ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಸೀಟ್‌ಬೆಲ್ಟ್ ಧರಿಸದವರೇ ಹೆಚ್ಚು

Last Updated 29 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕಾರು ಚಾಲನೆಯ ಸುರಕ್ಷಿತ ಸಾಧನಗಳಲ್ಲಿ ಸೀಟ್‌ಬೆಲ್ಟ್ ಪಾತ್ರ ಪ್ರಮುಖ. ಅದರಲ್ಲೂ ಅಸುರಕ್ಷಿತ ರಸ್ತೆಗಳಿಗೆ ಹೆಸರಾದ ಭಾರತದಲ್ಲಿ ಇದರ ಅವಶ್ಯಕತೆ ಹೆಚ್ಚೇ ಇದೆ. 2016ರಲ್ಲಿ ಭಾರತದಲ್ಲಿ ನಡೆದ ಅಪಘಾತ ಪ್ರಕರಣಗಳಲ್ಲಿ ಸೀಟ್‌ಬೆಲ್ಟ್ ಧರಿಸದ ಕಾರಣಕ್ಕೆ ಸಾವನ್ನಪ್ಪಿದ್ದವರ ಸಂಖ್ಯೆ 5,638 ಮಂದಿ (ಮೂಲ: ರೋಡ್ ಆಕ್ಸಿಡೆಂಟ್ ರಿಪೋರ್ಟ್‌ –2016, ಮಿನಿಸ್ಟ್ರಿ ಆಫ್ ರೋಡ್ ಟ್ರಾನ್ಸ್‌ಪೋರ್ಟ್‌ ಅಂಡ್ ಹೈವೇಸ್). ಆದರೂ ಇದರೆಡೆಗೆ ನಿರ್ಲಕ್ಷ್ಯ ತಾಳುವವರಲ್ಲೂ ಭಾರತೀಯರೇ ಮುಂದು.

ಹೀಗೆಂದು ವರದಿ ನೀಡಿರುವುದು ಇತ್ತೀಚಿನ ಸಮೀಕ್ಷೆ. ಭಾರತದಲ್ಲಿ ಶೇ 75 ಮಂದಿ ಸೀಟ್‌ಬೆಲ್ಟ್ ಧರಿಸುವುದಿಲ್ಲ ಎಂಬ ಮಾಹಿತಿಯನ್ನು ಈ ಸಮೀಕ್ಷೆ ಹೊರಹಾಕಿದೆ. ಮಾರುತಿ ಸುಜುಕಿ, ಕಾಂತಾರ್ ಗ್ರೂಪ್‌ ಜೊತೆ ಸೇರಿ ಇತ್ತೀಚೆಗೆ ‘ಸೀಟ್‌ಬೆಲ್ಟ್ ಯೂಸ್ ಇನ್ ಇಂಡಿಯಾ’ ಸರ್ವೇ ನಡೆಸಿತು. ಅದರಲ್ಲಿ ಸೀಟ್‌ಬೆಲ್ಟ್ ಧರಿಸುವ ಕುರಿತು ಅಂಕಿಅಂಶ, ಹಾಗೆಯೇ ಧರಿಸದೇ ಇರುವುದಕ್ಕೆ ಕೆಲವು ಕಾರಣಗಳನ್ನೂ ಕಂಡುಕೊಂಡಿದೆ. ಹದಿನೇಳು ನಗರಗಳ 2500 ಚಾಲಕರನ್ನು ಹಾಗೂ ಪ್ರಯಾಣಿಕರನ್ನು ಸರ್ವೇ ಒಳಗೊಂಡಿತ್ತು. ಅದರ ಫಲಿತಾಂಶ ಇಂತಿದೆ...

* ಕಾರು ಪ್ರಯಾಣ ಮಾಡುವವರಲ್ಲಿ ಕೇವಲ ಶೇ 25 ಮಂದಿ ನಿರಂತರವಾಗಿ ಸೀಟ್‌ ಬೆಲ್ಟ್ ಧರಿಸುವುದು.

* ಭಾರತದಲ್ಲಿ ಕಾನೂನು ಕ್ರಮಗಳಿದ್ದರೂ ಅದನ್ನು ಪಾಲಿಸುವಲ್ಲಿ ಹಿಂದೇಟು ಹಾಕುವವರೇ ಹೆಚ್ಚು. ಸೆಂಟ್ರಲ್ ಮೋಟಾರ್ ವೆಹಿಕಲ್ಸ್‌ ಆ್ಯಕ್ಟ್‌ 1989ರ 4ನೇ ಅಧ್ಯಾಯದ ಪ್ರಕಾರ, ಪ್ರಯಾಣಿಕರು ಇದ್ದಾಗ ಸೀಟ್ ಬೆಲ್ಟ್ ಧರಿಸದೆ ಕಾರು ಚಲಾಯಿಸಿದರೆ, ಸಾವಿರ ರೂಪಾಯಿವರೆಗೂ ದಂಡ ಹಾಕಬಹುದು. ಶೇ 32 ಜನರು, ಅಸಮರ್ಪಕ ಕಾನೂನು ಇದಕ್ಕೆ ಮುಖ್ಯ ಕಾರಣ ಎಂದು ಒಪ್ಪಿಕೊಂಡಿದ್ದಾರೆ.

* ಸೀಟ್‌ಬೆಲ್ಟ್ ಧರಿಸಿದರೆ, ಸುಲಭವಾಗಿ ಕಾರು ಚಾಲನೆ ಮಾಡಲು ಆತ್ಮವಿಶ್ವಾಸವಿಲ್ಲದವ ಅಥವಾ ಸರಿಯಾಗಿ ಚಾಲನೆ ಮಾಡಲು ಬರುವುದಿಲ್ಲ ಎಂದು ತಿಳಿದು ಕೊಳ್ಳುವ ಕಾರಣಕ್ಕೆ ಬೆಲ್ಟ್‌ ಧರಿಸುವುದಿಲ್ಲ ಎಂಬ ಕಾರಣವನ್ನು ಶೇ 23 ಮಂದಿ ನೀಡಿದ್ದಾರೆ.

*ಶೇ 22 ಚಾಲಕರು ತಮ್ಮ ಬಟ್ಟೆ ಹಾಳಾಗುತ್ತದೆ ಎಂಬ ಕಾರಣಕ್ಕೆ ಸೀಟ್ ಬೆಲ್ಟ್ ಧರಿಸುವುದಿಲ್ಲ.

*ದಕ್ಷಿಣ ಭಾರತದಲ್ಲಿ ಜೀವರಕ್ಷಕ ತಂತ್ರಜ್ಞಾನವನ್ನು ಬಳಸುವವರ ಸಂಖ್ಯೆ ಕಡಿಮೆ.

*ಸೀಟ್‌ಬೆಲ್ಟ್ ಧರಿಸುವುದರಿಂದ, ಸಾವಿನ ಪ್ರಮಾಣ ವನ್ನು ಶೇ 45ರಷ್ಟು ತಗ್ಗಿಸಬಹುದು. ಗಂಭೀರ ಗಾಯ ವಾಗುವುದನ್ನು ಶೇ 50ರಷ್ಟು ತಪ್ಪಿಸಬಹುದು. ಅಪಘಾತ ವಾದಾಗ ಸೀಟ್‌ಬೆಲ್ಟ್ ಧರಿಸದವರು ಹೊರಗೆ ಬೀಳುವ ಸಂಭವ 30 ಪಟ್ಟು ಹೆಚ್ಚಿರುತ್ತದೆ.

*ಮಹಾರಾಷ್ಟ್ರದ ನಾಗಪುರದಲ್ಲಿ ಶೇ 90ರಷ್ಟು ಚಾಲಕರು, ಜೈಪುರ ಹಾಗೂ ಛಂಡೀಗಡದಲ್ಲಿ ಶೇ 80ರಷ್ಟು ಚಾಲಕರು ಸೀಟ್‌ಬೆಲ್ಟ್ ಧರಿಸುತ್ತಾರೆ. ಮಧ್ಯಪ್ರದೇಶದ ಇಂದೋರ್ ಹಾಗೂ ಕರ್ನಾಟಕದ ಬೆಂಗಳೂರು ಅನುಸರಣೆಯಲ್ಲಿ ತುಂಬಾ ಹಿಂದಿದೆ.

*ಕಾರಿನ ಹಿಂಭಾಗದಲ್ಲಿ ಕೂರುವವರಂತೂ ಸೀಟ್‌ಬೆಲ್ಟ್ ಧರಿಸುವ ಸಾಧ್ಯತೆ ವಿರಳ. ಏರ್‌ಬ್ಯಾಗ್ ಇರುವುದರಿಂದ ತಾವು ಸೀಟ್‌ಬೆಲ್ಟ್ ಧರಿಸುವ ಅವಶ್ಯಕತೆಯಿಲ್ಲ ಎಂದೂ ಧರಿಸದೇ ಇರುವವರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT