೆಯುತ್ತದೆ’ ಎಂದರು. 

ಸಂಸ್ಥೆ ನೂತನವಾಗಿ ಉತ್ಪಾದಿಸಿರುವ ಹೊಸ ಮಾದರಿಯ ₹70 ಸಾವಿರ ಮೌಲ್ಯದ ಸೀರೆಯನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದರು. ಸಂಸ್ಥೆಯ ಮಾರುಕಟ್ಟೆ ವ್ಯವಸ್ಥಾಪಕ ಭಾನುಪ್ರಕಾಶ್ ಮಾತನಾಡಿ, ‘ಮೈಸೂರು ಸಿಲ್ಕ್ ತನ್ನ ಗುಣಮಟ್ಟದಿಂದಾಗಿ ಖ್ಯಾತಿ ಪಡೆದಿದೆ. ಕೆ.ಎಸ್.ಐ.ಸಿ.ಗೆ ರಾಜ್ಯ ಸರ್ಕಾರ ‘ಮುಖ್ಯಮಂತ್ರಿ ವಾರ್ಷಿಕ ರತ್ನ ಪ್ರಶಸ್ತಿ’ ನೀಡಿದೆ. ಈ ಸೀರೆಗಳಿಗೆ ಭೌಗೋಳಿಕ ಗುರುತಿನ ನೋಂದಣಿ ದೊರೆತಿದೆ. ಪ್ರದರ್ಶನ ಮತ್ತು ಮಾರಾಟ ಡಿ.4 ರವರೆಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 8ರವರೆಗೆ ನಡೆಯಲಿದೆ.

Comments
ಈ ವಿಭಾಗದಿಂದ ಇನ್ನಷ್ಟು

ಧಾರವಾಡ
‘ಏಕ ಸಂಸ್ಕೃತಿ ಹೇರಿಕೆ ಸಲ್ಲದು’

‘ಸಂಸ್ಕೃತಿ ಎನ್ನುವುದು ಜೀವನದ ವಿಧಾನ. ಸಂಸ್ಕೃತಿಯಲ್ಲಿ ವೈವಿಧ್ಯ ಇದ್ದರೂ ಇತರರ ನಡವಳಿಕೆ, ರೂಢಿ, ನಂಬಿಕೆ, ವಿಶ್ವಾಸವನ್ನು ಗೌರವಿಸುವುದಾಗಿದೆ. ಸಾಹಿತ್ಯ ನಮ್ಮ ಜೀವನದ ಪ್ರತಿಬಿಂಬ.

13 Dec, 2017
ಧಾರವಾಡದಲ್ಲಿ ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿ: ನೆರವಿಗೆ ಬಂದ ಸಚಿವ ವಿನಯ ಕುಲಕರ್ಣಿ

ಧಾರವಾಡ
ಧಾರವಾಡದಲ್ಲಿ ಮಹಿಳೆಗೆ ಅಪರಿಚಿತ ವಾಹನ ಡಿಕ್ಕಿ: ನೆರವಿಗೆ ಬಂದ ಸಚಿವ ವಿನಯ ಕುಲಕರ್ಣಿ

13 Dec, 2017
₹130 ಕೋಟಿ ಅನುದಾನ ಬಿಡುಗಡೆ: ವಿನಯ ಕುಲಕರ್ಣಿ

ಧಾರವಾಡ
₹130 ಕೋಟಿ ಅನುದಾನ ಬಿಡುಗಡೆ: ವಿನಯ ಕುಲಕರ್ಣಿ

12 Dec, 2017

ಧಾರವಾಡ
ಕುಡಿಯುವ ನೀರಿಗಾಗಿ ಪರದಾಟ

‘ಹೆಬ್ಬಳ್ಳಿ ಅಗಸಿಯಿಂದ ಕೋಳಿಕೆರಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಕಾಮಗಾರಿ 15 ದಿನಗಳ ಹಿಂದೆ ಪೂರ್ಣಗೊಂಡಿತ್ತು.

12 Dec, 2017
ನಿರ್ವಹಣೆ ಸುಲಭ; ಪರಿಸರ ಸುಂದರ

ಒಳ್ಳೆ ಸುದ್ದಿ
ನಿರ್ವಹಣೆ ಸುಲಭ; ಪರಿಸರ ಸುಂದರ

11 Dec, 2017