ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಪೂರ್ಣ ಯೋಜನೆಗೆ ಮೂಲ ಸೌಕರ್ಯಕ್ಕೆ ನೀಡುವಂತೆ ಪ್ರತಿಭಟನೆ

Last Updated 30 ನವೆಂಬರ್ 2017, 9:43 IST
ಅಕ್ಷರ ಗಾತ್ರ

ಹೊಸದುರ್ಗ: ಮಾತೃಪೂರ್ಣ ಯೋಜನೆಯ ಜಾರಿಗೆ ಅಗತ್ಯ ಮೂಲಸೌಕರ್ಯ ಹಾಗೂ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರದ ಕಳೆದ ಅಕ್ಟೋಬರ್‌ 2ರಿಂದ ಮಾತೃಪೂರ್ಣ ಯೋಜನೆಯನ್ನು ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಜಾರಿಗೊಳಿಸಿದೆ. ಆದರೆ ಯಾಜನೆ ಅನುಷ್ಠಾನಕ್ಕೆ ಬೇಕಾದ ಮೂಲಸೌಕರ್ಯ ಒದಗಿಸಿಲ್ಲ. ಹಾಗೆಯೇ ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಕಾರ್ಯಕರ್ತೆಯರ ಗೌರವ ಧನವನ್ನು ಹೆಚ್ಚಿಸದೇ ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದೆ. ಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಸಹಾಯಕಿಯರಿಗೆ ಕನಿಷ್ಠ ವೇತನ ₹ 18,000 ನೀಡುವಂತೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ಮಾತೃಪೂರ್ಣ ಯೋಜನೆಯ ಫಲಾನುಭವಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಅವರಿಗೆ ಬಿಸಿಯೂಟ ತಯಾರಿಸಲು ದೊಡ್ಡ ಗಾತ್ರದ ಸ್ಟೌವ್ ಮತ್ತು ಕುಕ್ಕರ್ ಒದಗಿಸಬೇಕು. ಒಂದು ಅಂಗನವಾಡಿ ಕೇಂದ್ರಕ್ಕೆ ವರ್ಷಕ್ಕೆ 4 ಗ್ಯಾಸ್ ಸಿಲಿಂಡರ್‌ ಒದಗಿಸುವ ಬದಲಿಗೆ, 8 ಗ್ಯಾಸ್‌ ಸಿಲಿಂಡರ್‌ ನೀಡಬೇಕು. ತಲಾ ಒಂದು ಸಿಲಿಂಡರ್‌ಗೆ ₹ 500 ಬದಲಿಗೆ ಈಗಿನ ದರದಂತೆ ₹ 800 ಕೊಡಬೇಕು. ಮಕ್ಕಳಿಗೆ, ಗರ್ಭಿಣಿ ಹಾಗೂ ಬಾಣಂತಿಯರಿಗೆ ಕೊಡುವ ಕೋಳಿ ಮೊಟ್ಟೆ ಮತ್ತು ತರಕಾರಿ ಖರೀದಿಸಲು ಯೋಜನಾಧಿಕಾರಿ ಕಾರ್ಯಕರ್ತೆಯರ ಖಾತೆಗೆ ಹಣವನ್ನು ಮುಂಗಡವಾಗಿ ಜಮಾ ಮಾಡುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಎಐಟಿಯುಸಿ ಅಧ್ಯಕ್ಷ ಕೆ.ಎನ್. ರಮೇಶ್, ತಾಲ್ಲೂಕು ಅಂಗನವಾಡಿ ಫೆಡರೇಷನ್‌ ಅಧ್ಯಕ್ಷೆ ಎನ್.ಬಿ.ಸುಜಾತಾ, ಕಾರ್ಯದರ್ಶಿ ಕೆ.ಮಂಜುಳಾ, ಶಶಿಕಲಾ, ಗಿರಿಜಮ್ಮ, ಲೀಲಮ್ಮ, ರತ್ನಮ್ಮ, ತೊಳಸಮ್ಮ, ಕಲ್ಯಾಣಮ್ಮ, ಸುಮಿತ್ರಮ್ಮ, ಚಂದ್ರಮ್ಮ, ಶಾರದಮ್ಮ, ಸೌಭಾಗ್ಯ, ಕನಕಾಕ್ಷಮ್ಮ, ಎಂ.ಎನ್. ಲಕ್ಷ್ಮಿ ಸುಮಿತ್ರ ಬಾಯಿ, ಗಂಗಮ್ಮ, ರಾಧಾಮಣಿ, ವಿನೋದಬಾಯಿ, ಅಹಲ್ಯ ಸರೋಜಮ್ಮ ಪ್ರತಿಭಟನೆಯ ನೇತೃತ್ವ ವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT