ಶ್ರೀನಿವಾಸಪುರ

ರಾಜ್ಯಕ್ಕೆ ಹಿತ ತರುವ ಪ್ರಾದೇಶಿಕ ಪಕ್ಷ ಬೆಂಬಲಿಸಿ

ಪ್ರಾದೇಶಿಕ ಪಕ್ಷಗಳ ಬಲ ಪ್ರದರ್ಶನಕ್ಕೆ ತಮಿಳುನಾಡು ಉತ್ತಮ ನಿದರ್ಶನವಾಗಿದೆ. ಅಲ್ಲಿ ರಾಷ್ಟ್ರೀಯ ಪಕ್ಷಗಳ ಪಾರುಪತ್ಯಕ್ಕೆ ತಡೆಯೊಡ್ಡಿವೆ. ಈಗ ಪ್ರಧಾನಿ ಮೋದಿ ಕರುಣಾನಿಧಿ ಅವರ ಮನೆಗೆ ಹೋಗಿ ಮಾತುಕತೆ ನಡೆಸಿದ್ದಾರೆ. ಇದು ಪ್ರದೇಶಿಕ ಪಕ್ಷಗಳ ನಿಜವಾದ ಶಕ್ತಿ ತೋರಿಸುತ್ತದೆ ಎಂದು ಹೇಳಿದರು.

ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಮಾತನಾಡಿದರು. ಮುಖಂಡ ಜಿ.ಕೆ.ವೆಂಕಟಶಿವಾರೆಡ್ಡಿ, ವಿಧಾನ ಪರಿಷತ್‌ ಸದಸ್ಯ ತೂಪಲ್ಲಿ ಆರ್‌.ಚೌಡರೆಡ್ಡಿ, ಮಧುಸೂದನರೆಡ್ಡಿ ಇದ್ದರು.

ಶ್ರೀನಿವಾಸಪುರ: ರಾಜ್ಯದ ಹಿತದೃಷ್ಟಿಯಿಂದ ಮತದಾರರು ಪ್ರಾದೇಶಿಕ ಪಕ್ಷ ಬೆಂಬಲಿಸಬೇಕು ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಜೆಡಿಎಸ್ ಕಾರ್ಯಕರ್ತರ  ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಪ್ರಾದೇಶಿಕ ಪಕ್ಷಗಳ ಬಲ ಪ್ರದರ್ಶನಕ್ಕೆ ತಮಿಳುನಾಡು ಉತ್ತಮ ನಿದರ್ಶನವಾಗಿದೆ. ಅಲ್ಲಿ ರಾಷ್ಟ್ರೀಯ ಪಕ್ಷಗಳ ಪಾರುಪತ್ಯಕ್ಕೆ ತಡೆಯೊಡ್ಡಿವೆ. ಈಗ ಪ್ರಧಾನಿ ಮೋದಿ ಕರುಣಾನಿಧಿ ಅವರ ಮನೆಗೆ ಹೋಗಿ ಮಾತುಕತೆ ನಡೆಸಿದ್ದಾರೆ. ಇದು ಪ್ರದೇಶಿಕ ಪಕ್ಷಗಳ ನಿಜವಾದ ಶಕ್ತಿ ತೋರಿಸುತ್ತದೆ ಎಂದು ಹೇಳಿದರು.

ಜೆಡಿಎಸ್‌ ಒಂದು ಕಟುಂಬಕ್ಕೆ ಸೇರಿದ ಪಕ್ಷವಲ್ಲ. ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯ ಮಂತ್ರಿ ಮಾಡುವುದೇ ಅದರ ಧ್ಯೇಯವಲ್ಲ. ರಾಜ್ಯ ಎದುರಿಸುತ್ತಿರುವ ನೆಲ, ಜಲ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವುದು, ರೈತರ, ಸಮಾಜದ ಎಲ್ಲ ಬಡವರ ಹಿತ ಕಾಯುವುದು ಪಕ್ಷದ ಆದ್ಯತೆಯಾಗಿದೆ. ನಾನು ಆಕಸ್ಮಿಕವಾಗಿ ಪ್ರಧಾನಿಯಾದೆ. ಆದರೂ ಜನಪರ ಕಾರ್ಯಗಳನ್ನು ಕೈಗೊಂಡೆ. ಇದು ಜನರಿಗೆ ಗೊತ್ತಿದೆ ಎಂದು
ಹೇಳಿದರು.

ಮೇಕೆ ದಾಟು ಕುಡಿಯುವ ನೀರು ಯೋಜನೆಗೆ ತಮಿಳು ನಾಡು ಖ್ಯಾತೆ ತೆಗೆದಾಗಿ, ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ನನ್ನ ಮನೆಗೆ ಬಂದು ಸಮಸ್ಯೆ ಬಗ್ಗೆ ತಿಳಿಸಿದರು. ನಾನು ಮಹಾತ್ಮಾಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಕೈಗೊಂಡೆ. ಸಮಸ್ಯೆ ಬಗೆಹರಿಸಲು ಕೇಂದ್ರ ಮುಂದಾಗದಿದ್ದಲ್ಲಿ ಪ್ರಾಣ ತ್ಯಾಗ ಮಾಡುವುದಾಗಿ ಪ್ರಧಾನಿಗೆ ದೂರವಾಣಿ ಮೂಲಕ ತಿಳಿಸಿದೆ. ಅದಕ್ಕೆ ಅವರು ಸ್ಪಂದಿಸಿ ಸಮಸ್ಯೆ ಬಗೆರಿಸುವ ಭರವಸೆ ನೀಡಿದರು ಎಂದು ಹೇಳಿದರು.

