ರಾಯಚೂರು

ಎಚ್ಐವಿ, ಏಡ್ಸ್ ಜಾಗೃತಿ ಅವಶ್ಯ

ರಾಯಚೂರು ಜಿಲ್ಲೆಯು 8ನೇ ಸ್ಥಾನದಲ್ಲಿದೆ. ಎಚ್ಐವಿಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ

ರಾಯಚೂರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಶ್ವ ಏಡ್ಸ್‌ ದಿನಾಚರಣೆ ನಿಮಿತ್ತ ಶುಕ್ರವಾರ ಆಯೋಜಿಸಲಾಗಿದ್ದ ಜಾಗೃತಿ ಜಾಥಾಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ನ್ಯಾ. ಬೈಲೂರು ಶಂಕರ ರಾಮ ಮತ್ತು 1ನೇ ಹೆಚ್ಚುವರಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾ. ಎಂ. ಮಹಾದೇವಯ್ಯ ಅವರು ಜಾಥಾಗೆ ನೀಡಿದರು

ರಾಯಚೂರು: ಜಿಲ್ಲೆಯಲ್ಲಿ ಪ್ರತಿ ವರ್ಷ ಎಚ್ಐವಿ, ಏಡ್ಸ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಎಚ್ಐವಿ ಸೋಂಕಿನ ಪ್ರಮಾಣ ಸೊನ್ನೆಗೆ ತರುವ ಕಾರ್ಯ ಆಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಕೆ.ಎಸ್ ನಸೀರ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ನಡೆದ ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತ ‘ನನ್ನ ಆರೋಗ್ಯ ನನ್ನ ಹಕ್ಕು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನಸಾಮಾನ್ಯರಲ್ಲಿ ಆಂತರಿಕ ಸಂವಹನ ಏರ್ಪಡಿಸಬೇಕು. ಗರ್ಭಿಣಿಯರ ಮನೆಗಳಿಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಎಚ್ಐವಿ ಸೋಂಕಿನ ಬಗ್ಗೆ ಅರಿವು ಮೂಡಿಸಬೇಕು. ಇದರಿಂದ ಮಾತ್ರ ಎಚ್ಐವಿ ಸೋಂಕು ಹರಡದಂತೆ ತಡೆಗಟ್ಟಬಹುದು ಎಂದು ತಿಳಿಸಿದರು.

ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸುರೇಂದ್ರಬಾಬು ಮಾತನಾಡಿ, ‘2010-11 ಕ್ಕೆ ಹೋಲಿಸಿದರೆ 2017–18 ರಲ್ಲಿ ಎಚ್ಐವಿ ಪರೀಕ್ಷೆಗೆ ಒಳಪಡಿಸಿದವರಲ್ಲಿ ಗಣನೀಯವಾಗಿ ಹೆಚ್ಚಳ ಕಂಡು ಬಂದಿದೆ. ಎಚ್ಐವಿ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ’ ಎಂದು ಅವರು ತಿಳಿಸಿದರು.

ರಾಯಚೂರು ಜಿಲ್ಲೆಯು 8ನೇ ಸ್ಥಾನದಲ್ಲಿದೆ. ಎಚ್ಐವಿಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು. ಖ್ಯಾತ ಮಾನಸಿಕ ತಜ್ಞ ಮನೋಹರ ವೈ.ಪತ್ತಾರ ಮಾತನಾಡಿ, ಏಡ್ಸ್ ಸೋಂಕಿತ ವ್ಯಕ್ತಿಗಳು ಎದೆಗುಂದದೇ ಚಿಕಿತ್ಸೆ ಪಡೆದುಕೊಳ್ಳಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಬೇಕು. ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದರು.

ಎಆರ್‌ಟಿ ಕೇಂದ್ರದ ನೋಡಲ್ ಅಧಿಕಾರಿ ಡಾ. ರಾಜಶೇಖರ ಎಂ.ಡಿ., ಆಪ್ತಮಿತ್ರ ಅಧ್ಯಕ್ಷ ಮೌಲಾಲಿ, ಆಶಾ ಕಾರ್ಯಕರ್ತೆಯರು, ಇಲಾಖೆ ಸಿಬ್ಬಂದಿಗಳು, ಎನ್‌ಜಿಓ ಸಂಘಟನೆಗಳು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಇದ್ದರು.

