ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೆಗೂ ದುರಸ್ತಿಯಾಯ್ತು ನಲ್ಲಿ!

Last Updated 1 ಡಿಸೆಂಬರ್ 2017, 5:04 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿನ ನಲ್ಲಿ ದುರಸ್ತಿ ಮಾಡಲಾಗಿದ್ದು, ನೀರು ಪೋಲಾಗುವುದು ತಪ್ಪಿದೆ. ಈ ಕುರಿತು ಇದೇ 27ರಂದು ‘ಚರಂಡಿ ಪಾಲಾಗುವ ನೀರು–ದೂರು’ ಎಂಬ ಶೀರ್ಷಿಕೆ ಅಡಿಯಲ್ಲಿ ‘ಪ್ರಜಾವಾಣಿ’ ಪತ್ರಿಕೆ ವರದಿ ಪ್ರಕಟಿಸಿತ್ತು.

ವರದಿ ಓದಿದ ಕರ್ನಾಟಕ ಅಂಗವಿಕಲರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜೆ. ಮಂಜುನಾಥ್‌ ತಮ್ಮ ಸ್ವಂತ ಖರ್ಚಿನಿಂದ ಹೊಸ ನಲ್ಲಿಯನ್ನು ಬುಧವಾರ ಸಂಜೆ ಹಾಕಿಸಿದ್ದಾರೆ.

‘ಅಧಿಕಾರಿಗಳಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ಈ ಕೆಲಸ ಮಾಡದಿರುವುದು ಬೇಸರ ತಂದಿದೆ. ಹೀಗಾಗಿ ನನ್ನ ಸ್ವಂತ ಖರ್ಚಿನಿಂದ ಕಾರ್ಮಿಕರನ್ನು ಕರೆತಂದು ನಲ್ಲಿ ಹಾಕಿಸಿದೆ. ಮುಂದಿನ ದಿನಗಳಲ್ಲಿ ‘ನಲ್ಲಿ ಸರಿಪಡಿಸಿ–ನೀರು ಉಳಿಸಿ’ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT