ಹಂಪಾಪುರ

ತಂಬಾಕಿಗೆ ಪರ್ಯಾಯ ಬೆಳೆ ರೇಷ್ಮೆ

ದೇಶದಲ್ಲಿ ಗುಣ ಮಟ್ಟದ ರೇಷ್ಮೆಯನ್ನು ಬೆಳೆಯ ಲಾಗುತ್ತಿದೆಯಾದರೂ ಉತ್ಪಾದಕರ ಕೊರತೆಯಿಂದಾಗಿ ಚೀನಾ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದು ರೇಷ್ಮೆಯನ್ನು ಆಮದು ಮಾಡಿಕೊಳ್ಳದಂತೆ ಮಾಡಲು ರೈತರು ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆಯನ್ನು ಬೆಳೆಯಬೇಕಿದೆ’

ಹಂಪಾಪುರ ಹೊರವಲಯದ ಬೊಪ್ಪನಹಳ್ಳಿ ಗ್ರಾಮದ ರೇಷ್ಮೆ ಬೆಳೆಗಾರ ನಿಂಗೇಗೌಡರವರ ಜಮೀನಿಗೆ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ಗುರುವಾರ ಭೇಟಿ ನೀಡಿ ಹಿಪ್ಪುನೇರಳೆ ಬೆಳೆಯನ್ನು ವೀಕ್ಷಿಸಿದರು

ಹಂಪಾಪುರ: ‘ದೇಶದಲ್ಲಿ ಗುಣ ಮಟ್ಟದ ರೇಷ್ಮೆಯನ್ನು ಬೆಳೆಯ ಲಾಗುತ್ತಿದೆಯಾದರೂ ಉತ್ಪಾದಕರ ಕೊರತೆಯಿಂದಾಗಿ ಚೀನಾ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದು ರೇಷ್ಮೆಯನ್ನು ಆಮದು ಮಾಡಿಕೊಳ್ಳದಂತೆ ಮಾಡಲು ರೈತರು ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆಯನ್ನು ಬೆಳೆಯಬೇಕಿದೆ’ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ತಿಳಿಸಿದರು.

ಇಲ್ಲಿಗೆ ಸಮೀಪದ ಬೊಪ್ಪನಹಳ್ಳಿ ಗ್ರಾಮದ ರೇಷ್ಮೆ ಬೆಳೆಗಾರ ನಿಂಗೇಗೌಡ ಅವರ ಜಮೀನಿಗೆ ಗುರುವಾರ ಭೇಟಿ ನೀಡಿ ಅವರು ಬೆಳೆದಿರುವ ರೇಷ್ಮೆಯನ್ನು ವೀಕ್ಷಿಸಿ ಮಾತನಾಡಿದರು.

ಕರ್ನಾಟಕ ಶೇ 60 ರಷ್ಟು ರೇಷ್ಮೆಯನ್ನು ಬೆಳೆದು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ತಮಿಳುನಾಡು, ಮಹಾರಾಷ್ಟ್ರ ಹಾಗೂ ಅವಿಭಜಿತ ಆಂದ್ರಪ್ರದೇಶ ಭಾಗದಲ್ಲಿ ತಲಾ ಶೇ10 ರಷ್ಟು ಹಾಗೂ ಇನ್ನುಳಿದ ರಾಜ್ಯಗಳಲ್ಲಿ ಒಟ್ಟಾರೆ ಶೇ 10ರಷ್ಟು ಬೆಳೆಯಲಾಗುತ್ತಿದೆ ಎಂದರು.

ಮೈಸೂರು ಜಿಲ್ಲೆಯಲ್ಲಿ ಎಚ್.ಡಿ. ಕೋಟೆ ತಾಲ್ಲೂಕಿನಲ್ಲೇ ಸುಮಾರು 434 ಎಕರೆ ಪ್ರದೇಶದಲ್ಲಿ ರೇಷ್ಮೆಯನ್ನು ಬೆಳೆಯುತ್ತಿದ್ದು ಇನ್ನು 2 ವರ್ಷ ಅವಧಿಯಲ್ಲಿ ಈ ಪ್ರಮಾಣವನ್ನು ದುಪ್ಪಟ್ಟು ಮಾಡುವ ಗುರಿಯನ್ನು ಹೊಂದಲಾಗಿದೆ. ಹಿಂದೆ ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಗುತ್ತಿದ್ದರಿಂದ ರೇಷ್ಮೆಯನ್ನು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ, ಆದರೆ ನಮ್ಮ ಸಂಶೋಧಕರ ತಂಡ ಹೆಚ್ಚು ಮಳೆಗೂ ಹೊಂದುಕೊಳ್ಳುವಂತ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ತಿಳಿಸಿದರು.

ತಂಬಾಕಿಗೆ ಪರ್ಯಾಯ: ತಾಲ್ಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ತಂಬಾಕಿಗೆ ಪರ್ಯಾಯವಾಗಿ ರೇಷ್ಮೆಯನ್ನು ಬೆಳೆಯುವಂತೆ ರೈತರನ್ನು ಮನವೊಲಿಸುವುದಾಗಿ ತಿಳಿಸಿದ ಅವರು, ಕಡಿಮೆ ನೀರುಳ್ಳ ಹಾಗೂ ಮಳೆಯಾಶ್ರಿತ ಪ್ರದೇಶದಲ್ಲೂ ಈ ಬೆಳೆಯನ್ನು ಬೆಳೆಯಬಹುದಾಗಿದೆ ಎಂದು ಅವರು ರೈತರಿಗೆ ಸಲಹೆ ನೀಡಿದರು.

ರೇಷ್ಮೆ ಬೆಳೆಯಲು ರೈತರು ಮುಂದಾದರು ಉಚಿತವಾಗಿ ರೈತರಿಗೆ ತರಬೇತಿ ನೀಡುವುದಲ್ಲದೇ ಹಿಪ್ಪುನೇರಳೆ ಬೆಳೆಗೆ ನರೇಗಾದಿಂದ ಗುಂಡಿ ತೆಗೆಸಲಾಗುವುದು. ಅಲ್ಲದೇ, ಅಲ್ಲದೇ ರೇಷ್ಮೆ ಬೆಳೆಗಳಿಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಶೇ 90 ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ರೇಷ್ಮೆ ಕೃಷಿ ಸಾವಯವ ಕೃಷಿ ತಜ್ಞ ಡಾ.ಕೆ.ಆರ್. ಹುಲ್ಲುನಾಚೇಗೌಡ, ಜಿಲ್ಲಾ ರೇಷ್ಮೆ ಉಪನಿರ್ದೇಶಕ ಜವರೇಗೌಡ, ತಾಲ್ಲೂಕು ಸಹಾಯಕ ನಿರ್ದೇಶಕ ಕೇಶವಮೂರ್ತಿ, ರೇಷ್ಮೆ ವಿಸ್ತರಾಣಾಧೀಕಾರಿ ಉಮೇಶ್ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಕಾರವಾರ
ವಾರ್ಡ್‌ವಾರು ಮೀಸಲಾತಿ ಬದಲಿಸಲು ಆಗ್ರಹ

ನಗರಸಭೆಯ ಚುನಾವಣೆಗೆ ವಾರ್ಡ್‌ವಾರು ಮೀಸಲಾತಿಗೆ ಕರಡು ಅಧಿಸೂಚನೆ ಪ್ರಕಟವಾಗಿದ್ದು, ಈಗಾಗಲೇ ಜಿಲ್ಲಾಧಿಕಾರಿ ಕಚೇರಿಗೆ ಆಕ್ಷೇಪಣೆಗಳು ಸಲ್ಲಿಕೆಯಾಗುತ್ತಿವೆ. ನಗರದ ಏಳನೇ ವಾರ್ಡ್ ಮತ್ತು 24ನೇ ವಾರ್ಡ್‌ನ ಮೀಸಲಾತಿಯನ್ನು...

12 Jun, 2018

ರಾಯಚೂರು
ಉತ್ತಮ ಪರಿಸರ ಉಳಿಸುವಲ್ಲಿ ನಾವೆಲ್ಲ ವಿಫಲ

‘ಮುಂದಿನ ಪೀಳಿಗೆಗೆ ಶುದ್ಧವಾದ ಗಾಳಿ, ನೀರು ಹಾಗೂ ಪರಿಸರವನ್ನು ಉಳಿಸಿಕೊಡುವಲ್ಲಿ ಅಸಮರ್ಥರಾಗಿದ್ದೇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರು ಕಳವಳ ವ್ಯಕ್ತಪಡಿಸಿದರು.

6 Jun, 2018

ಲಿಂಗಸುಗೂರು
ಪ್ಲಾಸ್ಟಿಕ್‌ ಮಾಲಿನ್ಯ ತಡೆಗೆ ಮೀನಮೇಷ

ಭಾರತವು ವಿಶ್ವ ಪರಿಸರ ದಿನಾಚರಣೆ ಸಾರಥ್ಯ ವಹಿಸಿಕೊಂಡಿದ್ದು ಈ ಬಾರಿಯ ವಿಶೇಷ. ಪ್ಲಾಸ್ಟಿಕ್‌ ಮಾಲಿನ್ಯ ಸೋಲಿಸಿ ಎಂಬುದು ಘೋಷವಾಕ್ಯ. ಈ ಘೋಷ ವಾಕ್ಯವನ್ನು ಅನುಷ್ಠಾನಕ್ಕೆ...

5 Jun, 2018

ತಾಳಿಕೋಟೆ
ಪರಿಸರ ನಗರಕ್ಕೆ ಹಸಿರು ಸಂಪದ ಬಳಗ

ಪಟ್ಟಣದಲ್ಲಿ ಪುರಸಭೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕೂಟವಾದ ಹಸಿರು ಸಂಪದ ಬಳಗದ ಸಹಯೋಗದಲ್ಲಿ ವಿಶ್ವಪರಿಸರ ದಿನಾಚರಣೆಯನ್ನು ಸ್ಮರಣಿಯವಾಗಿಸುವ ಕೆಲಸಕ್ಕೆ ಚಾಲನೆ ದೊರೆತಿದೆ.

5 Jun, 2018

ಗದಗ
ಮಳೆಗೆ ತತ್ತರಿಸಿದ ಗಂಗಿಮಡಿ; ಜನ ಜೀವನ ಅಸ್ತವ್ಯಸ್ತ

ಶನಿವಾರ ರಾತ್ರಿ ಮತ್ತು ಭಾನುವಾರ ನಸುಕಿನಲ್ಲಿ ಸುರಿದ ಧಾರಾಕಾರ ಮಳೆಗೆ ಗದುಗಿನ ಗಂಗಿಮಡಿ ಪ್ರದೇಶದ ಜನಜೀವನ ಸಂಪೂರ್ಣ ಅಸ್ತವ್ಯವಸ್ಥಗೊಂಡಿದೆ. ಇಡೀ ಬಡಾವಣೆ ಜಲಾವೃತಗೊಂಡಿದ್ದು, ಹಲವು...

4 Jun, 2018