ಹೊನ್ನಾಳಿ

ಮೂರು ದಿನಗಳ ಕುಸ್ತಿ ಪಂದ್ಯಾವಳಿಗೆ ಚಾಲನೆ

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪುರಾತನ ಕಾಲದಿಂದಲೂ ಗ್ರಾಮೀಣ ಕ್ರೀಡೆ ಕುಸ್ತಿ ಪಂದ್ಯಕ್ಕೆ ವಿಶೇಷ ಮಹತ್ವವಿದೆ ಎಂದರು.

ಹೊನ್ನಾಳಿ: ಪಟ್ಟಣದ ಬೀರಲಿಂಗೇಶ್ವರ ದೇವರ ಕಾರ್ತಿಕೋತ್ಸವದ ಪ್ರಯುಕ್ತ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಕುಸ್ತಿ ಪಂದ್ಯಾವಳಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರು, ಕುಸ್ತಿ ಕ್ರೀಡಾಪಟುಗಳನ್ನು ಪರಿಚಯಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪುರಾತನ ಕಾಲದಿಂದಲೂ ಗ್ರಾಮೀಣ ಕ್ರೀಡೆ ಕುಸ್ತಿ ಪಂದ್ಯಕ್ಕೆ ವಿಶೇಷ ಮಹತ್ವವಿದೆ ಎಂದರು.

ಹೊನ್ನಾಳಿಯ ಹೊಡೆತ ಎನ್ನುವ ಹೆಸರಿನಿಂದ ಆರಂಭವಾಗುವ ಕುಸ್ತಿ ಪಂದ್ಯಾವಳಿ ನಾಡಿನೆಲ್ಲೆಡೆ ಜನಪ್ರಿಯವಾಗಿದೆ. ಇದನ್ನು ಕುವೆಂಪು ಅವರು ತಮ್ಮ ಕಾದಂಬರಿಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದರು.

ಇಂದು ಮತ್ತು ನಾಳೆ: ಗುರುವಾರ ಮತ್ತು ಶುಕ್ರವಾರ ದಾವಣಗೆರೆ, ಧಾರವಾಡ, ಮೈಸೂರು, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಿಂದ ಪೈಲ್ವಾನರು ಬರುವ ನಿರೀಕ್ಷೆಯಿದ್ದು, ದೊಡ್ಡ ಪೈಲ್ವಾನರಿಗೆ ₹ 10 ಸಾವಿರದಿಂದ ₹ 15 ಸಾವಿರದವರೆಗೆ ನಗದು ಬಹುಮಾನ ಮತ್ತು ಬೆಳ್ಳಿ ಗದೆಯನ್ನು ನೀಡಿ ಗೌರವಿಸಲಾಗುವುದು ಎಂದರು.

ಊಟ ವಸತಿ ವ್ಯವಸ್ಥೆ: ಹೊರಭಾಗಗಳಿಂದ ಬರುವ ಪೈಲ್ವಾನರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ.

ಕುಸ್ತಿ ಲೈಸೆನ್ಸ್‌ನ ಎಚ್.ಬಿ.ಗಿಡ್ಡಪ್ಪ, ಮುಖಂಡರಾದ ಪರಸಣ್ಣಾರ ನರಸಿಂಹಪ್ಪ, ಗೌಡ್ರು ನರಸಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮಪ್ಪ, ಗಣಮಕ್ಕಳಾದ ಅಣ್ಣಪ್ಪ ಸ್ವಾಮಿ, ಕುಮಾರಸ್ವಾಮಿ, ಪಟ್ಟಣ ಪಂಚಾಯ್ತಿ ಸದಸ್ಯರಾದ ಹೊಸಕೇರಿ ಸುರೇಶ್, ಎಚ್.ಡಿ.ವಿಜೇಂದ್ರಪ್ಪ, ಭಂಗಿ ನಾಗರಾಜಪ್ಪ, ದ್ಯಾಮಜ್ಜಿ ಈರಪ್ಪ, ಪೈಲ್ವಾನ್ ಕುಮಾರ್, ಅಡ್ಡಗಣ್ಣಾರ ಗಾಳೇಶ್, ಮಾರ್ಜೋಗಿ ಬಸವರಾಜಪ್ಪ, ಕಾಡಸಿದ್ದಪ್ಪ, ವಸಂತನಾಯ್ಕ, ಎಂ.ವಾಸಪ್ಪ, ಕತ್ತಿಗೆ ನಾಗರಾಜಪ್ಪ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಮುಂದುವರಿದ ಅಕ್ರಮ ಪಂಪ್‌ಸೆಟ್‌ ತೆರವು

ದಾವಣಗೆರೆ/ಮಾಯಕೊಂಡ
ಮುಂದುವರಿದ ಅಕ್ರಮ ಪಂಪ್‌ಸೆಟ್‌ ತೆರವು

20 Jan, 2018
ಸಿಪಿಐ ರಾಜ್ಯ ಸಮ್ಮೇಳನ 27ರಿಂದ

ದಾವಣಗೆರೆ
ಸಿಪಿಐ ರಾಜ್ಯ ಸಮ್ಮೇಳನ 27ರಿಂದ

20 Jan, 2018

ಚನ್ನಗಿರಿ
ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ವಡ್ನಾಳ್‌ ರಾಜಣ್ಣ

‘ಕಾಂಗ್ರೆಸ್ ಸರ್ಕಾರ ₹ 8560 ಕೋಟಿ ರೈತರ ಸಾಲವನ್ನು ಮನ್ನಾ ಮಾಡಿದೆ. ಆದರೆ ಅಚ್ಛೇ ದಿನ್ ಎಂದು ಹೇಳುವ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ...

20 Jan, 2018
ಟೊಮೆಟೊ ಸುರಿದು ರೈತರ ಪ್ರತಿಭಟನೆ

ದಾವಣಗೆರೆ
ಟೊಮೆಟೊ ಸುರಿದು ರೈತರ ಪ್ರತಿಭಟನೆ

19 Jan, 2018
ಎಲೆಕೋಸು: ರೈತನಿಗೆ ಬೆಲೆ ಕುಸಿತದ ಆತಂಕ

ಸಂತೇಬೆನ್ನೂರು
ಎಲೆಕೋಸು: ರೈತನಿಗೆ ಬೆಲೆ ಕುಸಿತದ ಆತಂಕ

19 Jan, 2018