ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲ: ಕಾರಿಗೂ ಬೇಕು ಕಾಳಜಿ

Last Updated 29 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕಾರಿಗೆ ಹೊದಿಕೆಯಿರಲಿ: ನಾವು ಬೆಚ್ಚಗಿರಲು ಹೇಗೆ ಹೊದಿಕೆ ಬಳಸುತ್ತೇವೆಯೋ ಹಾಗೆಯೇ ಕಾರಿಗೂ ಚಳಿಗಾಲದಲ್ಲಿ ಬೆಚ್ಚಗಿರುವ ಅವಶ್ಯಕತೆ ಇರುತ್ತದೆ. ಆದ್ದರಿಂದ ಮರೆಯಲ್ಲಿ ಅಥವಾ ಒಣಗಿದ ಪ್ರದೇಶದಲ್ಲಿ ಪಾರ್ಕ್ ಮಾಡಿದರೆ ಒಳ್ಳೆಯದು. ಇದು ಕಾರಿನ ಯಂತ್ರಗಳನ್ನು ಕಾಪಾಡುತ್ತದೆ. ಜಾಗದ ಲಭ್ಯತೆ ಇಲ್ಲವೆಂದರೆ, ಅದಕ್ಕೆ ಕವರ್ ಹೊದಿಸುವುದನ್ನಂತೂ ಮರೆಯಲೇಬಾರದು.

* ಆಗಾಗ್ಗೆ ತೊಳೆಯುತ್ತಿರಿ: ಕಾರನ್ನು ಆಗಾಗ್ಗೆ ತೊಳೆಯುತ್ತಿರಿ. ಇದರಿಂದ ಇಬ್ಬನಿಯ ಅಥವಾ ಚಳಿಗಾಳಿಯ ಉಪ್ಪಿನ ಅಂಶ ಶೇಖರಗೊಂಡು ಕಾರಿನ ಬಣ್ಣ ಹಾಳಾಗುವುದನ್ನು, ತುಕ್ಕು ಹಿಡಿಯುವುದನ್ನು ತಪ್ಪಿಸಬಹುದು. ತೊಳೆದರೆ ನೀರು ವ್ಯರ್ಥ ಎಂದುಕೊಳ್ಳುವವರಿಗೆ ವಾಟರ್‌ಲೆಸ್ ಅಥವಾ ರಿನ್ಸ್‌ಲೆಸ್ ವಾಶಿಂಗ್ ಕೂಡ ಇದೆ.

* ಬ್ಯಾಟರಿ ಪರಿಶೀಲಿಸಿ: ಕಾರು ಬ್ಯಾಟರಿಗೂ ಮನುಷ್ಯರಿಗೂ ಸಹಜ ಗುಣವೊಂದಿದೆ. ಚಳಿಯನ್ನು ತಡೆದುಕೊಳ್ಳಲು ಸಾಧ್ಯವಾಗದೇ ಇರುವುದು. ಚೆನ್ನಾಗಿ ಕೆಲಸ ಮಾಡುವ ಬ್ಯಾಟರಿ ಕೂಡ ತನಗೆ ಅನುಕೂಲಕರ ವಾತಾವರಣ ಇಲ್ಲದಿದ್ದರೆ ಕೆಲಸ ನಿಲ್ಲಿಸಿಬಿಡಬಹುದು. ಕಡಿಮೆ ಉಷ್ಣಾಂಶವು ಬ್ಯಾಟರಿಯ ಶಕ್ತಿಯನ್ನು 50% ಇಳಿಸಬಲ್ಲದು. ಆದ್ದರಿಂದ ಒಮ್ಮೆ ಮೆಕ್ಯಾನಿಕ್ ಬಳಿ ಬ್ಯಾಟರಿ ಪರಿಶೀಲಿಸುವುದು ಒಳ್ಳೆಯದು. ಅಥವಾ ಬೇರೆ ಬ್ಯಾಟರಿ ಅವಶ್ಯಕತೆಯಿದೆಯೇ ಎಂಬುದನ್ನು ತಿಳಿದುಕೊಳ್ಳಿ. ಬ್ಯಾಟರಿ ಜಾಗವನ್ನು ಆಗಾಗ್ಗೆ ಶುದ್ಧಗೊಳಿಸುವುದರಿಂದ ಎಲೆಕ್ಟ್ರಿಕಲ್ ಸಮಸ್ಯೆಗಳನ್ನು ದೂರವಿರಿಸಬಹುದು.