ಜಾಗೃತಿ ಜಾಥಾ: ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿವರೆಗೂ ಜನಜಾಗೃತಿ ಜಾಥಾ ನಡೆಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಬೈಲೂರು ಶಂಕರ ರಾಮ ಮತ್ತು 1ನೇ ಹೆಚ್ಚುವರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ. ಮಹಾದೇವಯ್ಯ ಅವರು ಜಾಥಾಗೆ ಹಸಿರು ನಿಶಾನೆ ತೋರಿಸಿದರು.

ಜಾಥಾದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕ, ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾ ನ್ಯಾಯವಾದಿಗಳ ಸಂಘ,

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಿಮ್ಸ್ ಆಸ್ಪತ್ರೆ, ನವೋದಯಾ ಆಸ್ಪತ್ರೆ, ಎನ್‌ಎಸ್ಎಸ್, ಎನ್‌ಸಿಸಿ, ಎಫ್‌ಪಿಎಐ, ರೆಡ್ ರಿಬ್ಬನ್ ಕ್ಲಬ್, ಲಯನ್ಸ್ ಕ್ಲಬ್, ಕೃಷಿ ಮಹಾವಿದ್ಯಾಲಯ,

ನಂದಿನಿ ನರ್ಸಿಂಗ್ ಕಾಲೇಜ್, ರೆಡ್ ಕ್ರಾಸ್ ಸಂಸ್ಥೆ, ಹೊಸ ಬೆಳಕು, ಸಂರಕ್ಷ, ಆಪ್ತಮಿತ್ರ, ಬೆಳದಿಂಗಳು ಮಹಿಳಾ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

* * 

ಎಚ್‌ಐವಿ ಸೋಂಕಿತರು ತೆರೆಮರೆಯಲ್ಲಿ ಇರಬಾರದು. ಮೌನ ಮುರಿದು ಮಾತನಾಡಬೇಕು. ತಮ್ಮ ಆರೋಗ್ಯದ ಹಕ್ಕನ್ನು ಕಾಯ್ದುಕೊಳ್ಳಬೇಕು.
ಡಾ.ಸುರೇಂದ್ರಬಾಬು
ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ

Comments
ಈ ವಿಭಾಗದಿಂದ ಇನ್ನಷ್ಟು
‘ಸಾಹಿತ್ಯದಲ್ಲಿ ಹೊಸ ಪರಂಪರೆ ಸೃಷ್ಟಿ’

ಮಾನ್ವಿ
‘ಸಾಹಿತ್ಯದಲ್ಲಿ ಹೊಸ ಪರಂಪರೆ ಸೃಷ್ಟಿ’

21 Jan, 2018
ಸಮ್ಮೇಳನದಿಂದ ಸಮಾಜ ಕಟ್ಟುವ ಕೆಲಸ

ರಾಯಚೂರು
ಸಮ್ಮೇಳನದಿಂದ ಸಮಾಜ ಕಟ್ಟುವ ಕೆಲಸ

20 Jan, 2018

ಮಸ್ಕಿ
ತೊಗರಿ ಖರೀದಿ ಕೇಂದ್ರ ಆರಂಭ

ತೊಗರಿ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದ್ದು ಸಹಕಾರಿ ಪತ್ತಿನ ಸಹಕಾರಿ ಬ್ಯಾಂಕ್ ಮೂಲಕ ಸರ್ಕಾರ ಖರೀದಿಗೆ ಮುಂದಾಗಿದೆ

20 Jan, 2018
ಅಕ್ಷರ ಜಾತ್ರೆಗೆ ಪೋತ್ನಾಳ ಸಜ್ಜು

ಮಾನ್ವಿ
ಅಕ್ಷರ ಜಾತ್ರೆಗೆ ಪೋತ್ನಾಳ ಸಜ್ಜು

19 Jan, 2018
ಅಂಗನವಾಡಿ,ಆಶಾ ಕಾರ್ಯಕರ್ತೆಯರ ಪ್ರತಿಭಟನಾ ರ‍್ಯಾಲಿ

ರಾಯಚೂರು
ಅಂಗನವಾಡಿ,ಆಶಾ ಕಾರ್ಯಕರ್ತೆಯರ ಪ್ರತಿಭಟನಾ ರ‍್ಯಾಲಿ

18 Jan, 2018