ಹೊಸದುರ್ಗ

ತಾಯಿ ನಾಡಿನ ಅಭಿಮಾನ ಸ್ವರ್ಗಕ್ಕಿಂತಲೂ ಶ್ರೇಷ್ಠ

ನೂರಾರು ಶ್ರೇಷ್ಠ ದಾರ್ಶನಿಕರಿಗೆ, ಸಾಹಿತಿಗಳಿಗೆ, ವಚನಕಾರರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಜನ್ಮ ನೀಡಿದ ಪವಿತ್ರ ಭೂಮಿ ಕನ್ನಡ ನಾಡಾಗಿದೆ.

ಹೊಸದುರ್ಗದಲ್ಲಿ ಗುರುವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಬಿಲ್ಲಪ್ಪ ಮಾತನಾಡಿದರು.

ಹೊಸದುರ್ಗ: ತಾಯಿ ನಾಡಿನ ಅಭಿಮಾನ ಸ್ವರ್ಗಕ್ಕಿಂತಲೂ ಶ್ರೇಷ್ಠ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಬಿಲ್ಲಪ್ಪ ತಿಳಿಸಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಪಟ್ಟಣದ ವಾಣಿವಿಲಾಸ ಸಂಯುಕ್ತ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ 62ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ನೂರಾರು ಶ್ರೇಷ್ಠ ದಾರ್ಶನಿಕರಿಗೆ, ಸಾಹಿತಿಗಳಿಗೆ, ವಚನಕಾರರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಜನ್ಮ ನೀಡಿದ ಪವಿತ್ರ ಭೂಮಿ ಕನ್ನಡ ನಾಡಾಗಿದೆ. ಇಲ್ಲಿ ಅನೇಕ ನದಿಗಳು ಹುಟ್ಟಿ ಹರಿಯುತ್ತಿವೆ. ಜಾನಪದ, ಶಿಲ್ಪಕಲೆ, ಸಂಗೀತ, ಸಾಹಿತ್ಯದಿಂದ ಕೂಡಿದ ಸಂಪತ್‌ ಭರಿತವಾದ ಪ್ರದೇಶ ನಮ್ಮದಾಗಿದೆ. ಜೀವನದಲ್ಲಿ ಒಮ್ಮೆ ನಾಡಿನ ಉದ್ದಗಲಕ್ಕೂ ಸಂಚರಿಸಿ ಅದರ ಸವಿ ಸವಿಯಬೇಕು. ಕನ್ನಡ ಭಾಷೆಯನ್ನು ನಿರ್ಲಕ್ಷಿಸದೇ ನಿತ್ಯ ಮನೆ, ಮನಗಳಲ್ಲಿ ಮಾತನಾಡುತ್ತಿರಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಬಿ.ಜಿ.ವೆಂಕಟೇಶ್‌, ಮಾನಸಿಕ ಆರೋಗ್ಯ ವಿಷಯ ಕುರಿತು ಉಪನ್ಯಾಸ ನೀಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮೆಂಗಸಂದ್ರ ಧನಂಜಯ, ನಿಕಟಪೂರ್ವ ಅಧ್ಯಕ್ಷ ಎಂ.ಬಿ.ತಿಪ್ಪೇಸ್ವಾಮಿ, ಸಾಹಿತಿ ಮೈಲಾರಪ್ಪ ಮಾತನಾಡಿದರು.

ರಾಘವೇಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ರಮೇಶ್‌ಸಿಂಗ್‌ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಸಬೀನಾಬಾನು, ಪೀಲಾಪುರ ಕಂಠೇಶ್‌, ಕನಕ ನೌಕರರ ಸಂಘದ ಅಧ್ಯಕ್ಷ ಎಂ.ಶಶಿಧರ್‌ ಅವರನ್ನು ಸನ್ಮಾನಿಸಲಾಯಿತು.

ಮುಖ್ಯಶಿಕ್ಷಕ ರಂಗಸ್ವಾಮಿ, ನಿವೃತ್ತ ಕಸಾಪ ಗೌರವ ಕಾರ್ಯದರರ್ಶಿ ಗುರುಮೂರ್ತಿ, ಕೋಶಾಧ್ಯಕ್ಷ ರುದ್ರಸ್ವಾಮಿ, ವೀರಭದ್ರಪ್ಪ, ಬಿ.ವಿ.ಲವಕುಮಾರ್‌, ಚಂದ್ರಶೇಖರ್‌, ಇಸ್ಮಾಯಿಲ್‌ ಜಬೀಉಲ್ಲಾ ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಒಣಗುತ್ತಿರುವ ತೆಂಗು, ಅಡಿಕೆ

ಹಿರಿಯೂರು
ಒಣಗುತ್ತಿರುವ ತೆಂಗು, ಅಡಿಕೆ

21 Apr, 2018
ಕೊಡ ನೀರಿಗೆ ಕಿಲೋಮೀಟರ್ ಅಲೆದಾಟ

ಚಿತ್ರದುರ್ಗ
ಕೊಡ ನೀರಿಗೆ ಕಿಲೋಮೀಟರ್ ಅಲೆದಾಟ

21 Apr, 2018

  ಚಿತ್ರದುರ್ಗ
ಜಿಲ್ಲೆಯಲ್ಲಿ 12 ನಾಮಪತ್ರ ಸಲ್ಲಿಕೆ

ರಾಜ್ಯ ವಿಧಾನಸಭಾ ಚುನಾವಣೆಗೆ ಶುಕ್ರವಾರ ಜಿಲ್ಲೆಯಲ್ಲಿ 12 ನಾಮಪತ್ರ ಸಲ್ಲಿಕೆಯಾಗಿವೆ.

21 Apr, 2018
ಶಾಸಕ ರಘುಮೂರ್ತಿ ನಾಮಪತ್ರ ಸಲ್ಲಿಕೆ

ಚಳ್ಳಕೆರೆ
ಶಾಸಕ ರಘುಮೂರ್ತಿ ನಾಮಪತ್ರ ಸಲ್ಲಿಕೆ

21 Apr, 2018

ಚಿತ್ರದುರ್ಗ
ಸವಾಲಿನ ಬೆನ್ನುಹತ್ತಿ ಜೀವತೆತ್ತ ಯುವಕ

ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಹಿರಿಯೂರಿನಿಂದ ಚಿತ್ರದುರ್ಗ ವ್ಯಾಪ್ತಿಯಲ್ಲಿ, ಹೆದ್ದಾರಿ ಪೊಲೀಸರೇ ಗುರುತಿಸಿರುವಂತೆ ಬುರುಜಿನರೊಪ್ಪ ದೇವಸ್ಥಾನ, ಬೂತಪ್ಪನಗುಡಿ ಹಾಗೂ ಗಿಡ್ಡೋಬನಹಳ್ಳಿ ಅಪಘಾತವಲಯಗಳಿವೆ. ಅಲ್ಲಿ ಪದೇ ಪದೇ...

21 Apr, 2018