ಕಾಪು

ಎಟಿಎಂ ಕೇಂದ್ರದಲ್ಲಿ ಸಿಕ್ಕಿದ ಹಣ ವಾರೀಸುದಾರರಿಗೆ ಹಸ್ತಾಂತರ

ಇದೇ ಎಟಿಎಂಗೆ ಹಣ ನಗದೀಕರಿಸಲು ಕಾಪು ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಲಕ್ಷ್ಮಣ್ ಅವರ ಪುತ್ರ ಕೆ.ಮನೀಷ್ ಕುಮಾರ್ ತೆರಳಿದ್ದರು. ಈ ವೇಳೆ ₹ 10,000 ಅವರಿಗೆ ಸಿಕ್ಕಿತ್ತು. ಅದನ್ನು ಮನೀಷ್ ಕಾಪು ಪಿಎಸ್ಐ ನಿತ್ಯಾನಂದ ಗೌಡ ಅವರ ಬಳಿ ತಂದು ಕೊಟ್ಟಿದ್ದರು.

ಕಾಪುವಿನ ಎಟಿಎಂನಲ್ಲಿ ಹಣ ಕಳೆದುಕೊಂಡಿದ್ದ ತಾರನಾಥ್ ವಿ.ಕೋಟ್ಯಾನ್ ಅವರಿಗೆ ಕಾಪು ಪಿಎಸ್ಐ ನಿತ್ಯಾನಂದ ಗೌಡ ಹಣ ನೀಡಿದರು.

ಕಾಪು (ಪಡುಬಿದ್ರಿ): ಎಟಿಎಂನಲ್ಲಿ ಹಣ ನಗದೀಕರಿಸಲು ಬಂದಿದ್ದ ವ್ಯಕ್ತಿಯೊಬ್ಬರು ಕಳೆದುಕೊಂಡ ಹಣವನ್ನು ಕಾಪು ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಅವರ ಪುತ್ರ ಮಾನವೀಯತೆ ಮೆರೆದು ಠಾಣೆಯ ಎಸ್ಐ ಅವರಿಗೆ ನೀಡಿದ್ದಾರೆ.

ತಾರನಾಥ್ ವಿ.ಕೋಟ್ಯಾನ್ ಅವರು ಶನಿವಾರ ಸಿಂಡಿಕೇಟ್ ಬ್ಯಾಂಕ್‌ನ ಕಾಪು ಎಟಿಎಂ ಕೇಂದ್ರದಿಂದ ₹ 10 ಸಾವಿರ ನಗದೀಕರಣಕ್ಕೆ ಯತ್ನಿಸಿದ್ದರು. ಆದರೆ, ಹಣ ಕೈಗೆ ಸಿಗದಿದ್ದಾಗ ಅಲ್ಲಿಂದ ಹೊರಟು ಎಸ್‌ಬಿಎಂನ ಎಟಿಎಂ ಕೇಂದ್ರದಿಂದ ₹ 10 ಸಾವಿರ ನಗದೀಕರಿಸಿ ಮನೆಗೆ ತೆರಳಿದ್ದರು. ಮೊದಲು ಡ್ರಾ ಆಗಿರುವ ಬಗ್ಗೆ ಅವರಿಗೆ ತಿಳಿದಿರಲಿಲ್ಲ.

ಇದೇ ಎಟಿಎಂಗೆ ಹಣ ನಗದೀಕರಿಸಲು ಕಾಪು ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಲಕ್ಷ್ಮಣ್ ಅವರ ಪುತ್ರ ಕೆ.ಮನೀಷ್ ಕುಮಾರ್ ತೆರಳಿದ್ದರು. ಈ ವೇಳೆ ₹ 10,000 ಅವರಿಗೆ ಸಿಕ್ಕಿತ್ತು. ಅದನ್ನು ಮನೀಷ್ ಕಾಪು ಪಿಎಸ್ಐ ನಿತ್ಯಾನಂದ ಗೌಡ ಅವರ ಬಳಿ ತಂದು ಕೊಟ್ಟಿದ್ದರು. ಹಣ ಕಳೆದು ಕೊಂಡವರ ವಿವರವನ್ನು ಬ್ಯಾಂಕಿಗೆ ಹೋಗಿ ಪಡೆದುಕೊಂಡ ಎಸ್‌ಐ ಅವರು, ತಾರನಾಥ್ ಕೋಟ್ಯಾನ್‌ ಅವರಿಗೆ ಸೋಮವಾರ ನೀಡಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಕಡಲ ಕಿನಾರೆ ರಂಗೇರಿಸಿದ ಉತ್ಸವ

ಕುಂದಾಪುರ
ಕಡಲ ಕಿನಾರೆ ರಂಗೇರಿಸಿದ ಉತ್ಸವ

23 Jan, 2018
ಜಾತಿ– ಧರ್ಮ ನೋಡಿ ಮತ ಹಾಕಬೇಡಿ!

ಉಡುಪಿ
ಜಾತಿ– ಧರ್ಮ ನೋಡಿ ಮತ ಹಾಕಬೇಡಿ!

23 Jan, 2018
‘ಮಾದರಿ ತಾಲ್ಲೂಕಾಗಿ ಬಾಗೇವಾಡಿ ಅಭಿವೃದ್ಧಿ’

ಬಸವನಬಾಗೇವಾಡಿ
‘ಮಾದರಿ ತಾಲ್ಲೂಕಾಗಿ ಬಾಗೇವಾಡಿ ಅಭಿವೃದ್ಧಿ’

21 Jan, 2018

ಬಸವನಬಾಗೇವಾಡಿ
ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಆರಂಭ

‘ತೊಗರಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದ ಸಂದರ್ಭದಲ್ಲಿ ಖರೀದಿಸಲು ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ. ಈಗಾಗಲೇ ನೋಂದಣಿ ಮಾಡಿಸಿದ ರೈತರು ತೊಗರಿ ಮಾರಾಟ ಮಾಡುವ ಮೂಲಕ...

21 Jan, 2018
ಹಾಲಾಡಿ– ರಾಕೇಶ್ ಮಲ್ಲಿ ನಡುವೆ ಪೈಪೋಟಿ!

ಉಡುಪಿ
ಹಾಲಾಡಿ– ರಾಕೇಶ್ ಮಲ್ಲಿ ನಡುವೆ ಪೈಪೋಟಿ!

21 Jan, 2018