ಬಿಡದಿ

‘ವಿದ್ಯಾರ್ಥಿಗಳಿಗೆ ಕನಕೋತ್ಸವ ಉತ್ತಮ ವೇದಿಕೆ’

ಇಲ್ಲಿನ ಬಸವೇಶ್ವರ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ನಡೆದ ಹೋಬಳಿ ಮಟ್ಟದ ಕನಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಡದಿ: ಗ್ರಾಮೀಣ ಭಾಗದ ಪ್ರತಿಭೆಗಳ ಅನಾವರಣಕ್ಕೆ ಕನಕೋತ್ಸವ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಹೇಳಿದರು.

ಇಲ್ಲಿನ ಬಸವೇಶ್ವರ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ನಡೆದ ಹೋಬಳಿ ಮಟ್ಟದ ಕನಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆಯನ್ನು ಹೊರತೆಗೆಯುವ ಜತೆಗೆ ಕಲೆಯ ಬಗ್ಗೆ ಆಸಕ್ತಿ ಇರುವ ಇತರರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಡಿ.ಕೆ.ಎಸ್ ಚಾರಿಟೆಬಲ್ ಇನ್‌ಸ್ಟಿಟ್ಯೂಟ್ ಉತ್ತಮ ಹೆಜ್ಜೆ ಇಟ್ಟಿದೆ. ಈ ಅವಕಾಶವನ್ನು ಎಲ್ಲರೂ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.

16 ವರ್ಷದ ಒಳಗಿನ ಮತ್ತು ಮೇಲ್ಪಟ್ಟವರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕಳೆದ ವರ್ಷ ನಡೆದ ಕನಕೋತ್ಸವದಲ್ಲಿ ಬಿಡದಿ ಹೋಬಳಿ ಮಕ್ಕಳು ಹೆಚ್ಚಿನ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ತೀರ್ಪುಗಾರರು ನಿಷ್ಪಕ್ಷಪಾತ ಮನೋಭಾವದ ದೃಷ್ಠಿಕೋನದಲ್ಲಿ ಕಾರ್ಯ ನಿರ್ವಹಿಸಬೇಕು, ಅರ್ಹರ ಪರಿಶ್ರಮಕ್ಕೆ ತಕ್ಕ ಫಲ ಸಿಗುವಂತೆ ತೀರ್ಪು ನೀಡಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಗಾಣಕಲ್‌ ನಟರಾಜ್ ಮಾತನಾಡಿ 5 ವರ್ಷಗಳಿಂದ ಪ್ರತಿ ವರ್ಷವೂ ಶಾಲಾ ಹಂತದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ, ಈ ವರ್ಷ ಮೊದಲ ಹಂತವಾಗಿ ಹೋಬಳಿ ಮಟ್ಟದಲ್ಲಿ ಆರಂಭವಾಗಿದೆ. ಡಿಸೆಂಬರ್ 26 ರಂದು ಕನಕಪುರದಲ್ಲಿ ಜಿಲ್ಲಾ ಮಟ್ಟದ ಕನಕೋತ್ಸವ ನಡೆಯಲಿದೆ ಎಂದು ತಿಳಿಸಿದರು.

80ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಕನಕೋತ್ಸವದಲ್ಲಿ ಭಾಗವಹಿಸಿದ್ದರು. ಬಸವೇಶ್ವರ ಶಾಲಾಭಿವೃದ್ಧಿ ಟ್ರಸ್ಟಿನ ನಾಗರಾಜು, ರೇಣುಕಾ ಪ್ರಸಾದ್, ದೊಡ್ಡಯ್ಯ, ರಾಮಯ್ಯ, ಭದ್ರಯ್ಯ, ರಾಜು, ಗಂಗಾಧರ್, ನಂಜಪ್ಪ, ಕಾವ್ಯ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಮನುಷ್ಯ ಧರ್ಮದ ಸ್ಥಾಪನೆಗೆ ಕ್ರಮ

ಕನಕಪುರ
ಮನುಷ್ಯ ಧರ್ಮದ ಸ್ಥಾಪನೆಗೆ ಕ್ರಮ

19 Apr, 2018

ಚನ್ನಪಟ್ಟಣ
ಅತ್ಯಾಚಾರಿಗಳಿಗೆ ಶಿಕ್ಷೆ ನೀಡಲು ಆಗ್ರಹ

ಜಮ್ಮು ಕಾಶ್ಮೀರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಅಮಾನುಷವಾಗಿ ಕೊಲೆ ಮಾಡಿರುವ ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡುವಂತೆ ಆಗ್ರಹಿಸಿ ವಿವಿಧ ಮುಸ್ಲಿಂ ಸಂಘಟನೆಯ ಪದಾಧಿಕಾರಿಗಳು...

18 Apr, 2018

ರಾಮನಗರ
ಗರಿಷ್ಠ ಅಂತರದ ಗೆಲುವಿನ ದಾಖಲೆ ಸಿಂಧ್ಯರದ್ದು

ರಾಮನಗರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನವೇ ಸೋಲು ಗೆಲುವಿನ ಲೆಕ್ಕಾಚಾರ ನಡೆದಿದೆ. ತಮ್ಮ ನೆಚ್ಚಿನ ನಾಯಕರು ಭಾರಿ ಅಂತರದಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸ ಕಾರ್ಯಕರ್ತರದ್ದು. ಆದರೆ...

18 Apr, 2018
ಹಾಲು ಸೊಸೈಟಿ ವಿರುದ್ಧ ರೈತರ ಪ್ರತಿಭಟನೆ

ಕನಕಪುರ
ಹಾಲು ಸೊಸೈಟಿ ವಿರುದ್ಧ ರೈತರ ಪ್ರತಿಭಟನೆ

18 Apr, 2018

ಮಾಗಡಿ
ಮತ ಮಾರುವ ಸರಕಲ್ಲ-

ಪ್ರತಿಯೊಬ್ಬ ವಯಸ್ಕರು ಮತದಾನ ಮಾಡುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತದಾನದ ಮಹತ್ವ ತಿಳಿಸಿ ಜಾಗೃತಿ ಮೂಡಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ...

18 Apr, 2018