ಹಾಸನ

‘ಪದ್ಮಾವತಿ’ ವೀಕ್ಷಿಸದೆ ವಿರೋಧ ಸಲ್ಲದು: ಗಿರೀಶ ಕಾಸರವಳ್ಳಿ

ಪದ್ಮಾವತಿ’ ಚಿತ್ರ ವೀಕ್ಷಣೆ ಮಾಡದೆ ವಿರೋಧಿಸುವುದು ಮತ್ತು ಪ್ರತಿಭಟನೆ ಮಾಡುವುದು ಸರಿಯಲ್ಲ

ಗಿರೀಶ ಕಾಸರವಳ್ಳಿ

ಹಾಸನ: ‘ಪದ್ಮಾವತಿ’ ಚಿತ್ರ ವೀಕ್ಷಣೆ ಮಾಡದೆ ವಿರೋಧಿಸುವುದು ಮತ್ತು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಚಲನಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ ಹೇಳಿದರು. ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ‘ಚಿತ್ರದಲ್ಲಿ ನಿರ್ದಿಷ್ಟ ಸಮುದಾಯಕ್ಕೆ ಅನ್ಯಾಯ ಮತ್ತು ಅವಮಾನವಾಗಿದೆ ಎಂಬ ಆರೋಪ ಸಲ್ಲದು. ಪುಸ್ತಕ ಓದದೆ, ಚಿತ್ರ ವೀಕ್ಷಣೆ ಮಾಡದೆ ಈ ರೀತಿ ವರ್ತಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪು. ನಾನು ಸಹ ಚಿತ್ರ ವೀಕ್ಷಿಸಿಲ್ಲ. ಯಾರೂ ಚಿತ್ರ ನೋಡದಿದ್ದರೂ ಸುಮ್ಮನೆ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರತಿ ಸಿನಿಮಾ ಒಂದು ಸಮುದಾಯ ಮತ್ತು ವ್ಯಕ್ತಿಯ ಹಿನ್ನಲೆ ಹೊಂದಿರುತ್ತದೆ. ನಾಳೆ ಪುರಾಣ ಸರಿಯಲ್ಲ ಎನ್ನುತ್ತಾರೆ. ಅದಕ್ಕೂ ಇದೇ ರೀತಿ ವಿರೋಧ ವ್ಯಕ್ತಪಡಿಸುತ್ತಾರೆಯೇ’ ಎಂದು ಪ್ರಶ್ನಿಸಿದ ಅವರು, ‘ಚಿತ್ರ ಬಿಡುಗಡೆ ಮುನ್ನವೇ ಸೆನ್ಸಾರ್ ಮಂಡಳಿ ಮೇಲೆ ಒತ್ತಡ ಹೇರಿದ್ದು ತಪ್ಪು. ಇದೇ ರೀತಿ ಮುಂದುವರಿದರೆ ನಿರ್ದೇಶಕರಿಂದ ಸೃಜನಾತ್ಮಕ ಚಿತ್ರಗಳು ಹೊರಬರುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಗೋವಾ ಚಿತ್ರೋತ್ಸವದಲ್ಲಿ ಎಸ್‌.ದುರ್ಗಾ ಮತ್ತು ನ್ಯೂಡ್‌ ಚಿತ್ರಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದ್ದು ಸರಿಯಲ್ಲ. ಸಮಿತಿ ಆಯ್ಕೆ ಮಾಡಿದ ಚಿತ್ರಗಳನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು

ಹಾಸನ
ಚೆಕ್ ಪೋಸ್ಟ್ ಕಾರ್ಯನಿರ್ವಹಣೆ ಪರಿಶೀಲಿಸಿದ ಡಿ.ಸಿ

ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಬೇಲೂರು ವಿಧಾನಸಭಾ ಕ್ಷೇತ್ರದ 4 ಮತಗಟ್ಟೆಗಳಿಗೆ ಭೇಟಿ ನೀಡಿ ಸ್ಥಳೀಯರಿಗೆ ಮತದಾನದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಸ್ಥಳೀಯರ...

23 Apr, 2018
ಮುರಿದ ಪರಿಕರಗಳಲ್ಲೇ ಚಿಣ್ಣರ ಆಟ

ಹಾಸನ
ಮುರಿದ ಪರಿಕರಗಳಲ್ಲೇ ಚಿಣ್ಣರ ಆಟ

23 Apr, 2018

ಹಾಸನ
ಅರಸೀಕೆರೆ ಕ್ಷೇತ್ರಕ್ಕೆ ಬಿಎಸ್‌ವೈ ಆಪ್ತ ಮರಿಸ್ವಾಮಿ

ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಸಮೀಪಿಸುತ್ತಿದ್ದರೂ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಬಿಜೆಪಿ ಟಿಕೆಟ್‌ ಘೋಷಣೆಯಾಗದಿರುವುದು ಆಕಾಂಕ್ಷಿಗಳನ್ನು ಕಂಗಾಲು ಮಾಡಿದೆ.

23 Apr, 2018

ಹಾಸನ
ಮಕ್ಕಳ ಮೇಲಿನ ದೌರ್ಜನ್ಯ ತಡೆಯಿರಿ

ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು ಪ್ರತಿ ನಾಗರಿಕನ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಡಿ. ರಂದೀಪ್ ಸಲಹೆ ನೀಡಿದರು.

21 Apr, 2018

ಅರಕಲಗೂಡು
ಸಚಿವ ಎ.ಮಂಜು ನಾಮಪತ್ರ ಸಲ್ಲಿಕೆ

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಗುರುವಾರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.

20 Apr, 2018