ಮುಖಂಡ ಜಿ.ಕೆ.ವೆಂಕಟಶಿವಾರೆಡ್ಡಿ, ಸಚಿವ ರಮೇಶ್‌ ಕುಮಾರ್‌, ವಿಧಾನ ಪರಿಷತ್ ಸದಸ್ಯರಾದ ಮನೋಹರ್‌, ಟಿ.ಎ.ಶರವಣ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದ್ಶಿ ಜಫರುಲ್ಲಾ ಖಾನ್‌ ಸಮಾವೇಶದಲ್ಲಿ ಮಾತನಾಡಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಪಟ್ಟಣದಲ್ಲಿ ಜೆಡಿಎಸ್‌ ಕಚೇರಿ ಉದ್ಘಾಟಿಸಿದರು. ಅವರನ್ನು ಸಮಾವೇಶ ಸ್ಥಳಕ್ಕೆ ಬೆಳ್ಳಿ ರಥದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ವಿಧಾನ ಪರಿಷತ್‌ ಸದಸ್ಯರಾದ ತೂಪಲ್ಲಿ ಆರ್‌.ಚೌಡರೆಡ್ಡಿ, ರಮೇಶ್ ಬಾಬು, ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಮಾಜಿ ಶಾಸಕ ಭಕ್ತವತ್ಸಲಂ, ಜೆಡಿಎಸ್‌ ರಾಷ್ಟ್ರೀಯ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯರಾದ ತೂಪಲ್ಲಿ ಆರ್‌.ಆರ್‌.ನಾರಾಯಣಸ್ವಾಮಿ, ಎಂ.ವಿ.ಶ್ರೀನಿವಾಸ್‌, ಗಣೇಶ್‌, ಮುದವಾಡಿ ಶ್ರೀನಿವಾಸ್‌, ನಂಜುಂಡಪ್ಪ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮಂಜುಳ ರಾಮಚಂದ್ರೇಗೌಡ, ಸದಸ್ಯ ರಾಜಶೇಖರರೆಡ್ಡಿ, ಮಂಜುನಾಥರೆಡ್ಡಿ ಮತ್ತಿತರರು ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಕೋಲಾರ
ಲೈಂಗಿಕ ದೌರ್ಜನ್ಯ: ಶಿಕ್ಷಕನ ಬಂಧನ

ಆರೋಪಿಯು ಅದೇ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಮೇಲೆ 2017ರ ಡಿ.30ರಂದು ಶಾಲೆಯಲ್ಲೇ ಲೈಂಗಿಕ ದೌರ್ಜನ್ಯ ಎಸಗಿದ್ದ. ವಿದ್ಯಾರ್ಥಿನಿಯು ಮಂಗಳವಾರ (ಜ.16) ತನ್ನ ಪೋಷಕರಿಗೆ...

18 Jan, 2018
ಎಸ್‌ಐ ಅಮಾನತಿಗೆ ವಕೀಲರ ಧರಣಿ

ಕೋಲಾರ
ಎಸ್‌ಐ ಅಮಾನತಿಗೆ ವಕೀಲರ ಧರಣಿ

18 Jan, 2018
ಸರ್ಕಾರಿ ಶಾಲೆಗಳ ಅವ್ಯವಸ್ಥೆಗೆ ಅಸಮಾಧಾನ

ಕೋಲಾರ
ಸರ್ಕಾರಿ ಶಾಲೆಗಳ ಅವ್ಯವಸ್ಥೆಗೆ ಅಸಮಾಧಾನ

18 Jan, 2018
ಜಿಲ್ಲೆಯಲ್ಲಿ ‘ಇಂದಿರಾ ಕ್ಯಾಂಟೀನ್‌’ ಆರಂಭಕ್ಕೆ ಸಿದ್ಧತೆ

ಕೋಲಾರ
ಜಿಲ್ಲೆಯಲ್ಲಿ ‘ಇಂದಿರಾ ಕ್ಯಾಂಟೀನ್‌’ ಆರಂಭಕ್ಕೆ ಸಿದ್ಧತೆ

17 Jan, 2018

ಕೋಲಾರ
ಗುಡಿ ಕೈಗಾರಿಕೆಗಳಿಗೆ ಶೇ 20 ಸಾಲ ಮೀಸಲಿಡಿ

ವಾಣಿಜ್ಯ ಬ್ಯಾಂಕ್‌ಗಳು ಸಾಲ ನೀಡಿಕೆ ಪ್ರಮಾಣದಲ್ಲಿ ಶೇ 20ರಷ್ಟು ಹಣವನ್ನು ಗುಡಿ ಕೈಗಾರಿಕೆಗಳಿಗೆ ಮೀಸಲಿಡಬೇಕು

17 Jan, 2018