ನಾಯಕನಹಟ್ಟಿ

ಚಿತ್ರದುರ್ಗ ಜಿಲ್ಲೆಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ: ಶಶಿಕುಮಾರ್

‘ನಾಯಕನಹಟ್ಟಿ ದೇವಾಲಯಕ್ಕೆ ಹಲವು ಬಾರಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದೆ. ನಂತರ ಕಾರ್ಯ ಭಾರದ ಒತ್ತಡದಿಂದ ಬರಲಾಗಲಿಲ್ಲ.

ನಾಯಕನಹಟ್ಟಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದು ನಟ ಶಶಿಕುಮಾರ್‌ ಹೇಳಿದರು.

ಪಟ್ಟಣದ ಗುರು ತಿಪ್ಪೇರುದ್ರಸ್ವಾಮಿ ಒಳಮಠ ಹಾಗೂ ಹೊರಮಠ ದೇವಾಲಯಕ್ಕೆ ಸೋಮವಾರ ಸಂಜೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ನಾನು ಸಂಸದನಾಗಿದ್ದಾಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರೂಪುರೇಷೆಯನ್ನು ಸಿದ್ಧಪಡಿಸಲಾಗಿತ್ತು. ಜಿಲ್ಲೆಯ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಬಸ್‌ ನಿಲ್ದಾಣಗಳು, ಪ್ರತಿ ಹಳ್ಳಿಗೂ ಹೈಮಾಸ್ಟ್‌ ದೀಪಗಳು, ಕುಡಿಯುವ ನೀರಿನ ಟ್ಯಾಂಕರ್‌ಗಳು, ರಸ್ತೆ ಸೇರಿದಂತೆ ಹಲವು ಮೂಲಸೌಲಭ್ಯಗಳನ್ನು ಒದಗಿಸಲಾಗಿತ್ತು’ ಎಂದು ಹೇಳಿದರು.

‘ನಾಯಕನಹಟ್ಟಿ ದೇವಾಲಯಕ್ಕೆ ಹಲವು ಬಾರಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದೆ. ನಂತರ ಕಾರ್ಯ ಭಾರದ ಒತ್ತಡದಿಂದ ಬರಲಾಗಲಿಲ್ಲ. ಹೈದರಾಬಾದ್‌ನಲ್ಲಿ ನಡೆಯುತ್ತಿರುವ ‘ಕುರುಕ್ಷೇತ್ರ’ ಸಿನಿಮಾದ ಚಿತ್ರೀಕರಣದ ನಿಮಿತ್ತ ಇದೇ ಮಾರ್ಗವಾಗಿ ತೆರಳುತ್ತಿರುವುದರಿಂದ ದೇವರ ದರ್ಶನ ಪಡೆದಿದ್ದೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ’ ಎಂದು ಅವರು ಸ್ಪಷ್ಟಪಡಿಸಿದರು.

‘ಈಗಾಗಲೇ ಸಾವಿರಾರು ಅಭಿಮಾನಿಗಳು, ಹಿರಿಯರು, ಹಿತೈಶಿಗಳು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ನನಗೆ ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ. ಜಿಲ್ಲೆಯ ಯಾವ ಕ್ಷೇತ್ರ ಮತ್ತು ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂದು ಜ.15ರಂದು ತಿಳಿಸುತ್ತೇನೆ’ ಎಂದು ಹೇಳಿದರು.

ಉದ್ಯಮಿ ಶ್ರೀನಿವಾಸ್, ಪ್ರಕಾಶ್, ಪಟ್ಟಣ ಪಂಚಾಯ್ತಿ ಸದಸ್ಯ ಟಿ.ಬಸಣ್ಣ, ಜಿ.ಬಿ.ಮುದಿಯಪ್ಪ, ಜೆ.ಪಿ.ತಿಪ್ಪೇಸ್ವಾಮಿ, ವ್ಯವಸ್ಥಾಪನ ಸಮಿತಿ ಸದಸ್ಯ ರುದ್ರಮುನಿ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಕಾಗಿನೆಲೆ ಗುರುಪೀಠದ ರಜತ ಮಹೋತ್ಸವ ಫೆ.8ರಿಂದ

ಚಿತ್ರದುರ್ಗ
ಕಾಗಿನೆಲೆ ಗುರುಪೀಠದ ರಜತ ಮಹೋತ್ಸವ ಫೆ.8ರಿಂದ

17 Jan, 2018
ಟೆಂಡರ್ ರದ್ದತಿಗಾಗಿ ರೈತರ ಪ್ರತಿಭಟನೆ

ಚಿತ್ರದುರ್ಗ
ಟೆಂಡರ್ ರದ್ದತಿಗಾಗಿ ರೈತರ ಪ್ರತಿಭಟನೆ

17 Jan, 2018

ಚಿಕ್ಕಜಾಜೂರು
ಕೊಡಗವಳ್ಳಿ ಹಟ್ಟಿ: ದೊಡ್ಡ ಮಾರಿಕಾಂಬ ದೇವಿ ಜಾತ್ರೆ ಇಂದಿನಿಂದ

ಜ. 17ರಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಗ್ರಾಮಸ್ಥರಿಂದ ಎಡೆ ಬಿಡಾರವನ್ನು ಸಲ್ಲಿಸುತ್ತಾರೆ. ಜ. 18ರಂದು ಮಧ್ಯಾಹ್ನ 1 ಗಂಟೆಗೆ ಸಕಲ ವಾದ್ಯಗೋಷ್ಠಿಗಳೊಂದಿಗೆ...

17 Jan, 2018
ಕೋಟೆನಾಡಿನ ರಕ್ಷಕ ದೇವತೆಗಳಿಗೆ ವಿಶೇಷಾಲಂಕಾರ

ಚಿತ್ರದುರ್ಗ
ಕೋಟೆನಾಡಿನ ರಕ್ಷಕ ದೇವತೆಗಳಿಗೆ ವಿಶೇಷಾಲಂಕಾರ

16 Jan, 2018

ಹೊಳಲ್ಕೆರೆ
ಗೌಡರ ವಂಶಸ್ಥರಿಂದ ಕಡುಬಿನ ಕಾಳಗ!

ಗ್ರಾಮದ ಹೊರವಲಯದಲ್ಲಿರುವ ಕಲ್ಯಾಣಿ ಸಮೀಪದ ನಾಗರಕಟ್ಟೆ ಮುಂಭಾಗ ಈ ಆಚರಣೆ ನಡೆಯುತ್ತದೆ.

16 Jan, 2018