ಚನ್ನಮ್ಮನ ಕಿತ್ತೂರು

ನಿಮ್ಮಂಥ ನಾಡದ್ರೋಹಿಗಳು ಮತ್ಯಾರಿದ್ದಾರೆ: ಸ್ವಾಮೀಜಿ

ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಆಸ್ತಿ, ಕೋಟೆ ಮತ್ತು ಜೀವ ಕಳೆದುಕೊಂಡವರು ಕಿತ್ತೂರು ಜನರು ಎಂಬ ಇತಿಹಾಸ ಅರಿಯಬೇಕು. ಅಸಂಬದ್ಧ ಹೇಳಿಕೆ ನೀಡುವ ಮೂಲಕ ಇತಿಹಾಸಕ್ಕೆ ಸಂಸದರು ಅಪಚಾರವೆಸಗಿದ್ದಾರೆ

ಚನ್ನಮ್ಮನ ಕಿತ್ತೂರು: ಸಾಮಾಜಿಕ ಜಾಲತಾಣದಲ್ಲಿ ಕಿತ್ತೂರು ಚನ್ನಮ್ಮ ಮತ್ತು ಒನಕೆ ಓಬವ್ವ ಕುರಿತು ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿರುವ ಸಂಸದ ಪ್ರತಾಪಸಿಂಹ ಅವರನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅತೃಪ್ತಿ ವ್ಯಕ್ತಪಡಿಸಿದರು.

ಇಲ್ಲಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ‘ನಿಮ್ಮಂಥ ನಾಡದ್ರೋಹಿಗಳು ಮತ್ಯಾರಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನ. 28ರ ರಾತ್ರಿ 8ಕ್ಕೆ ಪ್ರತಾಪ್‌ಸಿಂಹರ ಫೇಸ್‌ಬುಕ್‌ ಖಾತೆಯಲ್ಲಿ ರಾಣಿ ಚನ್ನಮ್ಮ ಬ್ರಿಟಿಷರ ಜೊತೆ ಮತ್ತು ಒನಕೆ ಓಬವ್ವ ಹೈದರಾಲಿ ಜೊತೆ ಮಂಚ ಹಂಚಿಕೊಂಡಿದ್ದಳು ಎಂಬ ಅವಹೇಳನಕಾರಿ ಹೇಳಿಕೆ ಇತ್ತು. ಆದರೆ ರಾತ್ರಿ 9.30ಕ್ಕೆ ಆ ಪೋಸ್ಟ್‌ ಇರಲಿಲ್ಲ. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದು ಪ್ರತಾಪಸಿಂಹರ ಜವಾಬ್ದಾರಿ ಆಗಿತ್ತು. ಆದರೆ ಸುಮ್ಮನಿರುವುದು ಬೇಸರ ತಂದಿದೆ. ಇಂಥ ದುಷ್ಟ ಜನರನ್ನು ಬಗ್ಗು ಬಡಿಯಬೇಕಾಗಿದೆ’ ಎಂದರು.

ಸಾಹಿತಿ ಯ.ರು. ಪಾಟೀಲ ಮಾತನಾಡಿ ‘ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಆಸ್ತಿ, ಕೋಟೆ ಮತ್ತು ಜೀವ ಕಳೆದುಕೊಂಡವರು ಕಿತ್ತೂರು ಜನರು ಎಂಬ ಇತಿಹಾಸ ಅರಿಯಬೇಕು. ಅಸಂಬದ್ಧ ಹೇಳಿಕೆ ನೀಡುವ ಮೂಲಕ ಇತಿಹಾಸಕ್ಕೆ ಸಂಸದರು ಅಪಚಾರವೆಸಗಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು

ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಸಯ್ಯದ್‌ ಮನ್ಸೂರ್ ಮಾತನಾಡಿದರು. ಸಂಸದ ಪ್ರತಾಪ ಸಿಂಹರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರ್ ಪ್ರವೀಣ ಹುಚ್ಚಣ್ಣವರ ಅವರಿಗೆ ಈ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.

Comments
ಈ ವಿಭಾಗದಿಂದ ಇನ್ನಷ್ಟು
ಏತ ನೀರಾವರಿ ಕಾಮಗಾರಿ ಆರಂಭಕ್ಕೆ ಪ್ರಯತ್ನ

ಬೈಲಹೊಂಗಲ
ಏತ ನೀರಾವರಿ ಕಾಮಗಾರಿ ಆರಂಭಕ್ಕೆ ಪ್ರಯತ್ನ

23 Jan, 2018

ಗೋಕಾಕ
ಪ್ರತಿಭೆ ಬೆಳಕಿಗೆ ತಂದ ಆತ್ಮ ತೃಪ್ತಿ ಇದೆ

ರಾಜ್ಯದಲ್ಲಿ ಸಾಂಸ್ಕೃತಿಕ, ಕ್ರೀಡೆ ಹಾಗೂ ಸಾಮಾಜಿಕ ಉದ್ದೇಶಗಳಿಗಾಗಿ ಒಂಭತ್ತು ಕಾರ್ಯಕ್ರಮಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತದೆ.

23 Jan, 2018
ಲಕ್ಷ್ಮಿಗೆ ಟಿಕೆಟ್ ತಪ್ಪಿಸಲು ಯಾರಿಂದಲೂ ಆಗದು

ಬೆಳಗಾವಿ
ಲಕ್ಷ್ಮಿಗೆ ಟಿಕೆಟ್ ತಪ್ಪಿಸಲು ಯಾರಿಂದಲೂ ಆಗದು

22 Jan, 2018
ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

ಬೆಳಗಾವಿ
ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

22 Jan, 2018
ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ

ಬೆಳಗಾವಿ
ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ

21 Jan, 2018