ಬೈಂದೂರು

‘ಸೇನಾವೃತ್ತಿಯ ಹಿಂದೆ ದೇಶಪ್ರೇಮದ ಸೆಳೆತ’

ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಣೂರಿನ ಗೀತಾನಂದ ಫೌಂಡೇಷನ್ ಜಂಟಿ ಆಶ್ರಯದಲ್ಲಿ ನಾಡದಲ್ಲಿ ಭಾನುವಾರ ನಡೆದ ತಿಂಗಳ ಸಡಗರ ಸರಣಿಯ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೈಂದೂರು: ಸೇನೆಯಲ್ಲಿನ ದುಡಿಮೆ ಅನ್ಯ ವೃತ್ತಿಗಳಂತಲ್ಲ. ಅದರ ಹಿಂದೆ ದೇಶಪ್ರೇಮದ ಪ್ರೇರಣೆ, ಸೆಳೆತ ಇರುತ್ತದೆ ಎಂದು ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್ ಹೇಳಿದರು.

ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಣೂರಿನ ಗೀತಾನಂದ ಫೌಂಡೇಷನ್ ಜಂಟಿ ಆಶ್ರಯದಲ್ಲಿ ನಾಡದಲ್ಲಿ ಭಾನುವಾರ ನಡೆದ ತಿಂಗಳ ಸಡಗರ ಸರಣಿಯ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀಮಂತ ವರ್ಗದವರು ದೇಶ ಕಾಯುವ ಕಾಯಕಕ್ಕೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ರಾಷ್ಟ್ರಪ್ರೇಮದ ಪಾಠ ಬೋಧಿಸಿದರೆ ಅವರು ಸ್ವಯಂಪ್ರೇರಣೆಯಿಂದ ದೇಶ ಸೇವೆಗೆ ಮುಂದಾಗುತ್ತಾರೆ ಎಂದರು.

ನಾಡ ಗುಡ್ಡೇಅಂಗಡಿ ನಿವಾಸಿ ಮಾಜಿ ಸೈನಿಕ ವೆನೆಸಿಸ್ ಪಿರೇರಾ ದಂಪತಿಯನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಹಿಂದೆ ಸೈನಿಕರ ಜೀವನ ದುಸ್ತರವಾಗಿತ್ತು. ಶಸ್ತ್ರಾಸ್ತ್ರಗಳ ಕೊರತೆ ಇತ್ತು. ಆದರೆ, ಈಗ ನಮ್ಮ ದೇಶದ ಮೂರು ಸೇನೆಗಳು ಸದೃಢವಾಗಿದ್ದು, ಶತ್ರುರಾಷ್ಟ್ರಗಳ ಆಕ್ರಮಣವನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ತಾಕತ್ತು ಅವುಗಳಿಗಿದೆ. ಸೈನಿಕರ ಕುರಿತಾಗಿ ಪ್ರತಿಯೊಬ್ಬರಿಗೂ ಹೆಮ್ಮೆ, ಅಭಿಮಾನ, ಗೌರವ ಇರಬೇಕು. ಆಗ ಗಡಿಯಲ್ಲಿ ತಮ್ಮ ಜೀವವನ್ನು ಒತ್ತೆಯಿರಿಸಿ ನಮ್ಮನ್ನು ಕಾಯುವ ಯೋಧರಿಗೆ ಕೆಲಸ ಮಾಡಲು ಇನ್ನಷ್ಟು ಹುಮ್ಮಸ್ಸು, ಉತ್ಸಾಹ ಬರುತ್ತದೆ’ ಎಂದರು.

ಸಾಮಾಜಿಕ ಕಾರ್ಯಕರ್ತ ಪ್ರಭು ಕೆನಡಿ ಪಿರೇರಾ, ಮಂಜುನಾಥ ಹೆಬ್ಬಾರ್, ಶಿಕ್ಷಕ ಸ್ಟಾಲಿನ್ ಪಿರೇರಾ, ಪ್ರಭು ಆರ್ಥರ್ ಪಿರೇರಾ, ಪ್ರಕಾಶ ಹೆಬ್ಬಾರ್ ಇದ್ದರು. ಘಟಕದ ಕಾರ್ಯದರ್ಶಿ ಡಾ. ಕಿಶೋರಕುಮಾರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ರವೀಂದ್ರ ಎಚ್. ವಂದಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಬೈಂದೂರು
ಅಸ್ವಸ್ಥರಿಗೆ ಚಿಕಿತ್ಸಾ ನೆರವು ವಿತರಣೆ

ತ್ರಾಸಿ ಮಹಿಷಮರ್ದಿನಿ ಫ್ರೆಂಡ್ಸ್ ವತಿಯಿಂದ ಅಸ್ವಸ್ಥರ ಚಿಕಿತ್ಸೆಗೆ ನೆರವು ವಿತರಿಸುವ ಕಾರ್ಯಕ್ರಮ ಮಂಗಳವಾರ ನಡೆಯಿತು.‌

26 Apr, 2018

ಚೇಂಪಿ
‘ಭವಿಷ್ಯದಲ್ಲಿ ಅಧರ್ಮ ಹೆಚ್ಚಾಗುವ ಭಯ’

ಹಿಂದೆ ಮುನಿಗಳು ನುಡಿದಂತೆ ಮುಂದಿನ ಕಲಿಯುಗದಲ್ಲಿ ಅಧರ್ಮ ಹೆಚ್ಚಾಗುತ್ತದೆ. ಆ ಸಂದರ್ಭದಲ್ಲಿ ಧರ್ಮ ನೆಲೆಯೂರಲು ಪೂಜಾ ಹೋಮ ಕಾರ್ಯಕ್ರಮಗಳಿಂದ ಸಾಧ್ಯ ಎಂದು ಪಾಂಡೇಶ್ವರದ ರಕ್ತೇಶವರಿ...

26 Apr, 2018
ಕಾಪಾಡು ದುರ್ಗಾಪರಮೇಶ್ವರಿ

ಉಡುಪಿ
ಕಾಪಾಡು ದುರ್ಗಾಪರಮೇಶ್ವರಿ

26 Apr, 2018

ಉಡುಪಿ
‘ಬಿಜೆಪಿ ಗಲಭೆ ಮಾಡಿಸಬಹುದು’

‘ಬಿಜೆಪಿ ಮುಖಂಡರಿಗೆ ಶಾಂತಿಯುತವಾಗಿ ಚುನಾವಣೆ ನಡೆಸಿ ಅಭ್ಯಾಸ ಇಲ್ಲ, ಆದ್ದರಿಂದ ಮೇ 12ರ ಮೊದಲು ಗಲಭೆ ಎಬ್ಬಿಸಿ ಜನರ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ....

25 Apr, 2018

ಕಾರ್ಕಳ
ಪಕ್ಷಿಗಳಿಗೆ ನೀರು, ಆಹಾರ ನೀಡಿ

ಗಿಡಗಳನ್ನು ನೆಟ್ಟು, ನೀರು ಆಹಾರವನ್ನು ಪಕ್ಷಿಗಳಿಗೆ ಇಟ್ಟು ಮಾನವೀಯತೆ ಮೆರೆಯಬೇಕು ಎಂದು ನಿತ್ಯಾನಂದ ಶೆಟ್ಟಿ ಬದ್ಯಾರು ಹೇಳಿದರು.

25 Apr, 2018