ಹುಬ್ಬಳ್ಳಿ

ಸಿದ್ಧಾರೂಢ ಮಠಕ್ಕೆ ನಟಿ ಕಾಜೋಲ್‌ ಭೇಟಿ

‘ರಾಜ್ಯಕ್ಕೆ ಬಂದಾಗಲೆಲ್ಲ ಕಾಜೋಲ್‌ ಮಠಕ್ಕೆ ಬಂದು ಸಿದ್ಧಾರೂಢರ ಆಶೀರ್ವಾದ ಪಡೆಯುತ್ತಾರೆ. ಬಾಲಕಿಯಾಗಿದ್ದಾಗೊಮ್ಮೆ ಬಂದಿದ್ದ ಕಾಜೋಲ್, ಐದು ವರ್ಷಗಳ ಹಿಂದೆಯೂ ಮಠಕ್ಕೆ ಭೇಟಿ ನೀಡಿದ್ದರು’

ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಗುರುವಾರ ಸಿದ್ಧಾರೂಢರ ಮೂರ್ತಿಗೆ ಕುಟುಂಬ ಸಮೇತ ಪೂಜೆ ಸಲ್ಲಿಸಿದ ನಟಿ ಕಾಜೋಲ್

ಹುಬ್ಬಳ್ಳಿ: ಬಾಲಿವುಡ್‌ ನಟಿ ಕಾಜೋಲ್‌ ದೇವಗನ್‌ ಗುರುವಾರ ಕುಟುಂಬ ಸಮೇತರಾಗಿ ಇಲ್ಲಿನ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ತಾಯಿ ತನುಜಾ, ತಂಗಿ ತನಿಶಾ ಮುಖರ್ಜಿ, ಪುತ್ರ ಯುಗ್‌ ಸಮೇತ ಮಠಕ್ಕೆ ಬಂದ ಕಾಜೋಲ್‌, ಸಿದ್ಧಾರೂಢರು ಹಾಗೂ ಗುರುನಾಥಾರೂಢರ ಮೂರ್ತಿಗೆ ಅಭಿಷೇಕ ಮಾಡಿಸಿದರು.

‘ರಾಜ್ಯಕ್ಕೆ ಬಂದಾಗಲೆಲ್ಲ ಕಾಜೋಲ್‌ ಮಠಕ್ಕೆ ಬಂದು ಸಿದ್ಧಾರೂಢರ ಆಶೀರ್ವಾದ ಪಡೆಯುತ್ತಾರೆ. ಬಾಲಕಿಯಾಗಿದ್ದಾಗೊಮ್ಮೆ ಬಂದಿದ್ದ ಕಾಜೋಲ್, ಐದು ವರ್ಷಗಳ ಹಿಂದೆಯೂ ಮಠಕ್ಕೆ ಭೇಟಿ ನೀಡಿದ್ದರು’ ಎಂದು ಮಠದ ಟ್ರಸ್ಟ್‌ ಕಮಿಟಿ ಧರ್ಮದರ್ಶಿ ನಾರಾಯಣ ಪ್ರಸಾದ ಪಾಠಕ್‌ ತಿಳಿಸಿದರು. ಕಾಜೋಲ್‌ ನೋಡಲು ಅಭಿಮಾನಿಗಳು ಮುಗಿಬಿದ್ದರು. ಮಾಧ್ಯಮದವರೊಂದಿಗೆ ಮಾತನಾಡಲು ಅವರು ನಿರಾಕರಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

ಧಾರವಾಡ
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

22 Jan, 2018
ಕೈಬರಹದ ಮೂಲಕ ಹಿರಿಯರ ನೆನಪು!

ಧಾರವಾಡ
ಕೈಬರಹದ ಮೂಲಕ ಹಿರಿಯರ ನೆನಪು!

20 Jan, 2018
ಚೆಕ್‌ಡ್ಯಾಂ ನಿರ್ಮಾಣ: ಮಾತಿನ ಚಕಮಕಿ

ಧಾರವಾಡ
ಚೆಕ್‌ಡ್ಯಾಂ ನಿರ್ಮಾಣ: ಮಾತಿನ ಚಕಮಕಿ

19 Jan, 2018

ಧಾರವಾಡ
ಕುಟೀರ ತೆರವು ವಿರೋಧಿಸಿ ಪ್ರತಿಭಟನೆ

ತೆರವುಗೊಳಿಸುವ ವೇಳೆ ಕುಟೀರಗಳಲ್ಲಿದ್ದ ಸಾಮಗ್ರಿಗಳನ್ನೂ ಪಾಲಿಕೆ ಸಿಬ್ಬಂದಿಯೇ ತೆಗೆದುಕೊಂಡು ಹೋಗುವ ಮೂಲಕ ನೋವುಂಟು ಮಾಡಿದ್ದಾರೆ.

19 Jan, 2018
ಕುತೂಹಲ ಕೇಂದ್ರವಾದ ಇಂದಿರಾ ಕ್ಯಾಂಟೀನ್‌ ಕಾಮಗಾರಿ

ಧಾರವಾಡ
ಕುತೂಹಲ ಕೇಂದ್ರವಾದ ಇಂದಿರಾ ಕ್ಯಾಂಟೀನ್‌ ಕಾಮಗಾರಿ

18 Jan, 2018