ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗುವಳಿದಾರರ ಬೇಡಿಕೆ ಈಡೇರಿಸಲು ಆಗ್ರಹ

Last Updated 1 ಡಿಸೆಂಬರ್ 2017, 7:32 IST
ಅಕ್ಷರ ಗಾತ್ರ

ಹಿರೇಕೆರೂರ: ತಾಲ್ಲೂಕಿನ ವರಹ ಮತ್ತು ಆಲದಗೇರಿ ಗ್ರಾಮದ ಅರಣ್ಯ ಭೂಮಿ ಹಾಗೂ ಬಗರ್ ಹುಕುಂ ಸಾಗುವಳಿದಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಉತ್ತರ ಕರ್ನಾಟಕ ಅನ್ನದಾತರ ಸೇನೆ ಸದಸ್ಯರು  ತಹಶೀಲ್ದಾರ್ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ದೀವಗೀಹಳ್ಳಿ ಮಾತನಾಡಿ, ತಾಲ್ಲೂಕಿನ ವರಹ ಗ್ರಾಮದ ಅರಣ್ಯ ಭೂಮಿ ಸಾಗುವಳಿದಾರರಿಗೆ ಸರ್ಕಾರ ಆದೇಶದಂತೆ ಈಗಾಗಲೇ ಜಿಪಿಎಸ್ ಸರ್ವೆ ಮಾಡಿಸಿ, ನಕ್ಷೆಯೂ ಕೂಡಾ ತಯಾರಾಗಿದೆ. 5 ತಿಂಗಳು ಕಳೆದರೂ ಜಿಲ್ಲಾ ಸಮಿತಿಗೆ ಈ ಕಾಗದ ಪತ್ರಗಳು ರವಾನಿಸಿಲ್ಲ ಎಂದರು.

ಆಲದಗೇರಿ ಗ್ರಾಮದ ಬಗರ್ ಹುಕುಂ ಸಾಗುವಳಿದಾರಿಗೆ ಸರ್ವೆ ಅಳತೆಯಲ್ಲಿ ಭಾರಿ ವ್ಯತ್ಯಾಸವಾಗಿದೆ. ಇದರ ಬಗ್ಗೆ ಅನೇಕ ಬಾರಿ ತಾಲ್ಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಈ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ ಹಕ್ಕು ಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.

ಮಹೇಶಪ್ಪ ಪುಟ್ಟಣ್ಣನವರ, ಮಂಜಯ್ಯ ಮಠದ, ಸಿದ್ದಪ್ಪ ನೂಲಗೇರಿ, ಹನುಮಂತಪ್ಪ ಸುಣಗಾರ, ಜಗದೀಶ ಕುಸಗೂರ, ಗುಡ್ಡಪ್ಪ ಈರಗಾರ, ಶಾರದಮ್ಮ ಮಠದ, ಪ್ರೇಮಿಲಮ್ಮ ಅರಾಧ್ಯಮಠದ ಹಾಗೂ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT