ಜನವಾಡ

ಒಂದೇ ವೇದಿಕೆಯಲ್ಲಿ ಮಹಾಪುರುಷರ ಜಯಂತಿ ಆಚರಿಸಿ: ಬಂಡೆಪ್ಪ ಕಾಶೆಂಪುರ

‘ಮಹಾಪುರುಷರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅವರು ಇಡೀ ಮನುಕುಲದ ಆಸ್ತಿ’ ಎಂದು ಹೇಳಿದರು. ‘ಮಾನವ ಕುಲ ಶ್ರೇಷ್ಠ ಎಂದು ಪ್ರತಿಪಾದಿಸಿದ್ದ ಕನಕದಾಸರು ಜಾತಿಯತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ದರು’

ಜನವಾಡ: ‘ಎಲ್ಲ ಮಹಾಪುರುಷರ ಜಯಂತಿಯನ್ನು ಒಂದೇ ವೇದಿಕೆಯಲ್ಲಿ ಆಚರಿಸಬೇಕು’ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಸಲಹೆ ಮಾಡಿದರು. ಬೀದರ್ ತಾಲ್ಲೂಕಿನ ಆಣದೂರು ವಾಡಿ ಗ್ರಾಮದಲ್ಲಿ ಬುಧವಾರ ನಡೆದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಾಪುರುಷರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅವರು ಇಡೀ ಮನುಕುಲದ ಆಸ್ತಿ’ ಎಂದು ಹೇಳಿದರು. ‘ಮಾನವ ಕುಲ ಶ್ರೇಷ್ಠ ಎಂದು ಪ್ರತಿಪಾದಿಸಿದ್ದ ಕನಕದಾಸರು ಜಾತಿಯತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ದರು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ನುಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಸದಸ್ಯೆ ಗೀತಾ ಚಿದ್ರಿ, ಭಾರತೀಯ ಆಹಾರ ನಿಗಮದ ಸದಸ್ಯ ನಾಗಭೂಷಣ ಕಮಠಾಣೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್ ಚಿಮಕೋಡೆ ಮಾತನಾಡಿದರು.

ಗೊಂಡ ವಿದ್ಯಾರ್ಥಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ಜೊಳದಾಪಕೆ, ಎ.ಪಿ.ಎಂ.ಸಿ. ಸದಸ್ಯ ನೀಲಕಂಠ ಸಾವಳಗಿ, ಗ್ರಾ.ಪಂ. ಉಪಾಧ್ಯಕ್ಷ ಅಂಬಾದಾಸ ಜಾಲಿ, ಸದಸ್ಯರಾದ ರತನಸಿಂಗ್, ರೇಖಾ, ಪ್ರಮುಖರಾದ ರಮೇಶ ಬಿರಾದಾರ, ಸಿಕಿಂದ್ರಾಪುರ ಪಿ.ಕೆ.ಪಿ.ಎಸ್. ಅಧ್ಯಕ್ಷ ದತ್ತಾತ್ರಿ ನಿಟ್ಟೂರೆ, ಸುನೀಲ ಸಾವಳಗಿ ಉಪಸ್ಥಿತರಿದ್ದರು.ಕನಕ ಯುವಸೇನೆಯ ಗ್ರಾಮ ಘಟಕದ ಅಧ್ಯಕ್ಷ ಲಕ್ಷ್ಮಣ ಗೋಗಡೆ ಸ್ವಾಗತಿಸಿದರು. ಗೋಪಾಲ ಕುಲಕರ್ಣಿ ನಿರೂಪಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಅಂಕ ಪಡೆಯಲು ಸ್ವಚ್ಛತಾ ಕಾರ್ಯದ ಕಸರತ್ತು

ಬೀದರ್‌
ಅಂಕ ಪಡೆಯಲು ಸ್ವಚ್ಛತಾ ಕಾರ್ಯದ ಕಸರತ್ತು

22 Jan, 2018
ಸಮಾನತೆಯಿಂದ ಬಲಿಷ್ಠ ಸಮಾಜ ನಿರ್ಮಾಣ

ಬೀದರ್
ಸಮಾನತೆಯಿಂದ ಬಲಿಷ್ಠ ಸಮಾಜ ನಿರ್ಮಾಣ

22 Jan, 2018
ನಿಟ್ಟೂರ (ಬಿ): ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ ಗರಿ

ಭಾಲ್ಕಿ
ನಿಟ್ಟೂರ (ಬಿ): ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ ಗರಿ

21 Jan, 2018
770 ಖ್ಯಾತನಾಮರ ಸೇರಿಸಲು ನಿರ್ಣಯ

ಬೀದರ್‌
770 ಖ್ಯಾತನಾಮರ ಸೇರಿಸಲು ನಿರ್ಣಯ

20 Jan, 2018
ಹಣ ಸಂಗ್ರಹಿಸಲು ನಾಲ್ವರು ಸಚಿವರ ನಿಯೋಜನೆ

ಬೀದರ್‌
ಹಣ ಸಂಗ್ರಹಿಸಲು ನಾಲ್ವರು ಸಚಿವರ ನಿಯೋಜನೆ

19 Jan, 2018