* ಪರಿಶೀಲನೆ ತುಂಬಾ ಮುಖ್ಯ: ಕಾರು ಸರಿಯಾಗಿ ಕೆಲಸ ನಿರ್ವಹಿಸಲು ಮೆಕ್ಯಾನಿಕ್‌ ನಿಂದ ಒಮ್ಮೆ ಪರಿಶೀಲಿಸುವ ಅಗತ್ಯ ಇರುತ್ತದೆ. ಕಾರಿನ ಎಲ್ಲಾ ಭಾಗಗಳೂ ಸರಿಯಾಗಿ ಕೆಲಸ ನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಿ. ಚಳಿಗಾಲದಲ್ಲಿ ಯಂತ್ರಗಳ ಕಾರ್ಯಾಚರಣೆ ಯಲ್ಲಿ ತೊಡಕಾಗುವುದರಿಂದ ಪರಿಶೀಲನೆ ಕಡ್ಡಾಯ.

ರೇಡಿಯೇಟರ್, ಬ್ರೇಕ್, ಬಲ್ಬ್‌ಗಳನ್ನೂ ಪರೀಕ್ಷಿಸಬೇಕು. ಒಳಗಿನ ಹಾಗೂ ಹೊರಗಿನ ಲೈಟ್‌ಗಳು ಸುಸ್ಥಿತಿಯಲ್ಲಿವೆಯೇ ನೋಡಿಕೊಳ್ಳಿ. ಲಾಕ್‌ಗಳು ಚಳಿಗೆ ಗಟ್ಟಿಯಾಗದಂತೆ ಗ್ರಾಫೈಟ್ ಲ್ಯೂಬ್ರಿಕೆಂಟ್‌ಗಳನ್ನು ಬಳಸಬಹುದು. ಸ್ಪಾರ್ಕ್ ಪ್ಲಗ್ ವೈರ್‌ಗಳ ಪರಿಶೀಲನೆ ಮಾಡಿಕೊಳ್ಳುವುದೂ ಮುಖ್ಯ.

* ಪ್ರಮಾಣ ಪರೀಕ್ಷಿಸಿ: ಕಾರಿನ ಆ್ಯಂಟಿ ಫ್ರೀಝ್, ಬ್ರೇಕ್ ಫ್ಲುಯಿಡ್, ಎಂಜಿನ್ ಆಯಿಲ್ ಮುಂತಾದವುಗಳ ಪ್ರಮಾಣವನ್ನೂ ಪರೀಕ್ಷಿಸ ಬೇಕು. ಪ್ರತಿ ತಿಂಗಳು ಎಂಜಿನ್ ಆಯಿಲ್ ಪರೀಕ್ಷಿಸಿ. ಆಗಾಗ್ಗೆ ಆಯಿಲ್ ಬದಲಾಯಿಸುತ್ತಿರಿ. ಎಕ್ಸಾಸ್ಟ್ ಸಿಸ್ಟಂ ಅನ್ನು ಪರಿಶೀಲಿಸಿ, ಆಯಿಲ್ ಲೀಕ್ ಆಗದಂತೆ ಎಚ್ಚರವಹಿಸಬೇಕು.

* ಟೈರ್‌ಗಳನ್ನು ನೋಡಿಕೊಳ್ಳಿ: ಸುರಕ್ಷಿತ ಚಾಲನೆಯಲ್ಲಿ ಟೈರ್‌ಗಳ ಪಾತ್ರ ಮುಖ್ಯ. ಟೈರ್‌ಗಳ ತಿರುಗುವಿಕೆ ಸರಾಗವಾಗಿ ಸಾಧ್ಯವಾಗುತ್ತಿಲ್ಲ ಎಂದರೆ, ಪರೀಕ್ಷೆಗೊಳಪಡಿಸುವುದು ಒಳಿತು. ಟ್ರೆಡ್ ಡೆಪ್ತ್‌ ಪರೀಕ್ಷಿಸಿ. (ಪರಿಣತರ ಪ್ರಕಾರ, 1.6ಎಂಎಂ ರಿಂದ 3ಎಂಎಂ ಡೆಪ್ತ್‌ ಇದ್ದರೆ ಒಳಿತು). ಟೈರ್ ಪ್ರೆಶರ್ ಅನ್ನೂ ಪರೀಕ್ಷಿಸಬೇಕು. ಚಳಿಯಿದ್ದಾಗ ಅದರ ಪ್ರೆಶರ್ ಕೂಡ ಕಡಿಮೆಯಾಗುವ ಸಾಧ್ಯತೆಯಿರುತ್ತದೆ.

* ವೈಪರ್ ಬ್ಲೇಡ್‌ಗಳನ್ನು ಗಮನಿಸಿ: ವೈಪರ್‌ಗಳು ವಿಂಡ್‌ಶೀಲ್ಡ್ ಶುದ್ಧವಾಗಿಡಲು ಸಹಕಾರಿ. ಚಳಿಗಾಲದಲ್ಲಿ ಇದರೆಡೆಗೆ ಹೆಚ್ಚಿನ ಗಮನ ನೀಡಬೇಕು. ವಿಂಡ್‌ಶೀಲ್ಡ್‌ಗೆ ಫ್ರೀಝ್ ಆಗದ ವಾಶರ್ ಫ್ಲುಯೆಡ್ ಬಳಸಬೇಕು.

* ತುರ್ತು ಕಿಟ್ ಇರಲಿ: ಕೆಲವೊಮ್ಮೆ ತುರ್ತು ಪರಿಸ್ಥಿತಿ ಎದುರಾಗುತ್ತದೆ. ಯಂತ್ರಗಳ ಚಾಲನೆಯಲ್ಲಿ ತೊಡಕಾಗಿ ಗಾಡಿ ನಿಂತು ಹೋಗಬಹುದು.
ಆದ್ದರಿಂದ ಫ್ಲಾಶ್ ಲೈಟ್, ಬ್ಯಾಟರಿ ಹಾಗೂ ಫಸ್ಟ್ ಏಡ್ ಕಿಟ್ ಎಂದಿಗೂ ಜೊತೆಯಿರಲಿ. ಮಾರುಕಟ್ಟೆಯಲ್ಲಿ ಎಮರ್ಜೆನ್ಸಿ ಪ್ಯಾಕ್‌ಗಳು ಲಭ್ಯವಿವೆ. ಫೋನ್ ಚಾರ್ಜರ್, ರೇಡಿಯೊ, ಮಡಚಬಲ್ಲ ಉಪಕರಣಗಳನ್ನೂ ಹೊಂದಿರುತ್ತವೆ. ವಾರ್ನಿಂಗ್ ಟ್ರಯಾಂಗಲ್, 8 ಗಾಜ್ ಜಂಪರ್ ಕೇಬಲ್, ಯುಟಿಲಿಟಿ ಟೂಲ್, ಟೈರ್ ಪ್ರೆಶರ್ ಗಾಜ್, ಎಲೆಕ್ಟ್ರಿಕಲ್ ಟೇಪ್‌ಗಳು ಇರುವುದನ್ನು ಖರೀದಿಸಿದರೆ ಉಪಯೋಗಕಾರಿ.

* ಬೆಳಿಗ್ಗೆ ಸಮಯ ಥಂಡಿ ಇದ್ದಾಗ, ಸ್ಟಾರ್ಟರ್ ಮೋಟಾರನ್ನು ಆರಂಭಿಸುವ ಮೊದಲು ಐದು ಸೆಕೆಂಡುಗಳ ಕಾಲ ಇಗ್ನಿಷ್ ಆನ್ ಮಾಡಿ ಇಡಿ. ಇದರಿಂದ ಬ್ಯಾಟರಿಗೆ, ಕಾರು ಆರಂಭಿಸಲು ಬೇಕಾದ ಅಧಿಕ ಶಕ್ತಿಯನ್ನು ಉಳಿಸುತ್ತದೆ. ಇದು ಫ್ಯುಯೆಲ್ ಪಂಪ್‌ಗಳ ಮೇಲೆ ಒತ್ತಡ ತಂದು ಚಾಲನೆ ಸುಲಭಗೊಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT