ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿ ನೋಡಲು ಹೋದಾಗ...

Last Updated 29 ನವೆಂಬರ್ 2017, 19:30 IST
ಅಕ್ಷರ ಗಾತ್ರ

‘ಒಂದು ಹೆಣ್ಣಿಗೊಂದು ಗಂಡು, ಹೇಗೋ ಸೇರಿ ಹೊಂದಿ ಕೊಂಡು, ಕಾಣದೊಂದ ಕನಸ ಕಂಡು...’ ಪ್ರೇಮಕವಿ ಕೆ.ಎಸ್‌.ನರಸಿಂಹಸ್ವಾಮಿಯವರ ಈ ಸಾಲಿನಷ್ಟು ಸುಲಭವಲ್ಲ, ಹೆಣ್ಣು–ಗಂಡು ಜತೆಯಾಗುವುದು. ಈಗ ಬಿಡಿ, ವಾಟ್ಸ್‌ ಆ್ಯಪ್‌ ಜಮಾನ. ಹುಡುಗ–ಹುಡುಗಿಯ ಫೋಟೊಗಳು ಥಟ್ಟಂತ ಮೊಬೈಲ್‌ಗಳಲ್ಲಿ ಹರಿದಾಡುತ್ತವೆ.

ಇಷ್ಟವೋ ಇಲ್ಲವೋ ಕ್ಷಣಮಾತ್ರದಲ್ಲಿ ಮಾಹಿತಿ ವಿನಿಮಯ ಆಗುತ್ತದೆ. ಕೆಲವು ವರ್ಷಗಳ ಹಿಂದಿನ ದಿನಗಳನ್ನೊಮ್ಮೆ ನೆನಪಿಸಿಕೊಳ್ಳಿ. ಮದುವೆ ಏಜೆಂಟರೋ ಸಂಬಂಧಿಕರೋ ಹುಡುಗ ಅಥವಾ ಹುಡುಗಿಯ ಫೋಟೊ ತಂದು ತೋರಿಸಿದರೆ ಮನೆ ಮಂದಿಯೆಲ್ಲ ಕುಳಿತು ನೋಡಿ ಪಾಸ್‌/ನಪಾಸ್‌ ಮಾಡುತ್ತಿದ್ದರು. ಬಳಿಕ ಹುಡುಗಿಯನ್ನು ತೋರಿಸುವಂತೆ ಅವರ ಪಾಲಕರಿಗೆ ಬುಲಾವ್‌ ಹೋಗುತ್ತಿತ್ತು.ಹುಡುಗಿಯನ್ನು ತೋರಿಸಲು ಬಂದಾಗ ಮನೆಯಲ್ಲಿ ಹಿರಿಯರ ಸಂತೆ. ಅಕ್ಕ–ತಂಗಿಯರೂ ಮೊದಲೇ ಬಂದಿರುತ್ತಿದ್ದರು.

ಸುತ್ತಲೂ ಜನಜಾತ್ರೆ ಸೇರಿ, ಮಧ್ಯದಲ್ಲಿ ಹುಡುಗ–ಹುಡುಗಿಯನ್ನು ಕೂರಿಸಿ ಒಬ್ಬರನ್ನೊಬ್ಬರು ನೋಡಿಕೊಳ್ಳಿ ಎಂದಾಗ ಎಂತಹ ನಾಚಿಕೆ! ನೆರೆದವರ ಕಣ್ತಪ್ಪಿಸಿ ಕಳ್ಳನೋಟ ಬೀರಲು ಎಷ್ಟೊಂದು ಹರಸಾಹಸ. ಜೋಡಿ ಆಗುವವರತ್ತ ಮೊದಲ ನೋಟದ ಆ ಕ್ಷಣಗಳು ಸದಾ ಅಪ್ಯಾಯಮಾನ ಅಲ್ಲವೆ? ನಿಮ್ಮ ಬಾಳಸಂಗಾತಿಯನ್ನು ನೋಡಿದ ಆ ಮಧುರ ಕ್ಷಣಗಳ ಆಪ್ತ ನೆನಪುಗಳನ್ನು ಹಂಚಿಕೊಳ್ಳಲು ನೀವು ಇಷ್ಟಪಡುವುದಾದರೆ ಕಾಮನಬಿಲ್ಲು ಅದಕ್ಕೆ ವೇದಿಕೆ ಕಲ್ಪಿಸುತ್ತದೆ. ಡಿ.2ರ ಒಳಗೆ ಬರಹಗಳು ತಲುಬೇಕು. ಬರಹ 200 ಪದಗಳ ಮಿತಿಯಲ್ಲಿರಬೇಕು. ವಿಳಾಸಕ್ಕೆ ಏಳನೇ ಪುಟದ ಅಂಚನ್ನು ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT