ಮೈಸೂರು

ಮಳೆ, ಚಳಿಗೆ ನಡುಗಿದ ಮೈಸೂರಿನ ಜನ

ಮೋಡ ಕವಿದ ವಾತಾವರಣ ಇದ್ದುದರಿಂದ ಸೂರ್ಯನ ದರ್ಶನವಾಗಿದ್ದು ಅಪರೂಪ. ಇನ್ನೂ ನಾಲ್ಕು ದಿನ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ

ಮೈಸೂರಿನಲ್ಲಿ ಶುಕ್ರವಾರ ಸುರಿಯುತ್ತಿದ್ದ ಜಿಟಿಜಿಟಿ ಮಳೆಯ ನಡುವೆ ವ್ಯಾಪಾರಿಯೊಬ್ಬರು ಬೇಯಿಸಿದ ಬಿಸಿಬಿಸಿ ಕಡಲೆಕಾಯಿಯನ್ನು ವ್ಯಾಪಾರ ಮಾಡುತ್ತಿದ್ದರು. ಇವರ ಮುಂದೆ ಯುವತಿಯೊಬ್ಬರು ಛತ್ರಿ ಹಿಡಿದು ಸಾಗಿದರು

ಮೈಸೂರು: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ‘ಒಖಿ’ ಚಂಡಮಾರುತದ ಪ್ರಭಾವ ಸಾಂಸ್ಕೃತಿಕ ನಗರಿಗೂ ತಟ್ಟಿದೆ. ಶುಕ್ರವಾರ ಇಡೀ ದಿನ ಜಿಟಿಜಿಟಿ ಮಳೆಯಾಗಿದೆ. ವೇಗವಾಗಿ ಬೀಸುವ ಗಾಳಿಗೆ ಚಳಿಯೂ ಹೆಚ್ಚಾಯಿತು. ಮೋಡ ಕವಿದ ವಾತಾವರಣ ಇದ್ದುದರಿಂದ ಸೂರ್ಯನ ದರ್ಶನವಾಗಿದ್ದು ಅಪರೂಪ. ಇನ್ನೂ ನಾಲ್ಕು ದಿನ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗುರುವಾರ ಸಂಜೆ ತುಂತುರು ಮಳೆಯಾಗಿತ್ತು. ಆದರೆ, ರಾತ್ರಿಯಿಂದ ಮಳೆ ಸ್ವಲ್ಪ ಬಿರುಸುಗೊಂಡಿತು. ಇದರಿಂದ ರಸ್ತೆಯಲ್ಲಿ ನೀರು ಹರಿಯಿತು. ಶುಕ್ರವಾರ ಬೆಳಿಗ್ಗೆ ಜನರು ಹಾಸಿಗೆಯಿಂದ ಮೇಲೇಳುತ್ತಿದ್ದಂತೆ ವಾತಾವರಣ ಸಂಪೂರ್ಣ ಬದಲಾಗಿತ್ತು.

ಅಕಾಲಿಕವಾಗಿ ಸುರಿದ ಮಳೆಯು ಭತ್ತ ಮತ್ತು ರಾಗಿ ಕೊಯ್ಲಿಗೆ ಅಡ್ಡಿಯಾಯಿತು. ಬೆಳೆದು ನಿಂತ ಪೈರನ್ನು ಅನೇಕರು ಕೊಯ್ಲು ಮಾಡುತ್ತಿದ್ದರು. ಮೊಡ ಕವಿದ ವಾತಾವರಣವಿದ್ದರೂ ಮಳೆ ಬರುವ ಸಾಧ್ಯತೆ ಕಡಿಮೆ ಎಂದು ರೈತರು ಅಂದಾಜಿಸಿದ್ದರು. ಆದರೆ, ಏಕಾಏಕಿ ಧರೆಗೆ ಇಳಿದ ವರುಣ ರೈತರಿಗೆ ಸಂಕಷ್ಟ ತಂದೊಡ್ಡಿತು. ಮಳೆಯೊಂದಿಗೆ ಬೀಸುವ ಬಿರು ಗಾಳಿಯು ಚಳಿಯನ್ನು ಹೆಚ್ಚಿಸಿದೆ. ಮೈನಡುಗುವ ಚಳಿಯಲ್ಲಿ ಮನೆಯಿಂದ ಹೊರಗೆ ಬರಲು ಅನೇಕರು ಹಿಂದೇಟು ಹಾಕಿದರು.

Comments
ಈ ವಿಭಾಗದಿಂದ ಇನ್ನಷ್ಟು
ಅತ್ಯಾಧುನಿಕ ಆಸ್ಪತ್ರೆ ಶೀಘ್ರ: ಶರಣಪ್ರಕಾಶ್‌ ಪಾಟೀಲ

ಮೈಸೂರು
ಅತ್ಯಾಧುನಿಕ ಆಸ್ಪತ್ರೆ ಶೀಘ್ರ: ಶರಣಪ್ರಕಾಶ್‌ ಪಾಟೀಲ

19 Jan, 2018

ಪಿರಿಯಾಪಟ್ಟಣ
ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ

ಪ್ರಜ್ಞಾವಂತ, ವಿದ್ಯಾವಂತ ಮತದಾರರು ಹಣದ ಆಮೀಷಕ್ಕೆ ಒಳಗಾಗದೆ ಸ್ವಾಭಿಮಾನದಿಂದ ಹಕ್ಕು ಚಲಾಯಿಸಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು

19 Jan, 2018
ಕೊಲ್ಲಾಪುರಕ್ಕೆ ಒಲಿದ ‘ಸುತ್ತೂರು ಕೇಸರಿ’

ನಂಜನಗೂಡು
ಕೊಲ್ಲಾಪುರಕ್ಕೆ ಒಲಿದ ‘ಸುತ್ತೂರು ಕೇಸರಿ’

18 Jan, 2018
ಕೋಟೆ ನಾಡಿನಲ್ಲಿ ಟಿಕೆಟ್‌ಗೆ ಭಾರಿ ಪೈಪೋಟಿ

ಮೈಸೂರು
ಕೋಟೆ ನಾಡಿನಲ್ಲಿ ಟಿಕೆಟ್‌ಗೆ ಭಾರಿ ಪೈಪೋಟಿ

18 Jan, 2018
₹ 18 ಸಾವಿರ ಮಾಸಿಕ ವೇತನಕ್ಕೆ ಒತ್ತಾಯ

ಮೈಸೂರು
₹ 18 ಸಾವಿರ ಮಾಸಿಕ ವೇತನಕ್ಕೆ ಒತ್ತಾಯ

18 Jan, 2018