ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರನ್ನೂ ಅಪ್ಪಿಕೊಳ್ಳುವ ಹಿಂದುತ್ವ: ಅಡ್ವಾಣಿ

Last Updated 2 ಡಿಸೆಂಬರ್ 2017, 5:03 IST
ಅಕ್ಷರ ಗಾತ್ರ

ಮೈಸೂರು: ‘ಸನಾತನ ಹಿಂದೂ ಧರ್ಮವು ಎಲ್ಲ ಧರ್ಮಗಳನ್ನೂ ಅಪ್ಪಿಕೊಳ್ಳುವ ಗುಣ ಹೊಂದಿದೆ’ ಎಂದು ಸಂಸದ ಎಲ್.ಕೆ.ಅಡ್ವಾಣಿ ಪ್ರತಿಪಾದಿಸಿದರು. ಅವಧೂತ ದತ್ತಪೀಠದಲ್ಲಿರುವ ಹನುಮಂತ ಮೂರ್ತಿಗೆ ಅಳವಡಿಸಿರುವ 3ಡಿ ಪ್ರೊಜೆಕ್ಷನ್‌ ಮ್ಯಾಪಿಂಗ್‌ ತಂತ್ರಜ್ಞಾನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಹಿಂದೂ ಧರ್ಮ ಉದಾರ ಗುಣವನ್ನು ಹೊಂದಿದೆ. ವಿಶ್ವದ ಯಾವುದೇ ಧರ್ಮಗಳಿಗೂ ಈ ಗುಣವಿಲ್ಲ. ಇತರ ಎಲ್ಲ ಧರ್ಮಗಳನ್ನು ಇದು ಕೇವಲ ಅಪ್ಪಿಕೊಳ್ಳುವುದಿಲ್ಲ; ಬದಲಿಗೆ ಇತರ ಧರ್ಮಗಳಲ್ಲಿನ ಒಳ್ಳೆಯ ಗುಣವನ್ನು ಅಳವಡಿಸಿಕೊಳ್ಳುತ್ತದೆ. ಸಹಿಷ್ಣುತೆಯೇ ಹಿಂದುತ್ವ ಎಂದು ಹೇಳಿದರು.

ದತ್ತಪೀಠದ ಹನುಮಂತನ ಮೂರ್ತಿಗೆ ನವೀನ ತಂತ್ರಜ್ಞಾನ ಅಳವಡಿಸಿ ಧರ್ಮಪ್ರಚಾರ ಮಾಡುತ್ತಿರುವುದು ಶ್ಲಾಘನೀಯ ಸಂಗತಿ. ಯುವಕರಿಗೆ ಇದು ಮಾದರಿಯಾಗಬೇಕು. ವಿಜ್ಞಾನವನ್ನು ಧರ್ಮಕಾರ್ಯಗಳಿಗೆ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ದತ್ತ‍ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT