ಹಗರಿಬೊಮ್ಮನಹಳ್ಳಿ

ಶ್ರೀಗುರು ಕೊಟ್ಟೂರೇಶ್ವರರ ವಿಜೃಂಭಣೆ ಮೆರವಣಿಗೆ

ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಮಾಳ, ನಂದಿಕೋಲು ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಶ್ರೀಗುರು ಕೊಟ್ಟೂರೇಶ್ವರರ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಹಗರಿಬೊಮ್ಮನಹಳ್ಳಿ: ಇಲ್ಲಿನ ಶ್ರೀಗುರು ಕೊಟ್ಟೂರೇಶ್ವರ ಮಾಲಾವೃಂದದಿಂದ ಕಾರ್ತೀಕೋತ್ಸವ ಅಂಗವಾಗಿ ಗುರುವಾರ ಕೊಟ್ಟೂರೇಶ್ವರರ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಬೆಳಗಿನ ಜಾವ ಪತ್ರಿಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ನಡೆದ ಪಟಾಕ್ಷಿ ಹರಾಜಿನಲ್ಲಿ ಹೂವಿನ ಮಲ್ಲಿಕಾರ್ಜುನ ₹20,100ಗಳಿಗೆ ಪಡೆದರು. ಕಳೆದ ವರ್ಷ ಪಟಾಕ್ಷಿ ಪಡೆದಿದ್ದ ಬಲ್ಲಾಹುಣ್ಸಿಯ ಹೋಟೆಲ್ ಬಣಕಾರ ಬಸಣ್ಣ ಅವರು ಮಾಲಾವೃಂದಕ್ಕೆ ₹41ಸಾವಿರ ನೀಡಿದರು.

ಇಬ್ಬರಿಗೂ ಬೆಳ್ಳಿ ದೀಪ ನೀಡಿ ಆಶೀರ್ವದಿಸಿದ ನಂದಿಪುರ ಮಹೇಶ್ವರ ಸ್ವಾಮೀಜಿ, ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಬೆಳಕು ಹೊಂದುವುದು ಕಾರ್ತೀಕೋತ್ಸವದ ಹಿನ್ನಲೆಯಾಗಿದೆ ಎಂದರು. ಕಡಲಬಾಳು ಗವಿಮಠದ ಶಾಖಾಮಠದ ಸೋಮಶೇಖರ ದೇವರು ಸಾನ್ನಿಧ್ಯ ವಹಿಸಿದ್ದರು.

ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಮಾಳ, ನಂದಿಕೋಲು ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಶ್ರೀಗುರು ಕೊಟ್ಟೂರೇಶ್ವರರ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಮಹಿಳೆಯರು ಕಳಸಗಳೊಂದಿಗೆ ಪಾಲ್ಗೊಂಡಿದ್ದರು.

ದಾರಿಯುದ್ದಕ್ಕೂ ಭಕ್ತರು ತೆಂಗಿನ ಕಾಯಿ ಹೂ ಹಣ್ಣು ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಪುರಸಭೆ ಸದಸ್ಯ ಬಿ.ಗಂಗಾಧರ, ಮಾಲಾವೃಂದದ ಬಸವರಾಜ ಅಯ್ಯನಗೌಡರ, ಎಂ.ಪಿ.ಎಂ.ಮಂಜುನಾಥ, ಅಕ್ಕಿ ಮಲ್ಲಿಕಾರ್ಜುನ, ಕಿರಾಣಿ ಕೊಟ್ರೇಶ್,ಪ್ರಕಾಶ್, ಕೆ.ಕೆ.ಮಲ್ಲಿಕಾರ್ಜುನ, ಬಿ.ಎಂ.ಶಿವಶಂಕ್ರಯ್ಯ, ಎ.ಎಂ.ಕೊಟ್ರೇಶ್, ನರೇಗಲ್ ಹರ್ಷ, ಬಣಕಾರ ಗುರು ಬಸವರಾಜ, ಬಾಳೆಕಾಯಿ ಸಿದ್ದೇಶ, ಕಾಯಿಗಡ್ಡಿ ಕೊಟ್ರೇಶ್, ಪಿಗ್ಮಿ ಮಂಜುನಾಥ, ಜಾಲಿ ಅಶೋಕ್, ಗಂಗಾಧರ, ಪತ್ರಿಬಸವೇಶ್ವರ ಸೇವಾ ಸಮಿತಿಯ ಅಕ್ಕಿ ಬಸವರಾಜ, ಶಬಾದಿಬಸಪ್ಪ, ಪೂರ್ಣಯ್ಯ, ಪ್ರಧಾನ ಅರ್ಚಕ ಕೆ.ಕೆ.ಬಿ.ಎಂ.ಕೊಟ್ರಯ್ಯ ಇದ್ದರು. ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ನಡೆಯಿತು.

Comments
ಈ ವಿಭಾಗದಿಂದ ಇನ್ನಷ್ಟು

ಹುಬ್ಬಳ್ಳಿ
ಘಟಾನುಘಟಿ ಅಭ್ಯರ್ಥಿಗಳ ಶಕ್ತಿ ಪ್ರದರ್ಶನ

ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಮತ್ತು ಜೆಡಿಎಸ್‌ ಅಭ್ಯರ್ಥಿ ರಾಜಣ್ಣ ಕೊರವಿ ಹಾಗೂ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ...

24 Apr, 2018
ರೈಲ್ವೆ ಸಿಬ್ಬಂದಿಗೆ ಪ್ರಶಸ್ತಿ, ನಗದು ಪ್ರದಾನ

ಹುಬ್ಬಳ್ಳಿ
ರೈಲ್ವೆ ಸಿಬ್ಬಂದಿಗೆ ಪ್ರಶಸ್ತಿ, ನಗದು ಪ್ರದಾನ

24 Apr, 2018

ಧಾರವಾಡ
ಸಚಿವನಾದ ಮೇಲೆ ಒಂದು ಗುಂಟೆಯೂ ಖರೀದಿಸಿಲ್ಲ’

ತಮ್ಮ ಬೆಂಬಲಿಗರೊಂದಿಗೆ ಚಕ್ಕಡಿಯಲ್ಲಿ ಮೆರವಣಿಗೆಯಲ್ಲಿ ಬಂದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಸೋಮವಾರ ಧಾರವಾಡ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು.

24 Apr, 2018

ಅಣ್ಣಿಗೇರಿ
'ಅಭಿವೃದ್ದಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆ'

ನವಲಗುಂದ ವಿಧಾನಸಭಾ ಮತಕ್ಷೇತ್ರದ ಹಾಗೂ ರಾಜ್ಯದ ಜನತೆ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಆಡಳಿತವನ್ನು ನೋಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಬದಲಾವಣೆಯ ಗಾಳಿ...

23 Apr, 2018
ಬಿರುಸುಗೊಂಡ ಚುನಾವಣಾ ಪ್ರಚಾರ

ಹುಬ್ಬಳ್ಳಿ
ಬಿರುಸುಗೊಂಡ ಚುನಾವಣಾ ಪ್ರಚಾರ

23 Apr, 2018